‘ಪಿಯುಸಿ ನಂತರ ಮುಂದೇನು?’ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ
ಉಡುಪಿ, ಜು.23: ನಮ್ಮ ನಾಡ ಒಕ್ಕೂಟದ ಕಮ್ಯುನಿಟಿ ಸೆಂಟರ್ ಕುಂದಾಪುರ ಆಶ್ರಯದಲ್ಲಿ ವಿದ್ಯಾರ್ಥಿ ಗಳಿಗಾಗಿ ಸ್ಮರಣ ಶಕ್ತಿ, ಪರೀಕ್ಷೆ ಎದುರಿಸುವುದು ಹೇಗೆ? ಪಿಯುಸಿ ಆದ ನಂತರ ಮುಂದೇನು ಮಾಡ ಬೇಕು? ಹಾಗು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಗಂಗೊಳ್ಳಿ ತೌಹೀದ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗಂಗೊಳ್ಳಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಪವನ್ ನಾಯಕ್ ಮಾತನಾಡಿ, ಜ್ಞಾನ, ಕೌಶಲ್ಯ ಹಾಗು ಜೀವನ ಮೌಲ್ಯಗಳನ್ನು ಹೆಚ್ಚಿಸುವುದು ವಿದ್ಯಾಭ್ಯಾಸದ ಮೂಲ ಆಶಯ. ಆದರೆ ಕೆಲವೊಂದು ಕಾರಣದಿಂದಾಗಿ ಸಾರ್ವರ್ತಿಕ ಸಾಕ್ಷಾರತೇ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಒಕ್ಕೂಟದ ಘಟಕದ ಖಜಾಂಚಿ ಪೀರು ಸಾಹೇಬ್, ಕುವೈಟ್ ಘಟಕದ ಅಧ್ಯಕ್ಷ ಅಶ್ರಫ್ ಹಂಗಾರಕಟ್ಟೆ, ಉಡುಪಿ ಜಿಲ್ಲಾ ಸದ್ಯಸ್ಯ ಅಬ್ದುಲ್ ಖಾದರ್ ಮೂಡುಗೋಪಾಡಿ, ಹಾರೂನ್ ರಶೀದ್ ಸಾಸ್ತಾನ್, ಮನ್ಸೂರ್ ಇಬ್ರಾಹಿಂ ಅಕ್ರಮ್ ಉಡುಪಿ, ಕಾಲೇಜು ಮೆನೇಜರ್ ತಾಹಿರ್ ಹಾಸನ್, ಪ್ರಾಂಶುಪಾಲೆ ಸಮಿನಾ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಕಮ್ಯುನಿಟಿ ಸೆಂಟರ್‌ನ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ವಹಿಸಿದ್ದರು. ವಲಯ ತರಬೇತುದಾರ ಕೆ.ಕೆ.ಶಿವರಾಮ ತರಬೇತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಸ್ವಾಗತಿಸಿದರು. ಕಾಲೇಜು ಉಪನ್ಯಾಸಕಿ ಬಿಂದು ಕಾರ್ಯಕ್ರಮ ನಿರೂಪಿಸಿದರು. ತನುಜಾ ವಂದಿಸಿದರು.