ಮಣ್ಣುರಹಿತವಾಗಿ ಬೆಳೆಯುವ ಈ ಸಸ್ಯಗಳ ಬಗ್ಗೆ ನಿಮಗೆ ಗೊತ್ತೆ?
ಸಾಂದರ್ಭಿಕ ಚಿತ್ರ
ಮಣ್ಣು-ಮುಕ್ತ ಸಸ್ಯಗಳು ನಗರ ಪ್ರದೇಶಗಳಲ್ಲಿ ಮತ್ತು ಒಳಾಂಗಣ ಸಸ್ಯ ಪ್ರಿಯರಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ.
ಎಲ್ಲಾ ಸಸ್ಯಗಳು ಬದುಕಲು ಮಣ್ಣಿನ ಅಗತ್ಯವಿಲ್ಲ. ಕೆಲವು ನೀರಿನಲ್ಲಿ ಚೆನ್ನಾಗಿ ಬೆಳೆಯುತ್ತವೆ ಮತ್ತು ಇನ್ನು ಕೆಲವು ಗಾಳಿಯಿಂದ ನೇರವಾಗಿ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಈ ಮಣ್ಣು-ಮುಕ್ತ ಸಸ್ಯಗಳು ನಗರ ತೋಟಗಾರರು ಮತ್ತು ಒಳಾಂಗಣ ಸಸ್ಯ ಪ್ರಿಯರಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಏಕೆಂದರೆ ಇವುಗಳಿಗೆ ಹೆಚ್ಚು ನಿರ್ವಹಣೆ ಅಗತ್ಯವಿಲ್ಲ, ಸ್ಥಳವನ್ನೂ ಉಳಿಸಬಹುದು ಮತ್ತು ನೋಡಲೂ ಆಕರ್ಷಕವಾಗಿರುತ್ತವೆ.
ಸಣ್ಣ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿರಲಿ ಅಥವಾ ಜಾಗವನ್ನು ಹಸಿರಿನಿಂದ ಅಲಂಕರಿಸಲು ಸ್ವಚ್ಛ ವಿಧಾನವನ್ನು ಬಯಸುತ್ತಿರಲಿ, ಆರೋಗ್ಯಕರ ಬೆಳವಣಿಗೆಗೆ ಮಣ್ಣು ಅಗತ್ಯವಿಲ್ಲ ಎಂಬುದನ್ನು ಈ ಸುಂದರವಾದ ಸಸ್ಯಗಳು ಸಾಬೀತುಪಡಿಸಿವೆ. ಅಂತಹ ಕೆಲವು ಸಸ್ಯಗಳ ವಿವರ ಇಲ್ಲಿದೆ.
Photo Credit : plantorbit.com
ಲಕ್ಕಿ ಬ್ಯಾಂಬೂ:
ಹೆಸರಿನ ಹೊರತಾಗಿಯೂ ಇದು ಬಿದಿರು ಅಲ್ಲ. ಆದರೆ ನೀರಿನಲ್ಲಿ ಬೆಳೆಸಲು ಸುಲಭವಾದ ಸಸ್ಯವಾಗಿದೆ. ಅಗತ್ಯವಿರುವುದು ಶುದ್ಧ ಜಲದ ಕಂಟೇನರ್ ಮತ್ತು ಪರೋಕ್ಷ ಸೂರ್ಯನ ಬೆಳಕು. ಫೆಂಗ್ಶುಯಿ ಪ್ರೇರಿತ ಜನಪ್ರಿಯ ಅಲಂಕಾರಿಕ ಸಸ್ಯವಾಗಿದೆ. ಈ ಸಸ್ಯವು ಸಮೃದ್ಧಿ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಕಾಂಡಗಳನ್ನು ಬೆಂಬಲಿಸಲು ಬೆಣಚುಕಲ್ಲುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಲಂಕಾರಿಕ ಮತ್ತು ಬೆಳೆಸುವುದು ಸರಳ.
