ಯೋಜನೆಗಳಿಗೆ ಅರಣ್ಯ ತೆರವುಗೊಳಿಸಲು ಗ್ರಾಮಸಭೆಯ ಅನುಮತಿಗೆ ಕಾನೂನಿನಡಿ ಅವಕಾಶವಿಲ್ಲ ಎಂದು ಬುಡಕಟ್ಟು ಸಚಿವಾಲಯ ಹೇಳಿರುವುದೇಕೆ?
ಸಾಂದರ್ಭಿಕ ಚಿತ್ರ | Photo Credit : PTI
ವಿಳಂಬವಾದ ಸರ್ಕಾರಿ ಯೋಜನೆಗಳ ಕುರಿತು ಕೇಂದ್ರ ವಿದ್ಯುತ್ ಸಚಿವಾಲಯದ ಜೊತೆಗೆ ಚರ್ಚೆ ನಡೆಸಿದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು 2006ರ ಕಾನೂನಿನಡಿ “ಅರಣ್ಯ ತೆರವುಗೊಳಿಸಲು ಗ್ರಾಮ ಸಭೆಯ ಅನುಮತಿ ಪಡೆಯಲು ಯಾವುದೇ ಅವಕಾಶವಿಲ್ಲ” ಎಂದು ಹೇಳಿದೆ.
ಅರಣ್ಯ ತೆರವುಗೊಳಿಸಲು ಗ್ರಾಮ ಸಭೆಯ ಒಪ್ಪಿಗೆ ಪಡೆಯುವುದಕ್ಕೆ ಸಂಬಂಧಿಸಿದಂತಹ ವಿಷಯಗಳು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಅರಣ್ಯ ತೆರವುಗೊಳಿಸಲು ‘ಅರಣ್ಯ ಹಕ್ಕುಗಳ ಕಾಯ್ದೆ’ (FRA) ಅಡಿಯಲ್ಲಿ ಶೇ 100ರಷ್ಟು ಗ್ರಾಮ ಸಭೆಯ ಒಪ್ಪಿಗೆಯ ಅಡಚಣೆಯಿಂದಾಗಿ ವಿಳಂಬವಾದ ಸರ್ಕಾರಿ ಯೋಜನೆಗಳ ಕುರಿತು ಕೇಂದ್ರ ವಿದ್ಯುತ್ ಸಚಿವಾಲಯದ ಜೊತೆಗೆ ಚರ್ಚೆ ನಡೆಸಿದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು 2006ರ ಕಾನೂನಿನಡಿ “ಅರಣ್ಯ ತೆರವುಗೊಳಿಸಲು ಗ್ರಾಮ ಸಭೆಯ ಒಪ್ಪಿಗೆ ಪಡೆಯಲು ಯಾವುದೇ ಅವಕಾಶವಿಲ್ಲ” ಎಂದು ಹೇಳಿದೆ.
ಆಗಸ್ಟ್ 31ರಂದು ವಿದ್ಯುತ್ ಸಚಿವಾಲಯದ ರಾಷ್ಟ್ರೀಯ ಜಲವಿದ್ಯುತ್ ನಿಗಮ (NHPC) ಡೆಸ್ಕ್ಗೆ ಅಧಿಕೃತ ಸಂವಹನದಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಸ್ಪಷ್ಟನೆ ನೀಡಿದೆ. “ಪರಿಶಿಷ್ಟ ಬುಡಕಟ್ಟುಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳ (ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯ್ದೆ, 2006 ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳಲ್ಲಿ ಹಂತ -2 ಅರಣ್ಯ ತೆರವುಗೊಳಿಸಲು ಗ್ರಾಮ ಸಭೆಯ ಒಪ್ಪಿಗೆಯನ್ನು ಪಡೆಯಲು ಯಾವುದೇ ಅವಕಾಶವಿಲ್ಲ” ಎಂದು ತಿಳಿಸಿದೆ. ಹೀಗಾಗಿ ಅಂತಹ ವಿಚಾರಗಳು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗಾಗಿ ಬೇರೆಡೆಗೆ ತಿರುಗಿಸುವ ಬಗ್ಗೆ ಸ್ವತಃ ಗ್ರಾಮ ಸಭೆಯ ಅನುಮತಿಯ ಬಗ್ಗೆ FRA (ಹಕ್ಕುಗಳ ಗುರುತಿಸುವಿಕೆ, ಅನುಮತಿ, ದಾಖಲೆ) ನೇರವಾಗಿ ಹೇಳುವುದಿಲ್ಲ. ಆದರೆ ಅರಣ್ಯ ಡೈವರ್ಶನ್ (ಬೇರೆ ಉದ್ದೇಶಕ್ಕೆ ಬಳಸುವುದು) ನಿಯಮಗಳು ಹೇಳುವಂತೆ FRA ಪ್ರಕ್ರಿಯೆಗಳು ಮುಗಿದ ನಂತರವೇ ಅರಣ್ಯವನ್ನು ಬೇರೆ ಉದ್ದೇಶಕ್ಕೆ ಬಳಸಲು ಸರ್ಕಾರ ಅಧಿಕೃತ ಅನುಮತಿ ನೀಡಬಹುದು.
