ಮಹಿಳೆಗೆ ಆನ್‌ಲೈನ್ ವಂಚನೆ: ಪ್ರಕರಣ ದಾಖಲು
Update: 2025-08-25 20:50 IST
ಉಡುಪಿ, ಆ.25: ಮಹಿಳೆಯೊಬ್ಬರಿಗೆ ಸಾವಿರಾರು ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಹೀನ್ ಆಯೇಶಾ ಜಾಕೀರ್(27) ಎಂಬವರಿಗೆ ಆ.21ರಂದು ನೈಕಾ ಎಂಬ ಆನ್‌ಲೈನ್ ಶಾಪಿಂಗ್ ಕಂಪನಿ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತ, ನೀವು ಪಿನ್ ಕೋಡ್ ನಂಬರ್ ಸರಿಯಾಗಿ ನಮೂದಿಸದೇ ಇರುವುದರಿಂದ ನಿಮ್ಮ ಆರ್ಡರ್ ಸ್ಥಗಿತಗೊಂಡಿದೆ, ಅದನ್ನು ಚಾಲ್ತಿಗೊಳಿಸಬೇಕಾದರೆ ಹಣವನ್ನು ಪಾವತಿಸಬೇಕು, ನಂತರ ಆ ಹಣ ನಿಮಗೆ ಮರುಪಾವತಿ ಆಗುತ್ತದೆ ಎಂದು ಹೇಳಿದ್ದನು.
ಅದನ್ನು ನಂಬಿದ ಜಹೀನ್, ಅಪರಿಚಿತ ವ್ಯಕ್ತಿಯು ನೀಡಿದ ಬ್ಯಾಂಕ್ ಖಾತೆಗೆ 47,191ರೂ. ಹಣವನ್ನು ವರ್ಗಾವಣೆ ಮಾಡಿದ್ದು, ನಂತರ ಆರೋಪಿಯು ಜಹೀನ್‌ಗೆ ಯಾವುದೇ ಹಣವನ್ನು ಮರುಪಾವತಿ ಮಾಡದೇ ಆನ್ ಲೈನ್ ಮೂಲಕ ವಂಚನೆ ಮಾಡಿರುವುದಾಗಿ ದೂರಲಾಗಿದೆ.