Photo Credit : plantorbit.com
ಮನಿ ಪ್ಲಾಂಟ್:
ಮನೆಗಳಲ್ಲಿ ನೆಚ್ಚಿನ ಗಿಡವೆಂದರೆ ಮನಿ ಪ್ಲಾಂಟ್. ನೀರು ತುಂಬಿದ ಗಾಜಿನ ಜಾಡಿಗಳು ಅಥವಾ ಬಾಟಲಿಗಳಲ್ಲಿ ತುಂಬಾ ಚೆನ್ನಾಗಿ ಬೆಳೆಯುತ್ತದೆ. ಹರಿದಾಡುವ ಬಳ್ಳಿಗಳು ಮತ್ತು ಹೃದಯದ ಆಕಾರದ ಎಲೆಗಳು ಕಪಾಟುಗಳು, ಬಾಲ್ಕನಿಗಳು ಮತ್ತು ಮೇಜಿನ ಮೇಲ್ಭಾಗಕ್ಕೆ ಸೂಕ್ತವಾಗಿದೆ. ನಿಯಮಿತವಾಗಿ ನೀರು ಬದಲಿಸುವುದು ಮತ್ತು ಸಸ್ಯವನ್ನು ಪರೋಕ್ಷ ಬೆಳಕಿನಲ್ಲಿ ಇಡುವುದರಿಂದ ದೀರ್ಘಕಾಲ ಬೆಳೆಯಲು ಸಹಾಯವಾಗುತ್ತದೆ.
Photo Credit : plantorbit.com
ಸ್ಪೈಡರ್ ಸಸ್ಯ:
ವಾಯು ಶುದ್ಧೀಕರಣ ಗುಣಗಳಿಗೆ ಹೆಸರುವಾಸಿಯಾದ ಸ್ಪೈಡರ್ ಸಸ್ಯ ಜಲಕೃಷಿಗೆ ಹೊಂದಿಕೊಳ್ಳುತ್ತದೆ. ಸಣ್ಣ ಸಸ್ಯಗಳನ್ನು ನೇರವಾಗಿ ನೀರಿನಲ್ಲಿ ಇಡಬಹುದು. ಬೇಗನೇ ಬೇರುಗಳು ಬೆಳೆಯುತ್ತವೆ. ಹಸಿರು-ಬಿಳಿ ಎಲೆಗಳು ಒಳಾಂಗಣ ಸ್ಥಳಗಳಿಗೆ ತಾಜಾತನವನ್ನು ಸೇರಿಸುತ್ತವೆ. ಹೆಚ್ಚು ಕಾಳಜಿ ವಹಿಸುವ ಅಗತ್ಯವಿರುವುದಿಲ್ಲ.
Photo Credit : havenplant.in
ಪೀಸ್ ಲಿಲ್ಲಿ:
ಸೊಗಸಾದ ಬಿಳಿ ಹೂವು ಮತ್ತು ಹೊಳಪುಳ್ಳ ಎಲೆಗಳಿಗಾಗಿ ಪೀಸ್ ಲಿಲ್ಲಿ ಅಚ್ಚುಮೆಚ್ಚಿನ ಒಳಾಂಗಣ ಸಸ್ಯಗಳಾಗಿವೆ. ಸಾಮಾನ್ಯವಾಗಿ ಮಡಕೆಗಳಲ್ಲಿ ಬೆಳೆಸಲಾಗುತ್ತದೆಯಾದರೂ ಬೇರುಗಳು ನೀರಿನಲ್ಲಿ ಮುಳುಗಿದ್ದರೆ ಮತ್ತು ಎಲೆಗಳು ಒಣಗಿದರೆ ಎಲ್ಲಿ ಬೇಕಾದರೂ ಬದುಕಬಲ್ಲವು. ಆಕರ್ಷಕ ನೋಟ ಮತ್ತು ಬೇಗನೇ ಬೆಳೆಯುವ ಸ್ವಭಾವದಿಂದ ಒಳಾಂಗಣ ಅಲಂಕಾರಿಕ ಸಸ್ಯಗಳಾಗಿ ಜನಪ್ರಿಯವಾಗಿವೆ.
