ಹೊನ್ನಾವರ: ಕೆಎಸ್ಸಾರ್ಟಿಸಿ ಬಸ್ - ದ್ವಿಚಕ್ರ ವಾಹನ ಢಿಕ್ಕಿ; ತಾಯಿ, ಮಗಳು ಮೃತ್ಯು
Update: 2024-02-29 19:08 IST
ಭಟ್ಕಳ: ಕೆಎಸ್ಸಾರ್ಟಿಸಿ ಬಸ್ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ, ತಾಯಿ ಮತ್ತು ಮಗಳು ಮೃತಪಟ್ಟ ಘಟನೆ ಹೊನ್ನಾವರ-ಮಂಕಿ ರಾಷ್ಟ್ರೀಯ ಹೆದ್ದಾರಿ 66 ಗುಳದಕೇರಿ ಬಳಿ ಗುರುವಾರ ನಡೆದಿದೆ.
ಮುರುಡೇಶ್ವರ ಮಾವಳ್ಳಿಯ ಸವಿತಾ ರಾಜು ಆಚಾರಿ (40) ಹಾಗೂ ಅವರ ಮಗಳು ಅಂಕಿತ ಆಚಾರಿ (17) ಮೃತರು ಎಂದು ತಿಳಿದು ಬಂದಿದೆ.
ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯ ರಭಸಕ್ಕೆ ತಾಯಿ ಮಗಳು ಬಸ್ಸಿನಡಿಯಲ್ಲಿ ಸಿಲುಕಿದ್ದು ಗಂಭೀರ ಗಾಯಗೊಂಡ ತಾಯಿ ಮಗಳನ್ನು ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆಂದು ಮಣಿಪಾಲಕ್ಕೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಚಾಲಕ ಬೆಳಗಾವಿ ಸವದತ್ತಿಯ ಪಕೀರಪ್ಪ ಬಸಪ್ಪ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.