×
Ad

ಯಕ್ಷ ಕಲಾವಿದ ಹೆರಂಜಾಲು ರಾಜೇಂದ್ರ ಗಾಣಿಗ ನಿಧನ

Update: 2023-09-21 19:22 IST

ಉಡುಪಿ, ಸೆ.21: ಎರಡೂವರೆ ದಶಕಗಳ ಕಾಲ ವಿವಿಧ ಮೇಳಗಳಲ್ಲಿ ವೇಷಧಾರಿಯಾಗಿ ಕಲಾಸೇವೆ ಮಾಡಿದ ಯುವ ಕಲಾವಿದ ಹೆರಂಜಾಲು ರಾಜೇಂದ್ರ ಗಾಣಿಗ (41) ಅಲ್ಪಕಾಲದ ಅಸೌಖ್ಯದಿಂದ ಇಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮಾರಣಕಟ್ಟೆ, ಹಾಲಾಡಿ, ಸೌಕೂರು, ನೀಲಾವರ ಮೇಳಗಳಲ್ಲಿ ಹಾಗೂ ಸುಮಾರು ಹತ್ತು ವರ್ಷಗಳ ಕಾಲ ಮಂದಾರ್ತಿ ಮೇಳದಲ್ಲಿ ಪುರುಷ ವೇಷಧಾರಿಯಾಗಿ ಇವರು ಕಲಾ ಸೇವೆ ಮಾಡಿದ್ದರು. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News