ಭಾರತೀಯ ನೌಕಾ ಸೇನೆಯಲ್ಲಿ ಬಿ.ಟೆಕ್ ಕೆಡೆಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ
ಭಾರತೀಯ ನೌಕಾಪಡೆಗೆ ಸೇರಿ (ನೌಸೇನಾ ಭಾರತಿ) ಜುಲೈ 2026ರ 10+2 (ಬಿ.ಟೆಕ್) ಕೆಡೆಟ್ ಪ್ರವೇಶ ಯೋಜನೆಯ ನೇಮಕಾತಿಗಾಗಿ ಅಧಿಕೃತ ವೆಬ್ತಾಣದಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 44 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನೌಕಾಪಡೆಗೆ ಅರ್ಜಿ ಸಲ್ಲಿಕೆ 2026 ಜನವರಿ 03ರಿಂದ ಆರಂಭವಾಗಿದೆ. ಅಭ್ಯರ್ಥಿಗಳು 2026 ಜನವರಿ 19ರವರೆಗೆ ಅರ್ಜಿ ಸಲ್ಲಿಸಬಹುದು. 2007 ಜನವರಿ 02ರಿಂದ 2009 ಜುಲೈ 01ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಭಾರತೀಯ ನೌಕಾಪಡೆಯ 10+2 (ಬಿ.ಟೆಕ್) ಪ್ರವೇಶ ಜುಲೈ ನೇಮಕಾತಿ 2026ರ ಸಂಪೂರ್ಣ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಪ್ರಮುಖ ದಿನಾಂಕಗಳು
• ಆನ್ಲೈನ್ ಅರ್ಜಿ ಆರಂಭ : 03 ಜನವರಿ 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19 ಜನವರಿ 2026
• ಶುಲ್ಕ ಪಾವತಿಗೆ ಕೊನೆಯ ದಿನಾಂಕ : 19 ಜನವರಿ 2026
• ಪರೀಕ್ಷೆ ದಿನಾಂಕ: ಶೀಘ್ರವೇ ಸೂಚಿಸಲಾಗುವುದು
• ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು
• ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.
• ವಿವರಗಳಿಗೆ ಅಭ್ಯರ್ಥಿಗಳು ಭಾರತೀಯ ನೌಕಾ ಸೇನೆಯ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಬಹುದು.
ಅರ್ಜಿ ಶುಲ್ಕ
• ಯಾವುದೇ ಅಭ್ಯರ್ಥಿಗೆ ಅರ್ಜಿ ಶುಲ್ಕ ಇರುವುದಿಲ್ಲ
ವಯೋಮಿತಿ
2007 ಜನವರಿ 02ರಿಂದ 2009 ಜುಲೈ 01ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನೌಕಾ ಸೇನೆಯ ನಿಯಮಗಳಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ಇರುತ್ತದೆ.
ಒಟ್ಟು ಹುದ್ದೆಗಳು
ಎಕ್ಸಿಕ್ಯೂಟಿವ್ ಮತ್ತು ತಾಂತ್ರಿಕ (ಎಂಜಿನಿಯರಿಂಗ್ & ಎಲೆಕ್ಟ್ರಿಕಲ್) – 44 ಹುದ್ದೆಗಳು
ವಿದ್ಯಾರ್ಹತೆ
ಅಭ್ಯರ್ಥಿಗಳು 10+2 ವಿಜ್ಞಾನವ ವಿಭಾಗವನ್ನು ಭೌತಶಾಸ್ತ್ರ, ರಾಸಾಯನ ಶಾಸ್ತ್ರ ಮತ್ತು ಗಣಿತದಲ್ಲಿ ಶೇ 70ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು. ಇಂಗ್ಲಿಷ್ನಲ್ಲಿ ಪ್ರೌಢಶಾಲೆ ಮತ್ತು ಪಿಯುಸಿಯಲ್ಲಿ ಶೇ 50ರಷ್ಟು ಅಂಕ ಗಳಿಸಿರಬೇಕು. ನೀವು ಮಾನ್ಯವಾದ ಅಖಿಲ ಭಾರತ ಸಿಆರ್ಎಲ್ ಶ್ರೇಣಿಯೊಂದಿಗೆ ಜೆಇಇ (ಮುಖ್ಯ) 2025 ಅನ್ನು ಸಹ ಬರೆದಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಭಾರತೀಯ ನೌಕಾಪಡೆಯನ್ನು ಸೇರಲು ಬಯಸುವ ಆಸಕ್ತ ಅಭ್ಯರ್ಥಿಗಳು 2026 ಜನವರಿ 19ರೊಳಗೆ ಅರ್ಜಿ ಸಲ್ಲಿಸಬೇಕು ಈ ಕೆಳಗೆ ನೀಡಲಾದ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು:
ಜೆಇಇ (ಮುಖ್ಯ) 2025 ಅಖಿಲ ಭಾರತ ಸಾಮಾನ್ಯ ರ‍್ಯಾಂಕ್ ಪಟ್ಟಿಯನ್ನು ಅನುಸರಿಸಿ ಆಯ್ಕೆ ಮಾಡಲಾಗುವುದು.
ನಂತರ ಎಸ್ಎಸ್ಬಿ ಸಂದರ್ಶನವಿರುತ್ತದೆ. ವೈದ್ಯಕೀಯ ಪರೀಕ್ಷೆಯಿರುತ್ತದೆ. ಹೆಚ್ಚಿನ ವಿವರಗಳಿಗೆ ಭಾರತೀಯ ನೌಕಾಪಡೆಯ ಅಧಿಕೃತ ವೆಬ್ತಾಣವನ್ನು ಸಂಪರ್ಕಿಸಬಹುದು: https://www.joinindiannavy.gov.in/