ಮುಂದಿನ ವರ್ಷ ಟಿಪ್ಪು ಸುಲ್ತಾನ್ ಪುತ್ಥಳಿ ನಿರ್ಮಿಸಿ ಜಯಂತಿ ಆಚರಣೆ: ಶಾಸಕ ಹೆಚ್.ಆರ್. ಗವಿಯಪ್ಪ
ವಿಜಯನಗರ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮೊದಲ ವ್ಯಕ್ತಿ ಟಿಪ್ಪು ಸುಲ್ತಾನ್, ಅಂತಹ ಮಹಾನ್ ಹೋರಾಟಗಾರ ಟಿಪ್ಪುಸುಲ್ತಾನ್ ರವರ ಪುತ್ತಳಿಯನ್ನು ಹೊಸಪೇಟೆ ನಗರದಲ್ಲಿ ಮುಂದಿನ ಜಯಂತಿ ಒಳಗೆ ನಿರ್ಮಿಸಲಾಗುವುದು ಎಂದು ಶಾಸಕ ಹೆಚ್.ಆರ್. ಗವಿಯಪ್ಪ ಹೇಳಿದರು.
ನಗರದ ಉಮರ್ ಪಂಕ್ಷನ್ ಹಾಲ್ ನಲ್ಲಿ ಮಜಲೀಸ್ ಎ ಟಿಪ್ಪು ಸುಲ್ತಾನ್ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 275 ನೇ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಹೆಚ್.ಆರ್. ಗವಿಯಪ್ಪ, ಟಿಪ್ಪು ಸುಲ್ತಾನ್ ಅವರ ದೇಶ ಕಂಡ ಅಪ್ರತಿಮ ಹೋರಾಟಗಾರ. ಭಾರತಕ್ಕೆ ಸ್ವತಂತ್ರ ಸಿಗುವುದಕ್ಕೆ ಅವರ ಪಾತ್ರ ಬಹು ಮುಖ್ಯವಾದುದು.ಅಂತಹ ವ್ಯಕ್ತಿಯ ಜಯಂತಿಗೆ ಯಾರೇ ವಿರೋಧ ಮಾಡಿದರೂ ಸಹ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಶಾಸಕರು ಟಿಪ್ಪು ಸುಲ್ತಾನ್ ಅವರ ಪರವಾಗಿ ಇರುತ್ತೇವೆ ಎಂದು ಹೇಳಿದರು.
ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಸಮಿತಿ ಸದಸ್ಯರಾದ ಪ್ರೊಫೆಸರ್ ಸಾದಿಯಾ ಮಾತನಾಡಿ ಟಿಪ್ಪು ಸುಲ್ತಾನ್ ರವರ ಜೀವನ ಚರಿತ್ರೆ ಬಗ್ಗೆ ತಿಳಿಸಿದರು.
ಈ ವೇಳೆ ಮಜಲೀಸ್ -ಎ- ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಇರ್ಫಾನ್ ಕಟಕಿ, ಸಮಾಜಸೇವಕ ಹೆಚ್. ಜಿ.ವಿರೂಪಾಕ್ಷ, ಇತಿಹಾಸಕರ ಚಂದ್ರಶೇಖರ್ ಶಾಸ್ತ್ರಿ, ಮಾಜಿ ನಗರ ಸಭ ಸದಸ್ಯ ಬಡವಲಿ, ಖಾದರ್ ರಾಫಾಯಿ, ಅಬ್ದುಲ್, ಖೈಫ್, ಸದ್ದಾಂ ಹಂಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.