ನೀವು ಸೇವಿಸುವ ಹಣ್ಣುಗಳು ರಾಸಾಯನಿಕ ಮುಕ್ತವೆಂದು ಕಂಡುಕೊಳ್ಳುವುದು ಹೇಗೆ?
ಅಸಲಿ-ನಕಲಿ ಪತ್ತೆಗೆ ಸರಳ ಸೂತ್ರ ತಿಳಿದುಕೊಳ್ಳಿ
Photo Credit: AI
ಬೇಸಿಗೆ ಬಂದಿದೆ ಮತ್ತು ಮಾರುಕಟ್ಟೆಗಳಲ್ಲಿ ರಸಭರಿತವಾದ ಮಾವುಗಳಿಂದ ತೊಡಗಿ ಸಿಹಿಯಾದ ಲಿಚಿಗಳವರಗೆ ಸೀಸನಲ್ ಹಣ್ಣುಗಳು ತುಂಬಿಕೊಂಡಿವೆ. ಆದರೆ ಜೊತೆಗೆ ಕಲ್ಲಂಗಡಿ ತಿಂದು ಸಾವನ್ನಪ್ಪಿರುವಂತಹ ಸುದ್ದಿಗಳು ಕಳವಳವನ್ನೂ ತರುತ್ತಿವೆ! ರಾಸಾಯನಿಕವಾಗಿ ಮಾಗಿದ ಉತ್ಪನ್ನಗಳು ಮತ್ತು ನೈಜ ಹಣ್ಣುಗಳನ್ನು ಪ್ರತ್ಯೇಕಿಸಿ ನೋಡುವುದು ಹೇಗೆ ಎನ್ನುವ ಬಗ್ಗೆ ಆತಂಕವೂ ಜನರಲ್ಲಿದೆ. ಹಣ್ಣುಗಳನ್ನು ಕೃತಕವಾಗಿ ಮಾಗಿಸಲಾಗುತ್ತದೆ ಎಂಬ ವರದಿಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ತಟ್ಟೆಯಲ್ಲಿರುವ ವಸ್ತುಗಳು ನಮಗೆ ಕಾಣುವಷ್ಟು ಸುರಕ್ಷಿತವಾಗಿಲ್ಲದೆ ಇರಬಹುದು.
ಈ ಹಣ್ಣುಗಳನ್ನು ಹಣ್ಣಾಗುವಿಕೆಯನ್ನು ವೇಗಗೊಳಿಸಲು ಸಾಮಾನ್ಯವಾಗಿ ದುರುಪಯೋಗಪಡಿಸಿಕೊಳ್ಳುವ ರಾಸಾಯನಿಕಗಳಲ್ಲಿ ಒಂದು ಕ್ಯಾಲ್ಸಿಯಂ ಕಾರ್ಬೈಡ್. ಅಗ್ಗವಾಗಿ ದೊರೆಯುವ ಆದರೆ ಕಾನೂನುಬಾಹಿರ ಮಸಾಲಾ! ಕಾರ್ಬೈಡ್ ಮಾಗಿದ ಹಣ್ಣುಗಳ ಸೇವನೆಯಿಂದ ಗಂಭೀರ ಆರೋಗ್ಯ ಅಪಾಯಗಳು ಉಂಟಾಗಬಹುದು. ಹೀಗಾಗಿ ಐಎಸ್ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಗ್ಯಾಸ್ಟ್ರೋ ಸೈನ್ಸಸ್‌ನ ನಿರ್ದೇಶಕ ಮತ್ತು ವಿಭಾಗದ ಮುಖ್ಯಸ್ಥ ಡಾ ಶುಭಂ ವತ್ಸ್ಯ ಅವರು ಮಾವು, ಕರಬೂಜ, ಕಲ್ಲಂಗಡಿ, ಲಿಚಿ ಮತ್ತು ಅನನಾಸುಗಳನ್ನು ನೈಸರ್ಗಿಕವಾಗಿ ಮಾಗಿದ ಹಣ್ಣು ಮತ್ತು ರಾಸಾಯನಿಕದಿಂದ ಮಾಗಿದ ಹಣ್ಣುಗಳನ್ನು ಪ್ರತ್ಯೇಕಿಸಿ ಗುರುತಿಸುವ ಸರಳ ಚಿಹ್ನೆಗಳನ್ನು ತಿಳಿಸಿದ್ದಾರೆ.
►ಮಾವುಗಳು
ಕಾಂಡದ ಬಳಿ ಹಸಿರು ತೇಪೆಗಳೊಂದಿಗೆ ಪ್ರಕಾಶಮಾನವಾದ ಹಳದಿ ಬಣ್ಣದಲ್ಲಿರುವ ಅಸಮಾನವಾಗಿ ಮಾಗಿದ, ಸ್ಪರ್ಶಿಸುವಾಗ ಕಠಿಣವಾಗಿರುವ ಮತ್ತು ನೈಸರ್ಗಿಕ ಪರಿಮಳವಿಲ್ಲದ ಮಾವಿನಹಣ್ಣುಗಳನ್ನು ಕೃತಕವಾಗಿ ಮಾಗಿಸಿರಬಹುದು. ಇವುಗಳ ಸೇವನೆಯಿಂದ ಹೊಟ್ಟೆ ನೋವು, ವಾಕರಿಕೆ, ಅತಿಸಾರ, ತಲೆನೋವು ಮತ್ತು ಗಂಟಲು ಅಥವಾ ಬಾಯಿಯ ಕಿರಿಕಿರಿ ಉಂಟಾಗಬಹುದು. ನೈಸರ್ಗಿಕವಾಗಿ ಮಾಗಿದ ಮಾವು ಸಾಮಾನ್ಯವಾಗಿ ಸಮವಾಗಿ ಮೃದುವಾಗಿರುತ್ತದೆ ಮತ್ತು ಸಿಹಿ ವಾಸನೆ ಹೊಂದಿರುತ್ತದೆ.
