ವಿಜಯನಗರ | ಮೇ 17ರಂದು ಜೆಸ್ಕಾಂ ಗ್ರಾಹಕರ ಸಂವಾದ ಸಭೆ
Update: 2025-05-15 21:05 IST
ವಿಜಯನಗರ(ಹೊಸಪೇಟೆ) : ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ 17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು ಕೊರತೆಗೆ ಸಂಬಂಧಿಸಿದ ಸಂವಾದ ಸಭೆ ನಡೆಯಲಿದೆ.
ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬೇಕೆಂದು ನಗರ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.