20 ವರ್ಷ ಮೇಲಿನವರಿಗೆ 6 ತಿಂಗಳಿಗೊಮ್ಮೆ ಕಡ್ಡಾಯ ಮೂತ್ರಪಿಂಡ ಪರೀಕ್ಷೆ; CKD ಎದುರಿಸಲು ಸಂಸದೀಯ ಸಮಿತಿ ಮುಂದಿಟ್ಟ ಶಿಫಾರಸುಗಳೇನು?

Update: 2026-08-12 20:06 IST

ಸಾಂದರ್ಭಿಕ ಚಿತ್ರ | Photo Credit : magnific.com

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವಂತಹ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಪ್ರಕರಣಗಳ ಹೆಚ್ಚಿನ ಅಪಾಯವಿರುವ ಗುಂಪುಗಳಲ್ಲಿ ಕಾಲಕಾಲಕ್ಕೆ ರೋಗಪರಿಶೀಲನೆಯ ಅಗತ್ಯವನ್ನು ಸಮಿತಿಯು ಗಮನಿಸಿದೆ.

ಮೂತ್ರಪಿಂಡ ವೈಫಲ್ಯ ಪ್ರಕರಣಗಳಿಗೆ ಆರೋಗ್ಯ ಸ್ಥಿತಿ ಹದಗೆಟ್ಟ ಬಳಿಕ ಚಿಕಿತ್ಸೆ ನೀಡುವತ್ತ ಗಮನಹರಿಸುವ ಬದಲು, ರೋಗದ ಪ್ರಗತಿಯನ್ನು ತಡೆಗಟ್ಟುವತ್ತ ಗಮನಹರಿಸುವ ನೀತಿ ಬದಲಾವಣೆಯನ್ನು ಗುರುತಿಸುವ ಸಲುವಾಗಿ ಸಂಸದೀಯ ಸಮಿತಿಯು 20 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಪ್ರತಿ 6 ತಿಂಗಳಿಗೊಮ್ಮೆ ಕಡ್ಡಾಯ ಮೂತ್ರಪಿಂಡ ಕಾರ್ಯ ಪರೀಕ್ಷೆಗಳನ್ನು ಪ್ರಸ್ತಾಪಿಸಿದೆ.

ಹೆಚ್ಚಿನ ಅಪಾಯದಲ್ಲಿರುವ ಎಲ್ಲಾ ವ್ಯಕ್ತಿಗಳ ವಾರ್ಷಿಕ ತಪಾಸಣೆಯ ಜೊತೆಗೆ ಇದನ್ನು ಮಾಡಲು ಶಿಫಾರಸು ಮಾಡಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಆರು ತಿಂಗಳಿಗೊಮ್ಮೆ ಮೂತ್ರಪಿಂಡ ಕಾರ್ಯ ಪರೀಕ್ಷೆಯನ್ನು (KFT) ಉಚಿತವಾಗಿ ಮತ್ತು ಬಡತನ ರೇಖೆಗಿಂತ ಮೇಲಿರುವವರಿಗೆ ಅಲ್ಪ ವೆಚ್ಚದಲ್ಲಿ ನಡೆಸಿಕೊಡಬೇಕು. ಈ ಯೋಜನೆಯನ್ನು ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮದಡಿ (NP-NCD) ಜಾರಿಗೊಳಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

►ಹೆಚ್ಚು ಅಪಾಯವಿರುವವರು ಯಾವ ಪರೀಕ್ಷೆ ಮಾಡಬೇಕು?

ರೋಗಪರಿಶೀಲನೆಯಲ್ಲಿ ಅಂದಾಜು ಗ್ಲೊಮೆರುಲರ್ ಶೋಧನೆ ದರ (eGFR) ಮತ್ತು ಮೂತ್ರದ ಅಲ್ಬುಮಿನ್/ಪ್ರೊಟೀನ್ ಪರೀಕ್ಷೆ ಬಳಸಿಕೊಂಡು ಮೂತ್ರಪಿಂಡ ಕಾರ್ಯದ ಮೌಲ್ಯಮಾಪನ ಒಳಗೊಂಡಿರಬೇಕು. ನಂತರ ಸೂಕ್ತ ರೆಫರಲ್ ಮತ್ತು ಫಾಲೋಅಪ್ ಇರಬೇಕು ಎಂದು ಶಿಫಾರಸು ಮಾಡಲಾಗಿದೆ.

ಹೀಗಾಗಿ ಸಮಿತಿಯು ಎಲ್ಲಾ ಹೆಚ್ಚಿನ ಅಪಾಯದ ವ್ಯಕ್ತಿಗಳ ನಿಯಮಿತ ವಾರ್ಷಿಕ CKD (ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ) ತಪಾಸಣೆ ಮತ್ತು 20 ವರ್ಷ ಹಾಗೂ ಮೇಲ್ಪಟ್ಟ ವಯಸ್ಸಿನ ಎಲ್ಲಾ ವ್ಯಕ್ತಿಗಳ ಆರು ತಿಂಗಳಿಗೊಮ್ಮೆ KFT ಅನ್ನು ಸಾಂಸ್ಥಿಕಗೊಳಿಸಬೇಕು ಎಂದು ಶಿಫಾರಸು ಮಾಡಿದೆ.