►ಕರಬೂಜ
ಗಟ್ಟಿಯಾಗಿದ್ದರೂ ದುರ್ಬಲ ಸುವಾಸನೆ ತರುವ ಸಿಹಿ ಕಡಿಮೆ ಇರುವ ಏಕರೂಪವಲ್ಲದ ಹಳದಿ ಬಣ್ಣ ಹೊಂದಿರುವ ಕರಬೂಜ ಸಂದೇಹಾಸ್ಪದ. ಇವು ಹೊಟ್ಟೆ ನೋವು, ವಾಂತಿ, ಅತಿಸಾರ ಮತ್ತು ಗಂಟಲಿನ ಕಿರಕಿರಿಗೆ ಕಾರಣವಾಗಬಹುದು.
►ಕಲ್ಲಂಗಡಿ
ಕಲ್ಲಂಗಡಿ ಹಣ್ಣುಗಳು ನೋಡಲು ಆಕರ್ಷಕವಾಗಿರಬಹುದು. ಆದರೆ ಗುರುತಿಸುವುದು ಹೇಗೆ? ಕಳಪೆ ಸಿಹಿ ಮತ್ತು ಗಟ್ಟಿಯಾಗಿರುವ ಹಣ್ಣು ಸೇವಿಸಿದರೆ ಆರೋಗ್ಯ ಸಮಸ್ಯೆ ಬರಬಹುದು. ಜೀರ್ಣಕಾರಿ ಅಸ್ವಸ್ಥತೆ, ವಾಕರಿಕೆ, ಅತಿಸಾರ, ತಲೆನೋವು ಮತ್ತು ಬಾಯಿಯ ಕಿರಿಕಿರಿಯನ್ನು ಉಂಟುಮಾಡಬಹುದು.
►ಹೊಳೆಯುವ ಕೆಂಪಾಗಿರುವ ಲಿಚಿ
ಲಿಚಿಯು ತುಂಬಾ ಹೊಳೆಯುವ ಕೆಂಪು ಚರ್ಮ ಹೊಂದಿದ್ದರೆ, ಆದರೆ ದೃಢವಾದ ಮತ್ತು ಕಡಿಮೆ ರಸಭರಿತವಾದ ಮಾಂಸ ಮತ್ತು ಹೆಚ್ಚು ಸಿಹಿ ಇಲ್ಲದಿದ್ದರೆ ರಾಸಾಯನಿಕವಾಗಿ ಮಾಗಿಸಿರಬಹುದು. ಹೀಗಾಗಿ ಅಂತಹ ಲಿಚಿ ಸೇವಿಸಿದರೆ ಹೊಟ್ಟೆ ನೋವು, ವಾಕರಿಕೆ, ಅತಿಸಾರ, ತಲೆನೋವು ಮತ್ತು ಗಂಟಲು ಅಥವಾ ಬಾಯಿಯ ಕಿರಿಕಿರಿ ಉಂಟಾಗಬಹುದು.
►ಅನನಾಸು
ಹಳದಿ ಬಣ್ಣದ ಹೊರ ಸಿಪ್ಪೆಯನ್ನು ಹೊಂದಿದ್ದರೂ, ಗಟ್ಟಿಯಾಗಿರುವುದು, ಹೆಚ್ಚು ಪರಿಮಳವಿಲ್ಲದೆ ಇರುವುದು ಮತ್ತು ನೈಸರ್ಗಿಕ ಸಿಹಿಯ ಬದಲಿಗೆ ಹುಳಿ ರುಚಿ ಹೊಂದಿರುವುದು ರಾಸಾಯನಿಕವಾಗಿ ಮಾಗಿದ ಹಣ್ಣಾಗಿರಬಹುದು. ಕಾರ್ಬೈಡ್ ಬೆರೆಸಿದ ಅನನಾಸುಗಳನ್ನು ತಿನ್ನುವುದರಿಂದ ಹೊಟ್ಟೆ ನೋವು, ವಾಕರಿಕೆ, ವಾಂತಿ, ಅತಿಸಾರ ಮತ್ತು ಬಾಯಿಯ ಕಿರಿಕಿರಿ ಉಂಟಾಗಬಹುದು.
ಹೀಗಾಗಿ ಪ್ರಕಾಶಮಾನವಾದ ಬಣ್ಣ ಮಾತ್ರ ನೋಡುವ ಬದಲು ನೈಸರ್ಗಿಕ ವಾಸನೆ, ಮೃದು ಮತ್ತು ಸಿಹಿ ಇರುವ ಹಣ್ಣುಗಳನ್ನು ಪರಿಶೀಲಿಸಿ. ವಿಶ್ವಾಸಾರ್ಹ ಮಾರಾಟಗಾರರಿಂದ ಖರೀದಿಸುವುದು ಒಳಿತು. ತಿನ್ನುವ ಮೊದಲು ಹಣ್ಣುಗಳನ್ನು ಚೆನ್ನಾಗಿ ತೊಳೆಯುವುದು ಸಹ ಅಪಾಯ ಕಡಿಮೆ ಮಾಡುತ್ತದೆ.
ಮಾಹಿತಿ ಕೃಪೆ: ಇಂಡಿಯನ್ ಎಕ್ಸ್ಪ್ರೆಸ್