ಫಿಲೋಡೆಂಡ್ರಾನ್:
ಫಿಲೋಡೆಂಡ್ರಾನ್ಗಳು ನೀರಿನ ಪ್ರಸರಣ ವ್ಯವಸ್ಥೆಗಳಲ್ಲಿ ಚೆನ್ನಾಗಿ ಬೆಳೆಯುವ ಗಟ್ಟಿಮುಟ್ಟಾದ ಉಷ್ಣವಲಯದ ಸಸ್ಯಗಳಾಗಿವೆ. ಈ ಸಸ್ಯಗಳು ಒಳಾಂಗಣ ಪರಿಸರಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ಅವುಗಳ ಹಚ್ಚ ಹಸಿರಿನ ಎಲೆಗಳು ಮತ್ತು ಮೇಲೇರುವ ಬಳ್ಳಿಗಳು ಅವುಗಳನ್ನು ಒಳಾಂಗಣ ಸಸ್ಯವಾಗಿ ಜನಪ್ರಿಯಗೊಳಿಸಿವೆ.
Photo Credit : nurserylive.com
ಏರ್ ಪ್ಲಾಂಟ್:
ಏರ್ ಪ್ಲಾಂಟ್ಗಳು ಬಹುಶಃ ಅತ್ಯಂತ ಆಕರ್ಷಕ ಮಣ್ಣು-ಮುಕ್ತ ಸಸ್ಯಗಳಾಗಿವೆ. ಏಕೆಂದರೆ ಅವುಗಳಿಗೆ ಮಣ್ಣು ಅಥವಾ ನಿಂತ ನೀರು ಅಗತ್ಯವಿಲ್ಲ. ಸುತ್ತಮುತ್ತಲಿನ ಗಾಳಿಯಿಂದ ತಮ್ಮ ಎಲೆಗಳ ಮೂಲಕ ತೇವಾಂಶ ಮತ್ತು ಪೋಷಕಾಂಶಗಳನ್ನು ನೇರವಾಗಿ ಹೀರಿಕೊಳ್ಳುತ್ತವೆ. ಅವುಗಳನ್ನು ತಂತಿಗಳಲ್ಲಿ ಜೋಡಿಸಬಹುದು ಅಥವಾ ಗಾಜಿನ ಗೋಳಗಳಲ್ಲಿ ಪ್ರದರ್ಶಿಸಬಹುದು. ಜೀವಂತ ಅಲಂಕಾರದ ತುಣುಕುಗಳಾಗಿ ಜೋಡಿಸಬಹುದಾಗಿದೆ.
ಸಾಂದರ್ಭಿಕ ಚಿತ್ರ | Photo Credit : magnific
ಕಮಲ:
ನೈಸರ್ಗಿಕವಾಗಿ ನೀರಿನಲ್ಲಿ ಬೆಳೆಯುವ ಕಮಲವು ಅತ್ಯಂತ ಆಕರ್ಷಕ ಜಲಸಸ್ಯಗಳಲ್ಲಿ ಒಂದಾಗಿದೆ. ಹೆಚ್ಚಾಗಿ ಆಧ್ಯಾತ್ಮ ಮತ್ತು ಪ್ರಶಾಂತ ಪರಿಸರಕ್ಕೆ ಸಂಬಂಧಿಸಿವೆ. ಬಟ್ಟಲುಗಳು, ಕೊಳಗಳು ಅಥವಾ ನೀರಿನ ತೋಟಗಳಲ್ಲಿ ಬೆಳೆಸಬಹುದು. ದೊಡ್ಡ ಎಲೆಗಳು ಮತ್ತು ಸುಂದರ ಹೂವುಗಳು ಒಳಾಂಗಣ ಮತ್ತು ಹೊರಾಂಗಣ ಸೆಟ್ಟಿಂಗ್ನಲ್ಲಿ ಶಾಂತ ವಾತಾವರಣ ಸೃಷ್ಟಿಸುತ್ತವೆ.
ಕೃಪೆ: indianexpress.com