×
Ad

ವಿಜಯಪುರ| ಉರ್ದು ಶಾಲಾ ಕಟ್ಟಡ ಕುಸಿತ: ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

Update: 2024-01-22 20:36 IST

ವಿಜಯಪುರ: ನಗರ ವ್ಯಾಪ್ತಿಯಲ್ಲಿರುವ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಕೈತೊಳೆಯುವ ತೊಟ್ಟಿಯ ಬಳಿ ಗೋಡೆ ಕುಸಿದು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯವಾಗಿರುವಂತಹ ಘಟನೆ ಸಂಭವಿಸಿದೆ.

ಝನೇರಾ ಚೋಕದಾರ್, ಎಚ್. ಫತೇಪುರ ಎಂಬ ವಿದ್ಯಾರ್ಥಿನಿಯರಿಗೆ ಗಾಯಗಳಾಗಿದ್ದು, ವಿದ್ಯಾರ್ಥಿನಿಯರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಪೋಷಕರ ಮಾಹಿತಿ ಪ್ರಕಾರ ಶಾಲಾ ಆವರಣದಲ್ಲಿ ಶಿಥಿಲವಾದ 7 ಕೊಠಡಿಗಳು ಇವೆ. ಇವುಗಳನ್ನು ನೆಲಸಮ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಂದ ಹಿಡಿದು ಬಿಇಓ, ಡಿಡಿಪಿಐ ಅವರಿಗೂ ಮನವಿ ಸಲ್ಲಿಕೆ ಮಾಡಿದರು ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಘಟನೆ ಸಂಬಂಧ ಗೋಲಗುಂಬಜ್  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News