ಉಡುಪಿ ಜಯಂಟ್ಸ್ ನಿಂದ ವಿಶಿಷ್ಟ ಸೇವಾ ಚಟುವಟಿಕೆಗಳು
Update: 2023-09-28 17:48 IST
ಉಡುಪಿ: ಉಡುಪಿ ಜಯಂಟ್ಸ್ ವತಿಯಿಂದ ವಾರಗಳ ಕಾಲ ಹಮ್ಮಿಕೊಳ್ಳಲಾದ ಹಲವಾರು ಸೇವಾ ಚಟುವಟಿಕೆಗಳು ಬಹಳಷ್ಟು ಮೆಚ್ಚುಗೆಗೆ ಪಾತ್ರವಾಯಿತು.
ಎಂ.ಇಕ್ಬಾಲ್ ಮನ್ನಾ ನೇತೃತ್ವದಲ್ಲಿ ವಿವಿಧ ಅಂಗನವಾಡಿ, ಪ್ರಾಥಮಿಕ ಶಾಲೆ, ವಿಶೇಷಚೇತನರ ಶಾಲೆಗಳು ಹಾಗೂ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹಣ್ಣು-ಹಂಪಲುಗಳು, ಅನೇಕ ವೃದ್ಧಾಶ್ರಮಗಳಿಗೆ ಮಧ್ಯಾಹ್ನದ ಊಟ, ಇತ್ಯಾದಿಗಳನ್ನು ನೀಡಲಾಯಿತು.
ಈ ಸೇವಾ ಚಟುವಟಿಕೆಗಳಲ್ಲಿ ಜಯಂಟ್ಸ್ ಅಡಳಿತ ನಿರ್ದೇಶಕಿ ರೋಶನ್ ಬಲ್ಲಾಳ್. ಉಪಾಧ್ಯಕ್ಷರಾದ ಯಶವಂತ ಸಾಲಿ ಯಾನ್, ವಿನ್ಸೆಂಟ್ ಸಲ್ಡಾನಾ, ಜಂಟಿ ಆಡಳಿತ ನಿರ್ದೇಶಕ ವಾದಿರಾಜ್, ಕೋಶಾಧಿಕಾರಿ ಗಣೇಶ್ ಉರಾಳ್, ನಿರ್ದೇಶಕ ರಾದ ವಿನಯ್ ಕುಮಾರ್ ಪೂಜಾರಿ, ಜೀನತ್, ಪ್ರಭಾಕರ ಬಂಗೇರ, ಸಕ್ರಿಯ ಸದಸ್ಯರಾದ ರಾಜೇಶ್ ಶೆಟ್ಟಿ, ಜಗದೀಶ್ ಅಮೀನ್, ಗಣೇಶ್ ಶೆಟ್ಟಿಗಾರ್, ನವೀನ್ ಚಂದ್ರ, ರೇಖಾ ಪೈ, ಉಷಾ ಪೂಜಾರಿ, ರಮೇಶ್ ಪೂಜಾರಿ, ಬಿಂದು ಮತ್ತು ವಿವಿಧ ಸಮುದಾಯದ ಮುಖಂಡರು ಭಾಗವಹಿಸಿದ್ದರು.