Vijayanagara | ಜಿಲ್ಲೆಯಲ್ಲಿ 11.42 ಲಕ್ಷ ಗಣತಿ ನಮೂನೆಗಳ ವಿತರಣೆ ಪೂರ್ಣ : ಡಿಸಿ ಕವಿತಾ ಎಸ್.ಮನ್ನಿಕೇರಿ

Update: 2026-07-23 22:17 IST

ಹೊಸಪೇಟೆ/ವಿಜಯನಗರ, ಜು.23 (ಕರ್ನಾಟಕ ವಾರ್ತೆ): ಜಿಲ್ಲೆಯ ಐದು ತಾಲೂಕುಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವೇಗವಾಗಿ ಸಾಗುತ್ತಿದ್ದು, ಒಟ್ಟು 11,42,732 ಗಣತಿ (ಎನ್ಯುಮರೇಷನ್) ನಮೂನೆಗಳನ್ನು 1,234 ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಶೇ.100ರಷ್ಟು ವಿತರಣೆ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.

ಜೂನ್ 30ರಿಂದ ಆರಂಭವಾದ ಈ ವಿಶೇಷ ಅಭಿಯಾನವು ಆಗಸ್ಟ್ 8ರವರೆಗೆ ನಡೆಯಲಿದ್ದು, ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಹಾಗೂ ಡಿಜಿಟಲೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ.

ಈವರೆಗೆ ವಿತರಿಸಲಾದ ನಮೂನೆಗಳ ಪೈಕಿ 8,93,011 (ಶೇ.78.15) ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಜೊತೆಗೆ 2,852 (ಶೇ.0.25) ಮತದಾರರು ಸ್ವತಃ ಆನ್‌ಲೈನ್ ಮೂಲಕ ನಮೂನೆಗಳನ್ನು ಸಲ್ಲಿಸಿದ್ದಾರೆ.

ಬಿಎಲ್‌ಒಗಳ ಪರಿಶೀಲನೆ ವೇಳೆ ಜಿಲ್ಲೆಯಲ್ಲಿ 21,517 ಮೃತ ಮತದಾರರು ಹಾಗೂ 22,204 ಖಾಯಂ ಸ್ಥಳಾಂತರಗೊಂಡ ಮತದಾರರನ್ನು ಗುರುತಿಸಲಾಗಿದೆ. ಅಲ್ಲದೆ, ಈಗಾಗಲೇ 8,490 ದಾಖಲಾಗಿರುವ ಮತದಾರರು ಹಾಗೂ 604 ಸಂಪರ್ಕಕ್ಕೆ ಸಿಗದ ಅಥವಾ ಅಲಭ್ಯವಿರುವ ಮತದಾರರನ್ನು ಪತ್ತೆಹಚ್ಚಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News