×
Ad

ಉಡುಪಿ | ತನುಶ್ರೀಯ ‘ತನು ಯೋಗ ಭೂಮಿ’ ಹೊಸ ವಿಶ್ವದಾಖಲೆ

Update: 2026-01-27 18:52 IST

ಉಡುಪಿ, ಜ.27: ದಶ ವಿಶ್ವದಾಖಲೆಗಳ ಸರದಾರಿಣಿ ಉಡುಪಿಯ ಯೋಗಬಾಲೆ ತನುಶ್ರೀ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ತನುಶ್ರೀ ಪಿತ್ರೋಡಿ ಯೋಗಾಸನ ಮತ್ತು ದೇಶ ಭಕ್ತಿ ಸಾರುವ ತನುಯೋಗ ಭೂಮಿ ಕಾರ್ಯಕ್ರಮ ರಾಜ್ಯದ ಸುಮಾರು 155 ಶಾಲೆಗಳ 52051 ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ. ಈ ಕಾರ್ಯಕ್ರಮ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ದಾಖಲಾಗಿದ್ದು ಅದರ ಪ್ರಮಾಣಪತ್ರ ಸ್ವೀಕಾರ ಸಮಾರಂಭ ಸೋಮವಾರ ಉಡುಪಿಯ ಪುರಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ತನು ಯೋಗ ಭೂಮಿ ನಿರ್ದೇಶಕ ನಾಗರಾಜ್ ವರ್ಕಾಡಿ, ಯೋಗ ಸಾಧಕ ರಾಜೇಂದ್ರ ಚಕ್ಕೇರಾ, ಮಂಜುಶ್ರೀ ಅನೂಪ್ ಪೂಜಾರಿ, ಮಾಜಿ ಯೋಧ ಶ್ರೀನಿವಾಸ್ ಭಟ್ ಅವರನ್ನು ಸನ್ಮಾನಿಸ ಲಾಯಿತು.

ವೇದಿಕೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಇಂದ್ರಾಳಿ ಜಯಕರ್ ಶೆಟ್ಟಿ, ಹರೀಶ್ ಆರ್., ಪುರುಷೋತ್ತಮ ಶೆಟ್ಟಿ, ತಲ್ಲೂರು ಶಿವರಾಮ್ ಶೆಟ್ಟಿ, ಗೀತಾಂಜಲಿ ಸುವರ್ಣ, ರಾಮಕೃಷ್ಣ ಕೊಡಂಚ, ಉಮೇಶ್, ಸೈಂಟ್ ಸಿಸಿಲೀಸ್ ಶಾಲೆಯ ಸಿಸ್ಟರ್ ಪ್ರೀತಿ ಕಾಸ್ತಾ, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಸಂಧ್ಯಾ ಉದಯ್ ದಂಪತಿ ಮೊದಲಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ತನು ಯೋಗ ಭೂಮಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನ ತೀರ್ಪುಗಾರ ಹರೀಶ್ ಆರ್. ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು. ಈ ಕಾರ್ಯಕ್ರಮ ವನ್ನು ಹುತಾತ್ಮಯೋಧ ಅನೂಪ್ ಪೂಜಾರಿಯವರಿಗೆ ಸಮರ್ಪಿಸಲಾಯಿತು. ವಿಜೇತ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News