1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಸಂಭಾವ್ಯ FRA ಹಕ್ಕುದಾರರನ್ನು ಗುರುತಿಸುವುದು, ಅನ್ವಯವಾಗುವಲ್ಲಿ ಅವರ ಹಕ್ಕುಗಳನ್ನು ಗುರುತಿಸುವುದು, ಈ ಹಕ್ಕುಗಳನ್ನು ನೀಡುವುದು ಮತ್ತು ನಂತರ ಹೇಳಲಾದ ಉದ್ದೇಶಕ್ಕಾಗಿ ಅರಣ್ಯ ಭೂಮಿ ಬೇರೆಡೆ ಬಳಸಿಕೊಳ್ಳುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸಂಬಂಧಿಸಿದ ಗ್ರಾಮ ಸಭೆಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವುದು ಎಲ್ಲವೂ FRA ಅಡಿಯಲ್ಲಿ ಕಡ್ಡಾಯವಾಗಿದೆ. ಗ್ರಾಮ ಸಭೆಗಳಿಂದ NOC ಪಡೆಯುವ ಈ ವಿಧಾನವನ್ನು ಸಾಮಾನ್ಯವಾಗಿ ಅರಣ್ಯ ತೆರವುಗಾಗಿ ಗ್ರಾಮ ಸಭೆಯ ಒಪ್ಪಿಗೆಯ ಕಾರ್ಯವಿಧಾನ ಎಂದು ಕರೆಯಲಾಗುತ್ತದೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಕಾನೂನಿನ ಅನುಷ್ಠಾನಕ್ಕೆ ಜವಾಬ್ದಾರರಾಗಿರುವ ನೋಡಲ್ ಸಚಿವಾಲಯ ಎಂದು FRA ಸ್ಪಷ್ಟವಾಗಿ ಹೇಳುತ್ತದೆ.
ಯುಪಿಯ ಮತ್ತು ಎನ್ಡಿಎ ಸರ್ಕಾರಗಳ ಅಡಿಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಮಾಜಿ ಕಾನೂನು ಸಲಹೆಗಾರರಾಗಿದ್ದ ಸುಪ್ರೀಂ ಕೋರ್ಟ್ ವಕೀಲರಾದ ಶೋಮೋನಾ ಖನ್ನಾ ಸಚಿವಾಲಯದ ಈಗಿನ ನಿಲುವಿಗೆ ಪ್ರತಿಕ್ರಿಯಿಸಿ, “ವಿಚಿತ್ರವಾಗಿದೆ. ಅಂತಹ ವಿಷಯಗಳು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿಲ್ಲದಿದ್ದರೆ, ಯಾರ ವ್ಯಾಪ್ತಿಯಲ್ಲಿದೆ?” ಎಂದು ಪ್ರಶ್ನಿಸಿರುವುದಾಗಿ ವರದಿಯಾಗಿದೆ.
ಆಗಸ್ಟ್ 3ರಂದು NHPC ಲಿಮಿಟೆಡ್ನ ಸಾರ್ವಜನಿಕ ಉದ್ಯಮಗಳ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಯ ವರದಿಯ ನಂತರ ಕೇಂದ್ರ ವಿದ್ಯುತ್ ಸಚಿವಾಲಯ ಮತ್ತು ಬುಡಕಟ್ಟು ಸಚಿವಾಲಯದ ನಡುವೆ ಚರ್ಚೆ ಪ್ರಾರಂಭವಾಗಿದ್ದವು. Teesta-IV HEP ಯಂತಹ ಯೋಜನೆಗಳು ಸಣ್ಣ ಅಲ್ಪಸಂಖ್ಯಾತ ಗ್ರಾಮ ಪಂಚಾಯತ್ಗಳ ಒಪ್ಪಿಗೆ ಬಾಕಿ ಇರುವುದರಿಂದ ಅನಿರ್ದಿಷ್ಟವಾಗಿ ಸ್ಥಗಿತಗೊಂಡಿವೆ ಎಂದು ಎಂದು ಹೇಳಲಾಗಿತ್ತು. ಗ್ರಾಮ ಸಭೆಯ ಅನುಮತಿ ಪ್ರಕ್ರಿಯೆಯೇ ಯೋಜನೆಗಳಿಗೆ ದೊಡ್ಡ ಅಡಚಣೆಯಾಗಿದೆ. ಸಾಮಾನ್ಯವಾಗಿ ಯೋಜನೆಗಳಿಗೆ ಅರಣ್ಯ ಅನುಮತಿ ಪಡೆಯಲು 106 ತಿಂಗಳು ತೆಗೆದುಕೊಳ್ಳಲಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು.
