ಉಡುಪಿ: ಜಿಲ್ಲಾ ಕಾರಾಗೃಹದಲ್ಲಿ ಹೃದಯಾಘಾತದಿಂದ ವಿಚಾರಣಾಧೀನ ಕೈದಿ ಮೃತ್ಯು
Update: 2024-05-12 11:06 IST
ಉಡುಪಿ, ಮೇ 12: ವಿಚಾರಣಾಧೀನ ಕೈದಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿರುವುದು ವರದಿಯಾಗಿದೆ.
ಅನುಪ್ ಶೆಟ್ಟಿ (38) ಮೃತಪಟ್ಟ ವಿಚಾರಣಾಧೀನ ಕೈದಿ.
ಎದೆನೋವು ಕಾಣಿಸಿಕೊಂಡಿದ್ದರಿಂದ ಅನೂಪ್ ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಆತ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.
ಕುಂದಾಪುರದ ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ ಎಂಬವರ ಕೊಲೆ ಪ್ರಕರಣದ ಆರೋಪಿಯಾಗಿದ್ದ ಅನೂಪ್ ಶೆಟ್ಟಿ ಎರಡೂವರೆ ವರ್ಷಗಳಿಂದ ವಿಚಾರಾಧೀನ ಕೈದಿಯಾಗಿದ್ದರು.