×
Ad

1.34 ಲಕ್ಷ ರೂ. ಬೆಲೆಯ ಸ್ಯಾಟ್ಲೈಟ್ ಹ್ಯಾಂಡ್ಸೆಟ್ ಬಿಡುಗಡೆ ಮಾಡಿದ BSNL

Update: 2026-07-09 18:42 IST

Photo Credit : @BSNLCorporate

ಸಂಸ್ಥೆಗಳು ಅಥವಾ ವ್ಯಕ್ತಿಗಳು ಈ ಹ್ಯಾಂಡ್ಸೆಟ್ ಖರೀದಿಸುವ ಮೊದಲು ದೂರ ಸಂಪರ್ಕ ಇಲಾಖೆಯಿಂದ ಅನುಮೋದನೆ ಪಡೆಯಬೇಕು.

ಬಿಎಸ್ಎನ್ಎಲ್ ಭಾರತದಲ್ಲಿ ಹೊಸ ಸ್ಯಾಟಲೈಟ್ ಫೋನ್ ಬಿಡುಗಡೆ ಮಾಡಿದೆ. ಮೊಬೈಲ್ ಟವರ್ಗಳಿಲ್ಲದ ಸ್ಥಳಗಳಲ್ಲಿ ಜನರು ಸಂಪರ್ಕದಲ್ಲಿರಲು ಸಹಾಯ ಮಾಡಲು ಈ ಫೋನ್ ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಅಪರೇಟರ್ ಬಿಎಸ್ಎನ್ಎಲ್ ಈ ಫೋನ್ ಅನ್ನು ಬರೋಬ್ಬರಿ 1,34,166 ರೂ. ಗೆ(ತೆರಿಗೆ ಸೇರಿ) ಮಾರುತ್ತಿದೆ!

ಸಾಮಾನ್ಯ ಸ್ಮಾರ್ಟ್ಫೋನ್ಗಿಂತ ಭಿನ್ನವಾಗಿ ಈ ಸಾಧನ ಸಾಂಪ್ರದಾಯಿಕ ಸೆಲ್ಯುಲರ್ ನೆಟ್ವರ್ಕ್ಗಳ ಬದಲಿಗೆ ಉಪಗ್ರಹ ಬಳಸಿ ಕಾರ್ಯನಿರ್ವಹಿಸುತ್ತದೆ. ಪ್ರಮಾಣಿತ ಮೊಬೈಲ್ ಸಂಪರ್ಕವಿಲ್ಲದ ರಿಮೋಟ್ ಮತ್ತು ಆಫ್ಗ್ರಿಡ್ ಸ್ಥಳಗಳಿಗೆ ಈ ಫೋನ್ ಸೂಕ್ತವಾಗಿದೆ. ಆದರೆ ಇದನ್ನು ಖರೀದಿಸುವುದು ಸರಳವಲ್ಲ. ಭಾರತದಲ್ಲಿ ಉಪಗ್ರಹ ಫೋನ್ಗಳಿಗೆ ಕಟ್ಟುನಿಟ್ಟಾದ ನಿಯಂತ್ರಣವಿದೆ. ಫೋನ್ ಖರೀದಿಸುವ ಅಥವಾ ಬಳಸುವ ಮೊದಲು ಬಳಕೆದಾರರು ದೂರಸಂಪರ್ಕ ಇಲಾಖೆಯಿಂದ (DoT) ಸ್ಪಷ್ಟ ಅಧಿಕಾರ ಪಡೆಯಬೇಕಾಗುತ್ತದೆ.

ಬಿಎಸ್ಎನ್ಎಲ್ ಉಪಗ್ರಹ ಫೋನ್ ಹೇಗೆ ಕೆಲಸ ಮಾಡುತ್ತದೆ?

ಸಮೀಪದ ಮೊಬೈಲ್ ಟವರ್ಗಳನ್ನು ಅವಲಂಬಿಸಿರುವ ಸಾಂಪ್ರದಾಯಿಕ ಫೋನ್ಗಳಿಗಿಂತ ಭಿನ್ನವಾಗಿ ಉಪಗ್ರಹ ಫೋನ್ ನೇರವಾಗಿ ಉಪಗ್ರಹಗಳಿಗೆ ಸಂಪರ್ಕಗೊಳ್ಳುತ್ತದೆ. ಹೀಗಾಗಿ ಸೆಲ್ಯುಲರ್ ವ್ಯಾಪ್ತಿ ಇಲ್ಲದ ಪ್ರದೇಶಗಳಲ್ಲೂ ಸಹ ಬಳಕೆದಾರರಿಗೆ ಧ್ವನಿ ಕರೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಇದು ತುರ್ತು ಸಂದರ್ಭಗಳಲ್ಲಿ ಅಥವಾ ಸಾಂಪ್ರದಾಯಿಕ ಟೆಲಿಕಾಂ ಮೂಲಸೌಕರ್ಯ ಲಭ್ಯವಿಲ್ಲದ ಸ್ಥಳಗಳಲ್ಲಿ ವಿಶೇಷವಾಗಿ ಉಪಯುಕ್ತವಾಗಿಸುತ್ತದೆ.

