×
Ad

ಭಟ್ಕಳ ನ್ಯೂ ಶಾಮ್ಸ್ ಶಾಲೆಯ ವಾರ್ಷಿಕೋತ್ಸವ: ರುಕಿಯಾ ಇಫ್ಲಾ ಅಸ್ಕೇರಿಗೆ 'ನಜ್ಮ್-ಇ-ಇಕ್ವಾನ್' ಚಿನ್ನದ ಪದಕ

Update: 2024-01-01 19:03 IST

ಭಟ್ಕಳ: ನ್ಯೂ ಶಮ್ಸ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ರವಿವಾರ ಭಟ್ಕಳದಲ್ಲಿ ಜಾಮಿಯಾ ಅಬಾದ್ ರಸ್ತೆಯ ಸೈಯದ್ ಅಲಿ ಕ್ಯಾಂಪಸ್‌ನಲ್ಲಿ ನಡೆಯಿತು.

"ನಜ್ಮ್-ಎ-ಇಕ್ವಾನ್" ಪ್ರಶಸ್ತಿ ಮತ್ತು ಚಿನ್ನದ ಪದಕವನ್ನು ಡಾ. ಮೊಹಮ್ಮದ್ ಯಾಹ್ಯಾ ಅಸ್ಕೇರಿಯವರ ಪುತ್ರಿ ರುಕಿಯಾ ಇಫ್ಲಾಹ್ ಅವರಿಗೆ ನೀಡಲಾಯಿತು.

ಮುಖ್ಯ ಅತಿಥಿಗಳಾದ ಜಮೀಯತಸ್ ಸಾಲಿಹಾತ್ ನ ಪ್ರಾಂಶುಪಾಲರಾದ ಜೀನತ್ ಅಬ್ದುಲ್ ಗನಿ ರುಕ್ನುದ್ದೀನ್, ಗೌರವ ಅತಿಥಿಗಳಾಗಿ ಭಟ್ಕಳದ ಅಂಜುಮನ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಫರ್ಜಾನಾ ಮೊಹ್ತೆಶಮ್, ನಜೀಫಾ ನಜೀರ್ ಅಹ್ಮದ್ ಖಾಜಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಸ್ಪರ್ಧೆ, ಕ್ರೀಡೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು.

ಅಮ್ನಾ ಅಬ್ದುಲ್ ಬಾಸಿತ್ ಅವರ ಪವಿತ್ರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಶಿಕ್ಷಕಿ ಜಬೀನ್ ಸ್ವಾಗತಿಸಿದರು ಮತ್ತು ರಾಹತ್ ಮೊಹ್ತೇಶಾಮ್ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮವನ್ನು ಅರ್ವಾ ಮೋಮಿನ್ ಮತ್ತು ಫೈಹಾ ಫಯಾಝ್ ಸಿದ್ದಿಬಾಪ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News