ಬಿಜೆಪಿ ಸಂಸದ ಬೈಜಯಂತ ಪಾಂಡ ನೇತೃತ್ವದ ಸಮಿತಿಯು ತನ್ನ ವರದಿಯಲ್ಲಿ, “ರಾಷ್ಟ್ರೀಯ ಪ್ರಾಮುಖ್ಯತೆಯ ದೊಡ್ಡ ಜಲವಿದ್ಯುತ್ ಮೂಲಸೌಕರ್ಯ ಯೋಜನೆಗಳಿಗೆ ತಡೆಯಿಲ್ಲದೆ ಮುಂದುವರಿಯಲು ಶೇ 100 ಒಪ್ಪಿಗೆಯ ಅಗತ್ಯವಿಲ್ಲ. ಶೇ 70-75ರಷ್ಟು ಗ್ರಾಮಸಭೆಗಳ ಒಪ್ಪಿಗೆ ಸಾಕು” ಎಂದು ಹೇಳಿದೆ. ಅಲ್ಲದೆ, ವಿದ್ಯುತ್ ಸಚಿವಾಲಯವು ಈ ಸಂಬಂಧ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಜೊತೆಗೆ ಚರ್ಚಿಸಬೇಕು ಎಂದು ವರದಿ ಶಿಫಾರಸು ಮಾಡಿದೆ.
ಶೇ 100ರಷ್ಟು ಅನುಮತಿ ಅಗತ್ಯವೆನ್ನುವ ನಿಯಮ ಸಾಮಾಜಿಕವಾಗಿ ಒಳ್ಳೆಯ ಉದ್ದೇಶ ಹೊಂದಿದ್ದರೂ ಪ್ರಾಯೋಗಿಕವಾಗಿ ಕೆಲವೊಮ್ಮೆ ನಿರ್ದಿಷ್ಟ ಹಿತಾಸಕ್ತಿದಾರರ ಗುಂಪುಗಳಿಂದ ಉಂಟಾಗುವ ವಿಳಂಬಗಳಿಗೆ ಕಾರಣವಾಗಿದೆ. ಆ ಕಾರಣದಿಂದ ರಾಷ್ಟ್ರ ಪ್ರಾಮುಖ್ಯತೆಯ ಯೋಜನೆಗಳ ವೇಳಾಪಟ್ಟಿಯ ಮೇಲೆ ಪರಿಣಾಮವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಅರಣ್ಯ ಅನುಮತಿಗಾಗಿ ಗ್ರಾಮ ಸಭೆಯ ಅನುಮತಿಗೆ ಸಂಬಂಧಿಸಿದ ವಿಷಯಗಳಿಂದ ದೂರವಿರುವ ಬಗ್ಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ನಿಲುವು ಅನೇಕ ಯೋಜನೆಗಳಲ್ಲಿ ಕಂಡುಬಂದಿದೆ. ನಿಕೋಬಾರ್ ಮೆಗಾ ಮೂಲಸೌಕರ್ಯ ಯೋಜನೆ ಅಥವಾ ಮಧ್ಯಪ್ರದೇಶ ಮತ್ತು ಕರ್ನಾಟಕ ಮತ್ತು ಇತರ ಅನೇಕ ರಾಜ್ಯಗಳಲ್ಲಿ FRA ಅನುಷ್ಠಾನಕ್ಕೆ ಸಂಬಂಧಿಸಿದ ಇತರ ಸ್ವತಂತ್ರ ಪ್ರಕರಣಗಳಲ್ಲೂ ಇದೇ ನಿಲುವನ್ನು ಬುಡಕಟ್ಟು ಸಚಿವಾಲಯ ತಳೆದಿದೆ. ಈ ಯೋಜನೆಗಳ ಸಂದರ್ಭದಲ್ಲೂ ಅರಣ್ಯ ಹಕ್ಕುಗಳ ಪ್ರಕರಣಗಳಲ್ಲಿ ತನಗೆ ಯಾವುದೇ ಪಾತ್ರವಿಲ್ಲ ಎಂದು ಸಚಿವಾಲಯ ಹೇಳಿದೆ.
ಕೇಂದ್ರ ಸರ್ಕಾರ ಕಾನೂನು ಮಾತ್ರ ನಿರ್ಮಿಸುತ್ತದೆ. ಅದನ್ನು ಜಾರಿಗೆ ತರುವ ಅಧಿಕಾರ ಕಡ್ಡಾಯವಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳಿಗೆ ಇದೆ ಎಂದು ಬುಡಕಟ್ಟು ಸಚಿವಾಲಯ ವಾದಿಸಿದೆ.
ಕೃಪೆ: thehindu.com