×
Ad

ವಿಜಯನಗರ| ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

Update: 2025-12-04 23:30 IST

ವಿಜಯನಗರ(ಹೊಸಪೇಟೆ): ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ ಚುನಾವಣೆಯ ವೇಳಾ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಪ್ರಕಟಿಸಿದ್ದಾರೆ.

ಡಿ.21 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಸಲಾಗುವುದು. ಅಭ್ಯರ್ಥಿಗಳಿಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ಡಿ.9 ಕೊನೆಯ ದಿನವಾಗಿದೆ. ಡಿ.10ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಡಿ.12 ಕೊನೆಯ ದಿನವಾಗಿದೆ. ಮರುಮತದಾನ ಅವಶ್ಯವಿದ್ದರೆ ಡಿ.23 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ. ಮತಗಳ ಎಣಿಕೆಯು  ಡಿ.24 ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ ಎಂದು ಹೇಳಿದರು. 

ಮಿಸಲಾತಿ ವಿವರ : ಸೀತಾರಾಮ ತಾಂಡದ 4 ಸ್ಥಾನಗಳ ಪೈಕಿ ಅನುಸೂಚಿತ ಜಾತಿಗೆ 2, ಅನುಸೂಚಿತ ಜಾತಿ(ಮಹಿಳೆ) 1 , ಅನುಸೂಚಿತ ಪಂಗಡ ಮಹಿಳೆ 1 ಸ್ಥಾನಗಳು, ಸೀತಾರಾಮ ತಾಂಡ (ನಲ್ಲಾಪುರ)ದ 3 ಸ್ಥಾನಗಳ ಪೈಕಿ ಅನುಸೂಚಿತ ಜಾತಿ (ಮಹಿಳೆ) 2, ಸಾಮಾನ್ಯ 01, ಸೀತಾರಾಮ ತಾಂಡ (ಹೊಸಚಿನ್ನಾಪುರ) ಸಾಮಾನ್ಯ ವರ್ಗಕ್ಕೆ 1 ಸ್ಥಾನ ಸೇರಿದಂತೆ ಒಟ್ಟು 8 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News