Harapanahalli | ಎಲ್‌ಐಸಿ ಪ್ರತಿನಿಧಿಗಳು ಹೆಮ್ಮೆಯಿಂದ ಸೇವೆ ಸಲ್ಲಿಸಬೇಕು: ರಾಜೇಶ್

ಪ್ರತಿನಿಧಿಗಳ ಸಭೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

Update: 2026-07-23 22:15 IST

ಹರಪನಹಳ್ಳಿ: ಗ್ರಾಮೀಣ ಮಟ್ಟದಲ್ಲಿಯೂ ಜನರಿಗೆ ವಿಮಾ ಸೌಲಭ್ಯವನ್ನು ತಲುಪಿಸುವ ಮೂಲಕ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದಿದ್ದು, ಪ್ರತಿನಿಧಿಗಳು ತಮ್ಮನ್ನು ಎಲ್‌ಐಸಿ ಪ್ರತಿನಿಧಿಗಳೆಂದು ಹೆಮ್ಮೆಯಿಂದ ಪರಿಚಯಿಸಿಕೊಳ್ಳಬೇಕು ಎಂದು ಹರಪನಹಳ್ಳಿ ಎಲ್‌ಐಸಿ ಶಾಖಾಧಿಕಾರಿ ರಾಜೇಶ್ ಹೇಳಿದರು.

ಮುಖ್ಯ ಜೀವ ವಿಮಾ ಸಲಹೆಗಾರ ಬಿ. ಹೇಮಪ್ಪ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿನಿಧಿಗಳ ಸಭೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ಅನೇಕ ಖಾಸಗಿ ಹಣಕಾಸು ಸಂಸ್ಥೆಗಳು ವಿವಿಧ ಆಮಿಷಗಳನ್ನು ಒಡ್ಡಿ ಜನರನ್ನು ವಂಚಿಸುತ್ತಿವೆ. ಆದರೆ ಎಲ್‌ಐಸಿ ಆರ್ಥಿಕವಾಗಿ ಸದೃಢ ಹಾಗೂ ವಿಶ್ವಾಸಾರ್ಹ ಸಂಸ್ಥೆಯಾಗಿದ್ದು, ಇಂತಹ ಸಂಸ್ಥೆಯ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಎಲ್‌ಐಸಿ ಪ್ರತಿನಿಧಿಗಳ ಸೇವೆಯನ್ನು ಶ್ಲಾಘಿಸುವುದರೊಂದಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಮುಖ್ರಂ ಖಾಜಾ, ಎಂ. ಅಂಬಣ್ಣ, ರಾಯಚೂರು ವಿಭಾಗೀಯ ಅಧ್ಯಕ್ಷ ಹಾಗೂ ಜೀವಜಲ ಟ್ರಸ್ಟ್ ಅಧ್ಯಕ್ಷ ಹೇಮಪ್ಪ ಮೋರಿಗೇರಿ, ಗುಡಿಹಳ್ಳಿ ಹಾಲೇಶ್, ಹಿರಿಯ ಪ್ರತಿನಿಧಿ ಎಂ. ವೀರಭದ್ರಪ್ಪ, ಎಲ್‌ಐಸಿಯ ಹಿಮಾಂಶು, ಐ. ಪ್ರಶಾಂತ್ ಹಾಗೂ ಪ್ರತಿನಿಧಿಗಳಾದ ಇಟ್ಟಿಗಿ ಉಷಾ ಅಮರೇಶ್, ಶೃತಿ ಕೊಟ್ರೇಶ್, ಶಾರದಾ ನಾಗರಾಜ್, ಅರುಣ್ ಗುಡಿಹಳ್ಳಿ, ಶರತ್ ಚಂದ್ರ, ಗಂಗಮ್ಮ ಬಸವರಾಜ್, ನಾಗರತ್ನ ವಿ.ಕೆ., ಬಿ.ಸಿ. ಲತಾ, ಲಕ್ಷ್ಮಿ ಚಂದ್ರಶೇಖರ್, ರತ್ನಮ್ಮ, ವನಜಾಕ್ಷಿ, ಹೇಮಂತ್ ಬಸವರಾಜ್, ಹೆಚ್. ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News