×
Ad

IIT ಬಾಂಬೆಯ ಹಳೆ ವಿದ್ಯಾರ್ಥಿ ಮೆಟಾದ ಒಂದು ದಶಲಕ್ಷ ಡಾಲರ್ ಉದ್ಯೋಗ ತಿರಸ್ಕರಿಸಿದ್ದೇಕೆ?

Update: 2026-07-10 19:00 IST

Photo Credit : Facebook 

ಟೆಕ್ ಜಗತ್ತಿನಲ್ಲಿ ದೊಡ್ಡ ಹೆಸರಾಗಿರುವ ರಿಷಬ್ ಅಗರ್ವಾಲ್ ಅವರ ಪ್ರತಿಭೆಯನ್ನು ಗುರುತಿಸಿದ ಮೆಟಾ ಕಂಪನಿಯು ತನ್ನ ಎಐ (Artificial Intelligence) ವಿಭಾಗದಲ್ಲಿ ಪ್ರಮುಖ ಹುದ್ದೆಯ ಆಫರ್ ನೀಡಿತ್ತು. ತಕ್ಕ ವೇತನವಾಗಿ ವಾರ್ಷಿಕ 1 ದಶಲಕ್ಷ ಡಾಲರ್ (8.5 ಕೋಟಿ ರೂ.) ಸಂಬಳದ ಬೃಹತ್ ಆಫರ್ ದೊರೆತಿತ್ತು. ಆದರೆ ರಿಷಬ್ ತಮ್ಮ ಸ್ವಂತ ಕಂಪನಿಯಲ್ಲಿ ಕೆಲಸ ಮಾಡಲು ಬಯಸಿದ್ದರು. ಭಾರತದಲ್ಲಿಯೇ AI (ಕೃತಕ ಬುದ್ಧಿಮತ್ತೆ) ಕ್ಷೇತ್ರದಲ್ಲಿ ಹೊಸದಾಗಿ ಏನಾದರೂ ಮಾಡಬೇಕು ಎನ್ನುವ ಹಂಬಲವಿತ್ತು. ಹೀಗಾಗಿ ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ನೀಡಿದ ಆಫರ್ ಅನ್ನು ತಿರಸ್ಕರಿಸಿದ್ದಾರೆ.

ಎಕ್ಸ್‌ ನಲ್ಲಿ ವೈರಲ್ ಆದ ಪೋಸ್ಟ್ ಏನು?

ಏಳೂವರೆ ವರ್ಷಗಳಲ್ಲಿ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವವಿರುವ ರಿಷಬ್ ಅಗರ್ವಾಲ್ ಭಾರತದಲ್ಲಿ ವೈರಲ್ ಪೋಸ್ಟ್ ಒಂದರ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಆ ಪೋಸ್ಟ್ ಏನು?

“ಐಐಟಿ ಬಾಂಬೆಯಿಂದ ಕಂಪ್ಯೂಟರ್ ಸೈನ್ಸ್ ಓದಿದ ರಿಷಬ್ ಅವರು ಗೂಗಲ್ ಬ್ರೈನ್, ಡೀಪ್ ಮೈಂಡ್, ವೇಮೊನಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಕ್ ಝುಕರ್ಬರ್ಗ್ ವೈಯಕ್ತಿಕವಾಗಿ ಆಫರ್ ನೀಡಿದಾಗ ನಿರಾಕರಿಸಿದ್ದಾರೆ. ಇಂದು ಅವರು ಪೀರಿಯಾಡಿಕ್ ಲ್ಯಾಬ್ಸ್ ಎಂಬ ಮುಂದಿನ ಪೀಳಿಗೆಯ AI ಕಂಪನಿ ನಿರ್ಮಿಸುತ್ತಿದ್ದಾರೆ. ನಮ್ಮಲ್ಲಿ ಯಾರೂ ಅವರ ಬಗ್ಗೆ ತಿಳಿದಿರದೆ ಇರಬಹುದು. ಆದರೆ AI ಜಗತ್ತಿನಲ್ಲಿ ಅವರು ದೊಡ್ಡ ಹೆಸರು. ಇದೀಗ ಅವರು NVIDIA ಮತ್ತು ಜೆಫ್ ಬೆಜೋಸ್ ಅವರಿಂದ ಬೆಂಬಲಿತವಾದ ಕಂಪನಿ ಸ್ಥಾಪಿಸಿದ್ದಾರೆ. ಅವರೀಗ ಹೊಸ ಮೆಟೀರಿಯಲ್ಗಳು, ಔಷಧಿಗಳು ಮತ್ತು ಹೊಸ ಭೌತಶಾಸ್ತ್ರದ ಅನ್ವೇಷಣೆಗೆ ನೈಜ-ಜಗತ್ತಿನ ಪ್ರಯೋಗಗಳಿಗೆ ಹೈಪೊಥಿಸಿಸ್ ಜನರೇಟ್ ಮಾಡಬಲ್ಲ AI ವಿಜ್ಞಾನಿಯನ್ನು ನಿರ್ಮಿಸುತ್ತಿದ್ದಾರೆ. ದೊಡ್ಡ ಕೊಳದಲ್ಲಿ ಸಣ್ಣ ಮೀನಾಗುವ ಬದಲು ಸಣ್ಣ ಕೊಳದಲ್ಲಿ ದೊಡ್ಡ ಮೀನಾಗಲು ಪ್ರಯತ್ನಿಸುತ್ತಿದ್ದಾರೆ” ಎಂದು ಸಾಫ್ಟ್ವೇರ್ ಎಂಜಿನಿಯರ್ ವಿಕಾಸ್ ಅವರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ರಿಷಬ್ ಅಗರ್ವಾಲ್ ರೀಪೋಸ್ಟ್ ಮಾಡಿದ ನಂತರ ಭಾರತದಲ್ಲಿ ಸುದ್ದಿಯಾಗಿದ್ದಾರೆ.

