×
Ad

ಜಿಲ್ಲಾ ಮಟ್ಟದ ವಕೀಲರ ಕ್ರಿಕೆಟ್ ಪಂದ್ಯಾಟ ; ಶಿರಸಿ ವಕೀಲ ತಂಡಕ್ಕೆ ಗೆಲುವು

Update: 2024-02-19 18:13 IST

ಶಿರಸಿ: ಅಂಕೋಲೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ವಕೀಲರ ಕ್ರಿಕೇಟ್ ಪಂದ್ಯಾಟದಲ್ಲಿ, ಶಿರಸಿ ವಕೀಲರ ತಂಡವು ವೈಯ ಕ್ತಿಯ ನಾಲ್ಕು ಪ್ರಶಸ್ತಿಯೊಂದಿಗೆ ಕ್ರಿಕೇಟ್ ಚಾಂಪಿಯನ್ಸ ತಂಡವಾಗಿ ಹೊರಹಮ್ಮಿದೆ.

ದಿ. ಪಾಂಡು ಆರ್ ನಾಯ್ಕ ವಕೀಲರ ಸ್ಮರಣಾರ್ಥವಾಗಿ, ಜಿಲ್ಲಾ ಮಟ್ಟದ ವಕೀಲರ ಕ್ರಿಕೇಟ್ ಪಂದ್ಯಾಟವನ್ನು ರವಿವಾರ ಅಂಕೋಲದ ವಕೀಲ ಸಂಘವು ಜೈ ಹಿಂದ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಸಂಘಟಿಸಿತ್ತು.

ಜಿಲ್ಲಾದ್ಯಂತ 8 ವಕೀಲರ ತಂಡ ಭಾಗವಹಿಸಿದ್ದ ಪಂದ್ಯಾಟದಲ್ಲಿ, ಶಿರಸಿ ವಕೀಲರ ತಂಡ ಹಾಗೂ ಅಂಕೋಲ ವಕೀಲ ತಂಡ ದೊಂದಿಗೆ ಅಂತಿಮ ಪಂದ್ಯಾಟ ಜರುಗಿದ್ದು, ಶಿರಸಿ ವಕೀಲ ತಂಡ ಜಯಶಾಲಿಯಾಯಿತು. ಜಿಲ್ಲಾ ನ್ಯಾಯಾಧೀಶ ವಿಜಯ ಕುಮಾರ ಅವರಿಂದ ಶಿರಸಿ ವಕೀಲ ತಂಡದ ನಾಯಕ ರವೀಂದ್ರ ನಾಯ್ಕ ಹಾಗೂ ತಂಡದ ಸದಸ್ಯರು ಚಾಂಪಿಯನ್ ಟ್ರೋಫಿ ಪಡೆದುಕೊಂಡರು. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಸ್ಥಳೀಯ ನ್ಯಾಯಾಧೀಶರಾದ ಮನೋಹರ ಎಮ್, ಪ್ರಶಾಂತ ಬಾದವಾಡಗಿ, ಅರ್ಪಿತಾ ಬೆಲ್ಲದ್, ವಕೀಲ ಸಂಘದ ಅಧ್ಯಕ್ಷ ವಿನೋಧ ಶಾನಭಾಗ, ಉಮೇಶ ನಾಯ್ಕ, ನಾಗಾನಂದ ಭಂಟ್, ಕಾರ್ಯದರ್ಶಿ ಲಕ್ಷ್ಮಿದಾಸ ನಾಯ್ಕ, ಹಿರಿಯ ವಕೀಲ ಪ್ರದೀಪ ನಾಯ್ಕ ಉಪಸ್ಥಿತರಿದ್ದರು.

ವೈಯಕ್ತಿಕ ಬಹುಮಾನ:

ಪಂದ್ಯಾಟದ ವೈಯಕ್ತಿಕ ಬಹುಮಾನಗಳನ್ನ ಶಿರಸಿ ವಕೀಲ ತಂಡದ ನಾಯಕ ಹಾಗೂ ಹಿರಿಯ ವಕೀಲ ರವೀಂದ್ರ ನಾಯ್ಕ ಉತ್ತಮ ವಿಕೇಟ್ ಕೀಪರ್, ಉತ್ತಮ ದಾಂಡಿಗ- ಆಯ್ವರ ಫರ್ನಾಂಡಿಸ್ ಶಿರಸಿ, ಉತ್ತಮ ಬೌಲರ್- ಗಣಪತಿ ಹೆಗಡೆ ಶಿರಸಿ, ಸರಣಿ ಪುರುಷೊತ್ತಮ- ನಾಗರಾಜ ಜಂಬೇಸಾಲ್ ಶಿರಸಿ ಪಡೆದುಕೊಂಡರು.










Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News