×
Ad

ಯಶವಂತಪುರ-ಮುರ್ಡೇಶ್ವರ ಸಾಪ್ತಾಹಿಕ ರೈಲಿನ ಸಂಚಾರ ಆಗಸ್ಟ್‌ವರೆಗೆ ವಿಸ್ತರಣೆ

Update: 2023-07-21 19:39 IST

ಸಾಂದರ್ಭಿಕ ಚಿತ್ರ

ಉಡುಪಿ, ಜು.21: ಯಶವಂತಪುರ (ಬೆಂಗಳೂರು) ಹಾಗೂ ಮುರ್ಡೇಶ್ವರ ನಡುವೆ ಸಂಚರಿಸುವ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ನೈಋತ್ಯ ರೈಲ್ವೆಯ ಸಹಯೋಗದೊಂದಿಗೆ ಆಗಸ್ಟ್ ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ನಂ.06563 ಯಶವಂತಪುರ-ಮುರ್ಡೇಶ್ವರ ಸಾಪ್ತಾಹಿಕ ವಿಶೇಷ ರೈಲು ಆ.5, 12, 19 ಹಾಗೂ 26ರ ಶನಿವಾರದಂದು ಯಶವಂತಪುರದಿಂದ ಪ್ರಯಾಣಿಸಲಿದೆ. ಅದೇ ರೀತಿ ರೈಲು ನಂ.06564 ಮುರ್ಡೇಶ್ವರ- ಯಶವಂತಪುರ ಸಾಪ್ತಾಹಿಕ ವಿಶೇಷ ರೈಲು ಆ.6, 13, 20 ಹಾಗೂ 27ರಂದು ಪ್ರತಿ ರವಿವಾರ ಮುರ್ಡೇಶ್ವರದಿಂದ ಪ್ರಯಾಣ ಬೆಳೆಸಲಿದೆ.

ಈ ರೈಲು ಎಂದಿನ ಸಮಯದಲ್ಲಿ ಸಂಚರಿಸಲಿದ್ದು, ಈ ಹಿಂದಿನ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ. ಹಿಂದಿನಂತೆಯೇ ಬೋಗಿಗಳನ್ನು ಇದು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News