×
Ad

ಶಿರಸಿ: ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ನಾಪತ್ತೆ

Update: 2023-12-17 18:26 IST

ಶಿರಸಿ: ಸಹಸ್ರಲಿಂಗ ಬಳಿಯ ಶಾಲ್ಮಲಾ ನದಿಯಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಮನಬೈಲ್‌ ನಿವಾಸಿ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರಹ್ಮಾನ್ (44), ನಾದಿಯಾ ನೂರ್ ಅಹ್ಮದ್ ಶೇಖ್ (20), ತಬಸುಮ್ (21), ನಬಿಲ್ ನೂರ್ ಅಹ್ಮದ್ ಶೇಖ್ (22)‌, ಉಮರ್ ಸಿದ್ದೀಕ್ (23) ನದಿಯಲ್ಲಿ ಮುಳುಗಿ ನಾಪತ್ತೆಯಾದವರು ಎಂದು ತಿಳಿದುಬಂದಿದೆ.

ಒಂದೇ ಕುಟುಂಬದ ಐದು ಮಂದಿ ಶಾಲ್ಮಲಾ ನದಿಯಲ್ಲಿ ಈಜಲು ತೆರಳಿದ್ದರು ಎಂದು ತಿಳಿದುಬಂದಿದ್ದು, ಸಾಕಷ್ಟು ಹೊತ್ತಾದರೂ ವಾಪಸ್ ಬರದ ಕಾರಣ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದಾರೆ.






Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News