ಬಿಎಸ್ಎನ್ಎಲ್ ಹೇಳುವ ಪ್ರಕಾರ ಜಾಗತಿಕ ಉಪಗ್ರಹ ನೆಟ್ವರ್ಕ್ ಒದಗಿಸುವ ಇನ್ಮಾರ್ಸ್ಯಾಟ್ನ ಸಹಭಾಗಿತ್ವದಲ್ಲಿ ಹ್ಯಾಂಡ್ಸೆಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಹ್ಯಾಂಡ್ಸೆಟ್ ಕುಗ್ರಾಮದಂತಹ ಪ್ರದೇಶಗಳಲ್ಲಿ ಉಪಗ್ರಹ ಆಧಾರಿತ ಸಂವಹನವನ್ನು ಸಕ್ರಿಯಗೊಳಿಸುತ್ತದೆ.

ಬಿಎಸ್ಎನ್ಎಲ್ ಸ್ಯಾಟ್ಲೈಟ್ ಫೋನ್ನ ಪ್ರಮುಖ ಫೀಚರ್ಗಳು

ಬಿಎಸ್ಎನ್ಎಲ್ ಹೇಳುವಂತೆ ಸ್ಯಾಟ್ಲೈಟ್ ಫೋನ್ನಲ್ಲಿ ನಿರ್ಣಾಯಕ ಸಂವಹನಕ್ಕಾಗಿ ಅನೇಕ ಫೀಚರ್ಗಳನ್ನು ಇಡಲಾಗಿದೆ.

* ಮೊಬೈಲ್ ನೆಟ್‌ವರ್ಕ್ ವ್ಯಾಪ್ತಿಯನ್ನು ಮೀರಿದ ಪ್ರದೇಶಗಳಿಗೆ ಉಪಗ್ರಹ ಸಂಪರ್ಕ

* ಕುಗ್ರಾಮದಂತಹ ಸ್ಥಳಗಳಿಂದ ಧ್ವನಿ ಕರೆ

* ಸಂಕಷ್ಟದ ಸಂದರ್ಭಗಳಿಗೆ SOS ತುರ್ತು ಬೆಂಬಲ

* ಚಾರ್ಜಿಂಗ್ ಸೌಲಭ್ಯಗಳಿಂದ ದೂರವಿರುವ ವಿಸ್ತೃತ ಬಳಕೆಗೆ ದೀರ್ಘ ಬ್ಯಾಟರಿ ಬಾಳಿಕೆ

* ಸವಾಲಿನ ಪರಿಸರಕ್ಕಾಗಿ ನಿರ್ಮಿಸಲಾದ ದೃಢವಾದ ಮತ್ತು ಬಾಳಿಕೆ ಬರುವ ವಿನ್ಯಾಸ

ಬಿಎಸ್ಎನ್ಎಲ್ ಸ್ಯಾಟ್ಲೈಟ್ ಫೋನ್ ಅನ್ನು ಯಾರು ಖರೀದಿಸಬಹುದು?

ರಕ್ಷಣೆ, ಸಮುದ್ರ ಕಾರ್ಯಾಚರಣೆ, ವಿಪತ್ತು ಪ್ರತಿಕ್ರಿಯೆ, ಗಣಿಗಾರಿಕೆ, ದೂರದ ಕೈಗಾರಿಕಾ ಕಾರ್ಯಾಚರಣೆಗಳು, ಪ್ರತ್ಯೇಕ ಪ್ರದೇಶಗಳ ಮೂಲಕ ಪ್ರಯಾಣಿಸುವ ಯಾತ್ರಿಕರು ಮತ್ತು ಸಾಹಸ ಪ್ರಯಾಣದಲ್ಲಿ ಕೆಲಸ ಮಾಡುವ ಮಂದಿ ಖರೀದಿಸಬಹುದು. ಸಾಂಪ್ರದಾಯಿಕ ಮೊಬೈಲ್ ನೆಟ್ವರ್ಕ್ ಲಭ್ಯವಿಲ್ಲದ ಪ್ರದೇಶಗಳಲ್ಲಿ ವಿಶ್ವಾಸಾರ್ಹ ಸಂವಹನ ಅಗತ್ಯವಿರುವ ಜನರು ಮತ್ತು ಸಂಸ್ಥೆಗಳಿಗಾಗಿ ಸ್ಯಾಟ್ಲೈಟ ಹ್ಯಾಂಡ್ಸೆಟ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಆದರೆ ಸಂಸ್ಥೆಗಳು ಅಥವಾ ವ್ಯಕ್ತಿಗಳು ಈ ಹ್ಯಾಂಡ್ಸೆಟ್ ಖರೀದಿಸುವ ಮೊದಲು ದೂರ ಸಂಪರ್ಕ ಇಲಾಖೆಯಿಂದ ಅನುಮೋದನೆ ಪಡೆಯಬೇಕು. ಅಗತ್ಯ ಅನುಮತಿ ಇಲ್ಲದೆ ಸ್ಯಾಟಲೈಟ್ ಫೋನ್ ಹೊಂದಿರುವುದು ಅಥವಾ ನಿರ್ವಹಿಸುವುದು ಭಾರತೀಯ ನಿಯಮಗಳ ಅಡಿಯಲ್ಲಿ ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News