Photos: @bittu_tabahi/Instagram

ಸುರೇಂದ್ರ ಅಧಿಕೃತ ಅಭಿಯಾನ ಅಥವಾ ದೊಡ್ಡ ಪರಿಸರ ಅಭಿಯಾನದ ಭಾಗವಾಗಿ ಸ್ವಚ್ಛತಾ ಕಾರ್ಯ ನಡೆಸುತ್ತಿರಲಿಲ್ಲ. ಬದಲಾಗಿ, ಮೂಲಭೂತ ಸಾಮಗ್ರಿಗಳಿಗೆ ಸ್ವತಃ ಹಣ ಪಾವತಿಸುತ್ತಿದ್ದರು. ನದಿಯಿಂದ ತ್ಯಾಜ್ಯ ತೆಗೆಯಲು ನಿತ್ಯವೂ ಹಾಜರಾಗುತ್ತಿದ್ದರು.

ಮಧ್ಯಪ್ರದೇಶದ 20 ವರ್ಷದ ಯುವಕನೊಬ್ಬ ತಿಂಗಳುಗಟ್ಟಲೆ ಕಲುಷಿತಗೊಂಡ ನದಿಯನ್ನು ಸ್ವಚ್ಛಗೊಳಿಸಿ, ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುತ್ತಿದ್ದರು. ಅವರ ಪ್ರಯತ್ನಗಳು ಇದೀಗ ಡಚ್ ಸಿಇಒ ಬೋಯನ್ ಸ್ಲಾಟ್ ಅವರ ಗಮನ ಸೆಳೆದಿದ್ದು, ತಮ್ಮ ಸಂಸ್ಥೆಯಾದ ‘ದಿ ಓಷನ್ ಕ್ಲೀನಪ್‌’ ಜೊತೆಗೆ ಕೆಲಸ ಮಾಡಲು ಅವರನ್ನು ಆಹ್ವಾನಿಸಿದ್ದಾರೆ.

Full View

ಆನ್‌ಲೈನ್‌ನಲ್ಲಿ ‘ಬಿಟ್ಟು ತಬಾಹಿ’ ಎಂದು ಕರೆಯಲಾಗುವ ಸುರೇಂದ್ರ ಸಿಂಗ್ ಚೌಧರಿ, ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಜೊತೆಗೆ ಅಜ್ನರ್ ನದಿಯಿಂದ ಪ್ಲಾಸ್ಟಿಕ್, ಎಸೆದ ತ್ಯಾಜ್ಯ ಹಾಗೂ ಇತರ ಕಸವನ್ನು ಹೊರತೆಗೆಯುತ್ತಿದ್ದಾರೆ.

ಸುರೇಂದ್ರ ಅಧಿಕೃತ ಅಭಿಯಾನ ಅಥವಾ ದೊಡ್ಡ ಪರಿಸರ ಅಭಿಯಾನದ ಭಾಗವಾಗಿ ಸ್ವಚ್ಛತಾ ಕಾರ್ಯ ನಡೆಸುತ್ತಿರಲಿಲ್ಲ. ಬದಲಾಗಿ, ಮೂಲಭೂತ ಸಾಮಗ್ರಿಗಳಿಗೆ ಸ್ವತಃ ಹಣ ಪಾವತಿಸುತ್ತಿದ್ದರು. ನದಿಯಿಂದ ತ್ಯಾಜ್ಯ ತೆಗೆಯಲು ನಿತ್ಯವೂ ಹಾಜರಾಗುತ್ತಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಸುರೇಂದ್ರ ಅವರು ಅಜ್ನರ್ ನದಿಯ ಮೊದಲ ಮತ್ತು ನಂತರದ ಚಿತ್ರವನ್ನು ತೋರಿಸಿದ್ದಾರೆ. ಮೊದಲ ಚಿತ್ರವು ನೀರು ಮತ್ತು ಅದರ ಸುತ್ತಲಿನ ಪ್ರದೇಶಗಳು ತ್ಯಾಜ್ಯದಿಂದ ಮುಚ್ಚಿರುವುದನ್ನು ತೋರಿಸಿದರೆ, ಎರಡನೆಯದು ಅವರ ಪ್ರಯತ್ನಗಳ ಬಳಿಕ ಸಂಪೂರ್ಣ ವಿಭಿನ್ನ ನೋಟವನ್ನು ನೀಡಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಹಾಕಿದ ಚಿತ್ರಗಳಲ್ಲಿ ಒಂದು, ಸಂಸ್ಥೆ ಅಥವಾ ದೊಡ್ಡ ತಂಡದ ಬೆಂಬಲವಿಲ್ಲದೆಯೂ ಒಬ್ಬ ವ್ಯಕ್ತಿಯ ಪರಿಶ್ರಮದಿಂದ ವ್ಯತ್ಯಾಸ ತರಬಹುದು ಎನ್ನುವುದನ್ನು ತೋರಿಸಿವೆ.

ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೀಗ ಸಾಗರ ಮತ್ತು ನದಿಗಳಿಂದ ಪ್ಲಾಸ್ಟಿಕ್ ಮಾಲಿನ್ಯ ತೆಗೆದುಹಾಕಲು ಕೆಲಸ ಮಾಡುವ ‘ದಿ ಓಷನ್ ಕ್ಲೀನಪ್’ ಸಂಸ್ಥೆಯ ಡಚ್ ಸಿಇಒ ಬೋಯನ್ ಸ್ಲಾಟ್ ಅವರ ಗಮನ ಸೆಳೆದಿದೆ.

‘ಎಕ್ಸ್‌’ ಖಾತೆಯೊಂದು ಅವರ ಕತೆಯನ್ನು ಹಂಚಿಕೊಂಡು, “20 ವರ್ಷದ ವಯಸ್ಸಿನ ಯುವಕ ತಿಂಗಳುಗಳಿಂದ ಏಕಾಂಗಿಯಾಗಿ ಕಲುಷಿತಗೊಂಡ ಅಜ್ನರ್ ನದಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ನದಿಯ ಮೊದಲು ಮತ್ತು ನಂತರದ ಚಿತ್ರಗಳನ್ನು ಇಲ್ಲಿ ನೋಡಬಹುದು” ಎಂದು ಫೋಟೊ ಸಮೇತ ಪೋಸ್ಟ್ ಮಾಡಿತ್ತು. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸ್ಲಾಟ್ ಅವರು ಸರಳ ಆಹ್ವಾನವಾಗಿ, “ನಮ್ಮೊಂದಿಗೆ ಕೆಲಸ ಮಾಡಲು ಬನ್ನಿ” ಎಂದು ಕರೆದಿದ್ದಾರೆ.

ಈ ಸಣ್ಣ ಪ್ರತಿಕ್ರಿಯೆ ಸುರೇಂದ್ರ ಚೌಧರಿಯ ಸ್ವಚ್ಛತಾ ಪ್ರಯತ್ನಕ್ಕೆ ಹೊಸ ಅಧ್ಯಾಯ ಸೇರಿಸಿದೆ. ಯುವಕ ತನ್ನ ಸ್ಥಳೀಯ ನದಿಯನ್ನು ಸ್ವಚ್ಛಗೊಳಿಸುವ ವೈಯಕ್ತಿಕ ಪ್ರಯತ್ನವಾಗಿ ಪ್ರಾರಂಭವಾದ ಕತೆ, ಪ್ಲಾಸ್ಟಿಕ್ ಮಾಲಿನ್ಯ ನಿಭಾಯಿಸಲು ಜಾಗತಿಕವಾಗಿ ಹೆಸರುವಾಸಿಯಾದ ಸಂಸ್ಥೆಯೊಂದಿಗೆ ಕೆಲಸ ಮಾಡುವ ಅವಕಾಶವಾಗಿ ಪರಿವರ್ತನೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor