×
Ad

ಅಂತಾರಾಷ್ಟ್ರೀಯ ಟೆರ್ರೈನ್ ಬಿನಾಲೆ: ಯಕ್ಷ ಕಲಾಕೃತಿ ಪ್ರದರ್ಶನ

Update: 2025-10-12 20:48 IST

ಉಡುಪಿ: ಸಮಕಾಲೀನ ಕಲೆಯನ್ನು ಜನಸಾಮಾನ್ಯರೊಂದಿಗೆ ಬೆಸೆಯುವ ಪ್ರಯತ್ನದ ಶಿಕಾಗೋ ಅಂತಾರಾಷ್ಟ್ರೀಯ ಟೆರ್ರೈನ್ ಬಿನಾಲೆಯು ಅ.1ರಿಂದ ನ.15ರವರೆಗೆ ವಿಶ್ವದಾದ್ಯಂತ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಉಡುಪಿಯ ಕಾವಿ ಕಲಾವಿದ ಡಾ.ಜನಾರ್ದನ ಹಾವಂಜೆ, ಯಕ್ಷ ಕಲಾಕೃತಿಯು ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಅಮೆರಿಕಾ, ಡೆನ್ಮಾರ್ಕ್, ಜರ್ಮನಿ, ಗ್ರೀಸ್, ಇಟೆಲಿ ಮೊದಲಾದ ವಿಶ್ವದ ಸುಮಾರು 60ಕ್ಕೂ ಮಿಕ್ಕಿದ ಕಡೆಗಳಲ್ಲಿ 80ಕ್ಕೂ ಅಧಿಕ ಸಮಕಾಲೀನ ಕಲಾಕೃತಿಗಳು ಇದರ ಭಾಗವಾಗಿ ಪ್ರದರ್ಶನಗೊಳ್ಳುತ್ತಿದ್ದು ಭಾರತದ ಹತ್ತು ಕಡೆಗಳಲ್ಲಿನ ಕಲಾಕೃತಿಗಳು ಈ ಪ್ರದರ್ಶನಕ್ಕೆ ಆಯ್ಕೆಯಾಗಿವೆ ಎಂದು ಭಾರತದ ಕಲಾ ಪ್ರದರ್ಶನದ ಸಂಯೋಜಕಿ ಭಾಗ್ಯ ಅಜಯ್‌ಕುಮಾರ್ ತಿಳಿಸಿದ್ದಾರೆ.

ಹಾವಂಜೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಯಕ್ಷ ಮಿಶ್ರ ಮಾಧ್ಯಮದ ಕಲಾಕೃತಿಯು ಗ್ರಾಮೀಣ ಬದುಕನ್ನು ದರ್ಶಿಸುವ ಯಕ್ಷ ಕಲಾವಿದನೋರ್ವನ ಬದುಕನ್ನು ಸೆರೆಹಿಡಿದು ಪ್ರದರ್ಶನಗೊಳ್ಳುತ್ತಿದೆ. ನಿಜ ಜೀವನದ ಯಕ್ಷನನ್ನು ಬಿಂಬಿಸಿದ ಈ ಕಲಾಕೃತಿಯು ಕಾವಿ ಕಲೆಯ ಸಾಂಪ್ರದಾಯಿಕ ಸೊಗಡನ್ನು ದುಡಿಸಿಕೊಂಡು, ಗದ್ದೆಯ ಮಣ್ಣಿನ ಜೊತೆಗೆ ಕೆಮ್ಮಣ್ಣು, ಸುಣ್ಣ ಮಾತ್ರವಲ್ಲದೇ ಛಾಯಾಚಿತ್ರಗಳನ್ನೂ ಬಳಸಿಕೊಂಡುದು ಅದಕ್ಕೊಂದು ಸಮಕಾಲೀನ ಚೌಕಟ್ಟನ್ನು ನಿರ್ಮಿಸಿದೆ. ಹಳ್ಳಿಗರ ದೈನಂದಿನ ದಾಖಲಿಸಲ್ಪಡದ ಅಂಶಗಳನ್ನು ಮತ್ತು ಯಕ್ಷರಂಗದಲ್ಲಿ ಮಿಂಚುವ ವಿಜೃಂಭಣೆಯನ್ನು ಈ ಕಲಾಕೃತಿಯು ಪ್ರದರ್ಶಿಸುತ್ತದೆ ಎಂದು ಕಲಾವಿದ ಡಾ. ಜನಾರ್ದನ ಹಾವಂಜೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News