×
Ad

ವಿಜಯಪುರ | ಬಸವನಬಾಗೇವಾಡಿ ಕೆನರಾ ಬ್ಯಾಂಕ್ ನಿಂದ 58 ಕೆ.ಜಿ ಚಿನ್ನಾಭರಣ ಕಳ್ಳತನ

Update: 2025-06-02 22:55 IST

ವಿಜಯಪುರ : ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆದಿದ್ದ ಕೆನರಾ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್​ನಲ್ಲಿದ್ದ 58 ಕೆಜಿ 975 ಗ್ರಾಂ ಚಿನ್ನಾಭರಣ ಮತ್ತು 5.20 ಲಕ್ಷ ನಗದು ಕಳ್ಳತನವಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

ಇತ್ತೀಚಿಗೆ ವಿಜಯಪುರ ಜಿಲ್ಲೆಯ ಬಸನವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್​ನ ಮುಂಭಾಗದ ಬಾಗಿಲಿನ ಕೀ ಮುರಿದು ಕಳ್ಳತನ ಮಾಡಿರುವಂತಹ ಘಟನೆ ನಡೆದಿತ್ತು.

ಈ ಸಂಬಂಧ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಬ್ಯಾಂಕಿನ ಮುಖ್ಯ ದ್ವಾರದ ಶೆಟರ್ಸ್ ಗೆ ಹಾಕಿದ ಕೀಲಿ ಮತ್ತು ಕಿಟಕಿಯ ಸರಳುಗಳನ್ನು ಮುರಿದು ಒಳಗೆ ಪ್ರವೇಶಿಸಿದ ದರೋಡೆಕೋರರು, ಬಂಗಾರದ ಆಭರಣ ಮತ್ತು ನಗದು ಇಟ್ಟಿದ್ದ ಸೇಪ್ ಲಾಕರ್ ನ ಕೀಲಿ ತೆಗೆದು ಅದರ ಒಳಗೆ ಇರುವ ಕಬ್ಬಿಣದ ಬಾಗಿಲಿನ ಸರಳುಗಳನ್ನು ಕಟ್ ಮಾಡಿ ಒಳ ಹೊಕ್ಕು, ಕಬ್ಬಿಣದ ಟ್ರಜರಿಯಲ್ಲಿ ಇದ್ದ ಚಿನ್ನಾಭರಣ, ನಗದು ಹೊತ್ತೊಯ್ದಿದ್ದರು ಎಂದು ತಿಳಿಸಿದ್ದಾರೆ.

ಮೇ 23ರಿಂದ 25ರ ನಡುವೆ ಬ್ಯಾಂಕಿನ ದರೋಡೆ ನಡೆದಿದ್ದು, ಈ ಸಂಬಂಧ ಮೇ 26ರಂದು ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಕಲ್ಮೇಶ ಪೂಜಾರಿ ಎಂಬವರು ದೂರು ನೀಡಿದ್ದರು. ದರೋಡೆಕೋರರ ಪತ್ತೆಗಾಗಿ ಎಂಟು ತಂಡಗಳನ್ನು ರಚಿಸಲಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ಮತ್ತು ಪತ್ತೆ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News