“NP-NCD ಅಡಿಯಲ್ಲಿ ಬಡತನದ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ (BPL) ಉಚಿತವಾಗಿ ಮತ್ತು ಬಡತನದ ರೇಖೆಗಿಂತ ಮೇಲಿರುವ ವ್ಯಕ್ತಿಗಳಿಗೆ (APL) ಅಲ್ಪ ವೆಚ್ಚದಲ್ಲಿ ಆರಂಭಿಕ ರೋಗನಿರ್ಣಯ ನಡೆಸುವುದು ಮತ್ತು ರೋಗದ ಪ್ರಗತಿಯನ್ನು ವಿಳಂಬಗೊಳಿಸಲು ಸಾಧ್ಯವಾಗಿಸುವಂತೆ ಸಚಿವಾಲಯವು ಶಿಫಾರಸು ಮಾಡಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೆಚ್ಚಿನ ಅಪಾಯವಿರುವ ಗುಂಪುಗಳಲ್ಲಿ ಕಾಲಕಾಲಕ್ಕೆ ರೋಗಪರಿಶೀಲನೆಯ ಅಗತ್ಯವನ್ನು ಸಮಿತಿಯು ಗಮನಿಸಿದೆ. ಅಂದರೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವಂತಹ ಮಂದಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಪ್ರಕರಣಗಳ ಹೆಚ್ಚಿನ ಅಪಾಯ ಹೊಂದಿರುವುದನ್ನು ಸಮಿತಿ ಗಮನಿಸಿದೆ.

►ಆದ್ಯತೆಯ ಗುಂಪುಗಳಲ್ಲಿ ಯಾರು ಬರುತ್ತಾರೆ?

60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು, ಮೂತ್ರಪಿಂಡ ಕಾಯಿಲೆ, ಬೊಜ್ಜು ಅಥವಾ ತಂಬಾಕು ಬಳಕೆಯ ಕುಟುಂಬದ ಇತಿಹಾಸ ಹೊಂದಿರುವ ಮಂದಿ ಮತ್ತು ತೀವ್ರವಾದ ಮೂತ್ರಪಿಂಡದ ಗಾಯ, ಪುನರಾವರ್ತಿತ ಮೂತ್ರನಾಳದ ಸೋಂಕುಗಳು, ಪುನರಾವರ್ತಿತ ಮೂತ್ರಪಿಂಡದ ಕಲ್ಲುಗಳು ಅಥವಾ ಸ್ಟಿರಾಯ್ಡ್ ಅಲ್ಲದ ಉರಿಯೂತದ ಔಷಧಿಗಳು (NSAID) ಸೇರಿದಂತೆ ನೆಫ್ರಾಟಾಕ್ಸಿಕ್ ಔಷಧಿಗಳಿಗೆ ದೀರ್ಘಕಾಲ ಒಡ್ಡಿಕೊಂಡ ಇತಿಹಾಸ ಹೊಂದಿದವರು ಪದೇಪದೇ ರೋಗಪರಿಶೀಲನೆ ಮಾಡಿಸಿಕೊಳ್ಳುವ ಅಗತ್ಯವಿದೆ.

ಸಾರ್ವಜನಿಕ ಮತ್ತು ಖಾಸಗಿ ರೋಗನಿರ್ಣಯ ಪ್ರಯೋಗಾಲಯಗಳಲ್ಲಿ ನಡೆಸಲಾಗುವ ಪ್ರತಿ ಸೀರಂ ಕ್ರಿಯೇಟಿನೈನ್ ಪರೀಕ್ಷೆಯು ಸ್ವಯಂಚಾಲಿತವಾಗಿ eGFR (estimated Glomerular Filtration Rate) ವರದಿಯನ್ನು ಒಳಗೊಂಡಿರಬೇಕು ಎನ್ನುವುದು ಸಮಿತಿ ಮಾಡಿರುವ ಪ್ರಮುಖ ಶಿಫಾರಸುಗಳಲ್ಲಿ ಒಂದಾಗಿದೆ. ಮುಖ್ಯವಾಗಿ CKD-EPI ಸಮೀಕರಣವನ್ನು (ಮೂತ್ರಪಿಂಡಗಳು ರಕ್ತವನ್ನು ಎಷ್ಟು ಚೆನ್ನಾಗಿ ಫಿಲ್ಟರ್ ಮಾಡುತ್ತವೆ ಎಂಬುದನ್ನು ಅಂದಾಜು ಮಾಡಲು ವ್ಯಾಪಕವಾಗಿ ಬಳಸಲಾಗುವ ವೈದ್ಯಕೀಯ ಸೂತ್ರ) ಬಳಸಿ ಲೆಕ್ಕ ಹಾಕಬೇಕು. ರೋಗಿಗೆ ಪ್ರತ್ಯೇಕ ಪರೀಕ್ಷಾ ವಿನಂತಿ ಅಥವಾ ಹೆಚ್ಚುವರಿ ವೆಚ್ಚದ ಅಗತ್ಯವಿಲ್ಲದೆ ಈ ಪರೀಕ್ಷೆಯಾಗಬೇಕು ಎಂದು ಶಿಫಾರಸು ಮಾಡಲಾಗಿದೆ.

ಪ್ರತಿ ವರ್ಷ ಗಂಭೀರ ಮೂತ್ರಪಿಂಡ ಕಾಯಿಲೆ ಇರುವ ಸುಮಾರು 2.2 ಲಕ್ಷ ಹೊಸ ರೋಗಿಗಳು ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ ವಾರ್ಷಿಕವಾಗಿ ಸುಮಾರು 3.4 ಕೋಟಿ ಡಯಾಲಿಸಿಸ್ ಅವಧಿಗಳ ಹೆಚ್ಚುವರಿ ಬೇಡಿಕೆ ಸೃಷ್ಟಿಯಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News