×
Ad

ಭಟ್ಕಳ: ಪ್ರೊ. ಚಿದಾನಂದ ಗಣಪತಿ ನಾಯ್ಕ್ ಅವರಿಗೆ ಪಿ.ಎಚ್.ಡಿ. ಪದವಿ

Update: 2024-02-22 11:02 IST

ಭಟ್ಕಳ: ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಚಿದಾನಂದ ಗಣಪತಿ ನಾಯ್ಕ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯವು Geotechnical Engineering ವಿಭಾಗದಲ್ಲಿ “Evaluation of shear strength and dilatancy parameters of different granular materials" ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಸಿದ್ಧಪಡಿಸಿ ಸಲ್ಲಿಸಲಾದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಪ್ರದಾನ ಮಾಡಿದೆ.

ಪ್ರೊ. ಚಿದಾನಂದ ನಾಯ್ಕ್ ಅವರು ಡಾ. ಕೆ.ವಿ.ಬಿ.ಎಸ್ ರಾಜು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.

ಚಿದಾನಂದ ಅವರು ಕುಮಟಾ ತಾಲೂಕಿನ ಕಲಭಾಗ ಗ್ರಾಮದ ಗಣಪತಿ ಹೊನ್ನಪ್ಪ ನಾಯ್ಕ್ ಹಾಗೂ ಕುಮುದಾ ಗಣಪತಿ ನಾಯ್ಕ್ ದಂಪತಿಯ ಎರಡನೇ ಮಗನಾಗಿದ್ದಾರೆ.

ಚಿದಾನಂದ ಅವರ ಈ ಸಾಧನೆಯನ್ನು ಅಂಜುಮನ್ ಮ್ಯಾನೇಜ್ಮೆಂಟ್, ಪ್ರಾಂಶುಪಾಲರಾದ ಡಾ. ಫಝಲುರ್ರಹ್ಮಾನ್, ರಿಜಿಸ್ಟ್ರಾರ್ ಪ್ರೊ. ಜಾಹೀದ್ ಖರೂರಿ ಹಾಗೂ ಅಂಜುಮನ್ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News