►7.5 ವರ್ಷಗಳ ಟೆಕ್ ಅನುಭವವೇನು?

ರಿಷಬ್ ಜೆಇಇಯಲ್ಲಿ ಅಖಿಲ ಭಾರತದಲ್ಲಿ 33ನೇ ರ‍್ಯಾಂಕ್ ಪಡೆದು ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಓದಿದ್ದರು. ಮೆಟಾ ಜಾಗತಿಕವಾಗಿ ಪ್ರಮುಖ ಪ್ರತಿಭೆಗಳನ್ನು ನೇಮಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ರಿಷಬ್ ಅವರಿಗೆ ದೊಡ್ಡ ಕೊಡುಗೆ ಕೊಟ್ಟಿದ್ದರು. ಆದರೆ ಮೆಟಾದಲ್ಲಿ ಉಳಿದುಕೊಳ್ಳುವ ಬದಲಾಗಿ ಅವರು ತಮ್ಮದೇ AI ಸ್ಟಾರ್ಟಪ್ ನಿರ್ಮಿಸಲು ಬಯಸಿದ್ದರು. ತಮ್ಮ ವೈರಲ್ ಪೋಸ್ಟ್ಗೆ ಪ್ರತಿಕ್ರಿಯಿಸಿದ ಅವರು “ಮೆಟಾದ ಕೊಡುಗೆ 1 ದಶಲಕ್ಷ ಡಾಲರ್ ಗಿಂತ ಹೆಚ್ಚಿತ್ತು” ಎಂದು ಹೇಳಿದ್ದಾರೆ.

ರಿಷಬ್ ಅವರು ಬಹಳ ಸಾಧನೆಗೈದ AI ಸಂಶೋಧಕರಲ್ಲಿ ಒಬ್ಬದಾಗಿದ್ದಾರೆ. ಪದವಿ ಪಡೆದ ನಂತರ ಅವರು ಪ್ರಸಿದ್ಧ ಸಂಶೋಧಕರಾದ ಆರನ್ ಕೋರ್ವಿಲ್ಲೆ ಮತ್ತು ಮಾರ್ಕ್ ಬೆಲ್ಲೆಮೇರ್ ಅವರ ಅಡಿಯಲ್ಲಿ ಮಾಂಟ್ರಿಯಲ್ ಮೂಲದ AI ಸಂಶೋಧನಾ ಸಂಸ್ಥೆಯಾದ ಮಿಲಾದಲ್ಲಿ AIಯಲ್ಲಿ ಪಿಎಚ್ಡಿ ಪೂರ್ಣಗೊಳಿಸಿದ್ದರು.

ವರ್ಷಗಳಲ್ಲಿ ಅವರು AIನ ಕೆಲವು ದೊಡ್ಡ ಹೆಸರುಗಳಲ್ಲಿ ಕೆಲಸ ಮಾಡಿದ್ದಾರೆ. Google Brain, Google DeepMind, Waymo ಮತ್ತು Meta Superintelligence Lab ಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಅವರ ಪ್ರೊಫೈಲ್ ಪ್ರಕಾರ ಅವರ ಸಂಶೋಧನೆಯು reinforcement learning (RL) ಮತ್ತು large language models (LLMs)ಗಳ ಮೇಲೆ ಕೇಂದ್ರೀಕರಿಸಿದೆ. ಅವರು NeurIPS Outstanding Paper Award ಗಳಿಸಿದ್ದಾರೆ. Google ನ Gemma ಮತ್ತು Gemini ಯ AI ಮಾಡೆಲ್ಗಳಿಗೆ ಕೊಡುಗೆ ನೀಡಿದ್ದಾರೆ. ಆಫ್ಲೈನ್ reinforcement learning ಮತ್ತು LLM training technique ಗಳಿಗೆ ನೆರವಾಗಿರುವ ಸಂಶೋಧನೆ ನಡೆಸಿದ್ದಾರೆ.

Meta ತೊರೆಯಲು ಕಾರಣವೇನು?

2025 ಎಪ್ರಿಲ್ ನಲ್ಲಿ ರಿಷಬ್ ಮೆಟಾದ ಸೂಪರ್ ಇಂಟೆಲಿಜೆನ್ಸ್ ಲ್ಯಾಬ್ಸ್ ಸೇರಿದ್ದರು. ಅಲ್ಲಿ ಅವರು reinforcement learning and LLM ಗಳಿಗೆ ರೀಸನಿಂಗ್ ನಲ್ಲಿ ಕೆಲಸ ಮಾಡಲು ಬಯಸಿದ್ದರು. ಆದರೆ ಐದೇ ತಿಂಗಳಲ್ಲಿ ಅವರು ರಾಜೀನಾಮೆ ನೀಡಿದ್ದರು. ಈ ಬಗ್ಗೆ ಅವರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಮೆಟಾ ಬಿಡುವುದು ಕಠಿಣ ನಿರ್ಧಾರವಾಗಿತ್ತು ಎಂದು ಅವರು ಬರೆದುಕೊಂಡಿದ್ದರು.

ವಿಶ್ವದ ಅತಿದೊಡ್ಡ ಟೆಕ್ ಕಂಪನಿಯಲ್ಲಿ ಮುಂದುವರಿಯುವ ಬದಲಾಗಿ ಅಗರ್ವಾಲ್ ಪಿರಿಯಾಡಿಕ್ ಲ್ಯಾಬ್ಸ್ ಸ್ಥಾಪಕ ಸದಸ್ಯರಾಗಲು ಇಷ್ಟಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News