ಭಟ್ಕಳ: ಮಂಗಳವಾರದಿಂದ ರಮಝಾನ್ ಉಪವಾಸ ಆರಂಭ
Update: 2024-03-11 20:02 IST
ಭಟ್ಕಳ: ಶಿರೂರಿನ ನಾಗೂರು ಎಂಬಲ್ಲಿ ಇಂದು ರಮಝಾನ್ ಮಾಸದ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಮಂಗಳವಾರ ದಿಂದ ಉಪವಾಸ ಆರಂಭಗೊಳ್ಳಲಿದೆ ಎಂದು ಭಟ್ಕಳದ ಜಮಾತುಲ್ ಮುಸ್ಲಿಮೀನ್ ಇದರ ಪ್ರಧಾನ ಕಾಝಿ, ಮೌಲಾನ ಅಬ್ದುಲ್ ರಬ್ ನದ್ವಿ ಹಾಗೂ ಮರ್ಕಝಿ ಕಲಿಫ ಜಮಾತುಲ್ ಮುಸ್ಲಿಮೀನ್ ಇದರ ಪ್ರಧಾನ ಖಾಝಿ ಮೌಲಾನ ಖಾಜಾ ಮೊಹಿದ್ದೀನ್ ಅಕ್ರಮಿ ಮದನಿ ನದ್ವಿ ತಿಳಿಸಿದ್ದಾರೆ.