×
Ad

VIJAYANAGARA | ಕೂಡ್ಲಿಗಿಯಲ್ಲಿ ವಾಹನ ಢಿಕ್ಕಿಯಾಗಿ ಕರಡಿ ಸಾವು

Update: 2026-01-28 11:52 IST

ವಿಜಯನಗರ | ಅಪರಿಚಿತ ವಾಹನ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಕರಡಿ ಮೃತಪಟ್ಟ ಘಟನೆ ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಆಹಾರ ಆರಸಿ ಹೆದ್ದಾರಿ ದಾಟಿ ಹೋಗುತ್ತಿದ್ದ ಕರಡಿಗೆ ವಾಹನ ಢಿಕ್ಕಿ ಹೊಡೆದಿದೆ. ಇದರಿಂದ ಎಂಟು ವರ್ಷದ ಗಂಡು ಕರಡಿ ತೀವ್ರವಾಗಿ ಗಾಯಗೊಂಡು ಪಕ್ಕದ ಹೊಲದಲ್ಲಿ ಹೋಗಿ ಬಿದ್ದಿತ್ತು. ವಿಷಯ ತಿಳಿದ ಕೂಡ್ಲಿಗಿ ವಲಯ ಅರಣ್ಯ ಅಧಿಕಾರಿ ಸಂದೀಪ್ ನಾಯಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಚಿಕಿತ್ಸೆ ಕೊಡಿಸಲು ಸಿದ್ಧತೆ ನಡೆಸಿದ್ದರು. ಆದರೆ ಕರಡಿ ಸಾವನ್ನಪ್ಪಿದೆ.

ಪಶು ವೈದ್ಯಾಧಿಕಾರಿ ಡಾ.ಲೋಹಿತ್ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಇಲಾಖೆಯ ನಿಯಮಗಳಂತೆ ಕರಡಿಯನ್ನು ಅಂತ್ಯಕ್ರಿಯೆ ನಡೆಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News