×
Ad

Udupi | ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಕುರಿತು ಕಾರ್ಯಾಗಾರ

Update: 2026-06-08 18:24 IST

ಉಡುಪಿ : ಐಸಿಎಐ ಉಡುಪಿ ಶಾಖೆ ವತಿಯಿಂದ ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಷಯಗಳ ಕುರಿತು ಸಿಪಿಇ ಕಾರ್ಯಾಗಾರವನ್ನು ಶನಿವಾರ ಆಯೋಜಿಸಲಾಗಿತ್ತು.

ಸಹಕಾರ ಸಂಘಗಳ ಕಾಯ್ದೆಯಲ್ಲಿ ಇತ್ತೀಚೆಗೆ ನಡೆದ ತಿದ್ದುಪಡಿಗಳು, ಅವುಗಳ ಲೆಕ್ಕಪರಿಶೋಧನೆ ಹಾಗೂ ಲೆಕ್ಕಪರಿಶೋಧನಾ ವರದಿಗಳ ಮೇಲಿನ ಪರಿಣಾಮಗಳ ಕುರಿತು ಸಿಎ ಬಿ.ವಿ.ರವೀಂದ್ರನಾಥ್ ಸಾಗರ ಉಪನ್ಯಾಸ ನೀಡಿದರು. ಸಹಕಾರ ಸಂಘಗಳಿಗೆ ಅನ್ವಯವಾಗುವ ಜಿಎಸ್ಟಿ ಹಾಗೂ ಆದಾಯ ತೆರಿಗೆಗೆ ಸಂಬಂಧಿಸಿದ ಪ್ರಮುಖ ಅಂಶಗಳ ಕುರಿತು ಸಿಎ. ಅನಿಲ್ ಭಾರವಾಜ್ ಬೆಂಗಳೂರು ಮಾಹಿತಿ ನೀಡಿದರು.

ಸಂಸ್ಥೆಯ ಉಪಾಧ್ಯಕ್ಷ ಸಿಎ ಅಶ್ವತ್ ಜೆ.ಶೆಟ್ಟಿ, ಖಜಾಂಚಿ ಸಿಎ ಅರ್ಚನಾ ಆರ್. ಮಯ್ಯ, ಸದಸ್ಯರಾದ ಸಿಎ ಸೋನಿತ್ ಎಸ್.ಶೆಟ್ಟಿ ಉಪಸ್ಥಿತರಿದ್ದರು. ಶಾಖೆಯ ಅಧ್ಯಕ್ಷ ಸಿಎ ಎಂ.ರಾಘವೇಂದ್ರ ಮೊಗೆರಾಯ ಸ್ವಾಗತಿಸಿದರು. ಕಾರ್ಯದರ್ಶಿ ಸಿಎ ಕೆ.ಲಕ್ಷ್ಮೀಶ ರಾವ್ ಕಾರ್ಯಕ್ರಮವನ್ನು ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News