×
Ad

ಭಟ್ಕಳ: ನದಿಯಲ್ಲಿ ಮುಳುಗಿ ಮಹಿಳೆ ಸಹಿತ ಇಬ್ಬರು ಮೃತ್ಯು

Update: 2024-05-17 19:14 IST

ಭಟ್ಕಳ: ಕಡವಿನಕಟ್ಟ ನದಿಯಲ್ಲಿ ಮುಳುಗಿ ಮಹಿಳೆ ಸಹಿತ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ಸಂಜೆ 4 ಗಂಟೆಯ ಸುಮಾರಿಗೆ ನಡೆದಿದೆ.

ಮೃತರನ್ನು ಪುರಸಭೆಯ ಕಾರು ಚಾಲಕ ಶಂಕರ್ ನಾಯ್ಕ ಎಂಬವರ ಪತ್ನಿ ಪಾರ್ವತಿ ನಾಯ್ಕ (39) ಹಾಗೂ ಸರ್ಕಾರಿ ITI ಕಾಲೇಜಿನಲ್ಲಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಸೂರಜ್ ಪಾಂಡು ನಾಯ್ಕ (17) ಎಂದು ಗುರುತಿಸಲಾಗಿದೆ.

ಐದಾರು ಮಂದಿ ಸ್ನೇಹಿತರು ಕಡವಿನಕಟ್ಟೆ ನದಿಯಲ್ಲಿ ಈಜಲು ತೆರಳಿದ್ದರು ಎಂದು ತಿಳಿದುಬಂದಿದೆ.

ಇವರಲ್ಲಿ ಸೂರಜ್ ನೀರಿನ ಸೆಳೆತಕ್ಕೆ ಒಳಗಾಗಿ ಮುಳುಗಿದ್ದು, ಇದನ್ನು ಕಂಡು ಅಲ್ಲಿಯೇ ಇದ್ದ ಪಾರ್ವತಿ ಮುಳುಗುತ್ತಿರುವ ಸೂರಜ್ ನನ್ನು ರಕ್ಷಿಸಲು ಹೋಗಿ ಅವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News