2026 ಫಿಫಾ ವಿಶ್ವಕಪ್ ನಲ್ಲಿ ಫ್ರಾನ್ಸ್ ನ ಕಿಲಿಯನ್ ಎಂಬಾಪೆ ಮುರಿದ ದಾಖಲೆಗಳು ಯಾವುವು?
ಕಿಲಿಯನ್ ಎಂಬಾಪೆ | Photo Credit : PTI
ವೈಯಕ್ತಿಕ ಮೈಲಿಗಲ್ಲುಗಳಿಂದ ಆರಂಭಿಸಿ ರಾಷ್ಟ್ರೀಯ ಸಾಧನೆಗಳವರೆಗೆ ಎಂಬಾಪೆ ಅವರ ಐತಿಹಾಸಿಕ ವಿಶ್ವಕಪ್ ಓಟದಲ್ಲಿ ಅನೇಕ ದಾಖಲೆಗಳು ಮುರಿದಿವೆ.
ಕಿಲಿಯನ್ ಎಂಬಾಪೆ ವಿಶ್ವಕಪ್ ನಲ್ಲಿ ತಮ್ಮ ಅದ್ಭುತ ಗೋಲು ಗಳಿಸುವ ಸಾಧನೆಯನ್ನು ಮುಂದುವರಿಸಿದ್ದಾರೆ. ಬೋಸ್ಟನ್ ನಲ್ಲಿ ನಡೆದ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಿಲಿಯನ್ ಎಂಬಾಪೆ ಮತ್ತು ಉಸ್ಮಾನ್ ಡೆಂಬೆಲೆ ಗಳಿಸಿದ ಗೋಲುಗಳ ನೆರವಿನಿಂದ ಫ್ರಾನ್ಸ್ ತಂಡವು ಮೊರಾಕ್ಕೊ ವಿರುದ್ಧ 2-0 ಅಂತರದ ಸುಲಭ ಜಯ ಗಳಿಸಿದೆ. ಆರಂಭದಲ್ಲಿ ಪೆನಾಲ್ಟಿ ಅವಕಾಶ ಕೈತಪ್ಪಿದರೂ, ಫ್ರಾನ್ಸ್ ನಾಯಕ ಕಿಲಿಯನ್ ಎಂಬಾಪೆ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನ ರೂವಾರಿಯಾದರು.
ದ್ವಿತೀಯಾರ್ಧದಲ್ಲಿ ಎಂಬಾಪೆ ಗಳಿಸಿದ ಗೋಲಿನೊಂದಿಗೆ ಪಂದ್ಯಾವಳಿಯಲ್ಲಿಯೇ ಪೆನಾಲ್ಟಿ ಇಲ್ಲದೆ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ಲಿಯೊನೆಲ್ ಮೆಸ್ಸಿ ಅವರೊಂದಿಗೆ ಸಮಬಲ ಸಾಧಿಸಿದರು. ಮೆಸ್ಸಿಯಂತೆ ಎಂಬಾಪೆ ಕೂಡ ಈ ಪಂದ್ಯಾವಳಿಯಲ್ಲಿ ಅನೇಕ ದಾಖಲೆಗಳನ್ನು ಮುರಿದಿದ್ದಾರೆ. ಅವರ ಸಾಧನೆಗಳ ವಿವರ ಹೀಗಿದೆ:
ಪ್ರಾನ್ಸ್ ಗೆ ಸಾರ್ವಕಾಲಿಕ ಅತ್ಯಧಿಕ ಗೋಲು ಗಳಿಸಿದ ಆಟಗಾರ:
ಫ್ರಾನ್ಸ್ ಪರವಾಗಿ ಟಾಪ್ ಸ್ಕೋರರ್ ಆಗಲು ಎಂಬಾಪೆಗೆ ಒಂದು ವಿಶ್ವಕಪ್ ನ ಅಗತ್ಯವಿತ್ತು. ಇದೀಗ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಸೆನೆಗಲ್ ವಿರುದ್ಧ ಗೋಲು ಗಳಿಸಿದ ನಂತರ 27 ವರ್ಷದ ಎಂಬಾಪೆ ತಮ್ಮ ದೇಶದ ಆಟಗಾರ ಒಲಿವಿಯರ್ ಗಿರೌಡ್ ಅವರ ದಾಖಲೆಯನ್ನು ಹಿಂದಿಕ್ಕಿ ಹೆಚ್ಚು ಗೋಲು ಗಳಿಸಿದವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಗಿರೌಡ್ ಫ್ರೆಂಚ್ ತಂಡದ ಪರವಾಗಿ 57 ಗೋಲುಗಳನ್ನು ಗಳಿಸಿದ್ದರು. ಇದೀಗ ಫ್ರೆಂಚ್ ತಂಡಕ್ಕೆ ಎಂಬಾಪೆ 64 ಗೋಲುಗಳನ್ನು ಗಳಿಸಿದ್ದಾರೆ. ಥಿಯರಿ ಹೆನ್ರಿ 51 ಗೋಲುಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಆಂಟೊಯಿನ್ ಗ್ರೀಜ್ಮನ್ 44 ಗೋಲುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ ನಲ್ಲೂ ದಾಖಲೆಯ ಗೋಲು:
ಎಂಬಾಪೆ ವಿಶ್ವಕಪ್ ನಲ್ಲೂ ಫ್ರಾನ್ಸ್ ಗಾಗಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರಾಗಿದ್ದಾರೆ. ಸೆನೆಗಲ್ ವಿರುದ್ಧದ ಅವರ ಗೋಲು 14ನೇ ವಿಶ್ವಕಪ್ ಗೋಲಾಗಿತ್ತು. ಜಸ್ಟ್ ಫಾಂಟೈನ್ ಅವರ 13 ಗೋಲುಗಳ ದಾಖಲೆಯನ್ನು ಅವರು ಮೀರಿಸಿದ್ದರು. ಜಸ್ಟ್ ಫಾಂಟೈನ್ ತಮ್ಮ 13 ಗೋಲುಗಳನ್ನು 1958 ವಿಶ್ವಕಪ್ ನಲ್ಲಿ ಗಳಿಸಿದ್ದರು.
ಪೆನಾಲ್ಟಿಯಲ್ಲದ ಗೋಲುಗಳು:
ಗುರುವಾರ ಮೊರಕೊ ವಿರುದ್ಧದ ಎಂಬಾಪೆ ಅವರ ಗೋಲು ನಂತರ ಅವರು ಪೆನಾಲ್ಟಿಯಲ್ಲದ ವಿಶ್ವಕಪ್ ಗೋಲುಗಳ ಸಂಖ್ಯೆಯಲ್ಲಿ ಮೆಸ್ಸಿಯೊಂದಿಗೆ ಸಮಬಲ ಸಾಧಿಸಿರುವುದನ್ನು ಖಚಿತಪಡಿಸಿದೆ. ಇಬ್ಬರೂ ಆಟಗಾರರು ಪ್ರಸ್ತುತ ವಿಶ್ವಕಪ್ನಲ್ಲಿ ತಮ್ಮ ಎಲ್ಲಾ ಪಂದ್ಯಗಳಲ್ಲಿ 17 ಪೆನಾಲ್ಟಿ ಇಲ್ಲದ ಗೋಲುಗಳನ್ನು ಹೊಂದಿದ್ದಾರೆ. ಬೋಸ್ಟನ್ನಲ್ಲಿ ಎಂಬಾಪೆ ಅವರ ಗೋಲು ಅವರನ್ನು ವಿಶ್ವಕಪ್ನಲ್ಲಿ ಒಟ್ಟು 20 ಗೋಲುಗಳನ್ನು ಗಳಿಸಿದ ಆಟಗಾರನೆನ್ನುವ ಹಿರಿಮೆಯನ್ನು ಸಾಧಿಸಲು ಸಾಧ್ಯವಾಗಿಸಿದೆ. ಸಾರ್ವಕಾಲಿಕ ಗೋಲುಗಳ ಪಟ್ಟಿಯಲ್ಲಿ 21 ಗೋಲುಗಳಿಸಿದ ಮೆಸ್ಸಿ ಮೊದಲ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ ನಲ್ಲಿ ಹೆಚ್ಚಿನ ನಾಕೌಟ್ ಗೋಲುಗಳು:
ಸ್ವೀಡನ್ ವಿರುದ್ಧದ ಪಂದ್ಯದಲ್ಲಿ ಎಂಬಾಪೆ ಅವರ ಮೊದಲ ಗೋಲು ಮತ್ತೊಂದು ದಾಖಲೆ ಮುರಿದಿತ್ತು. ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಅತ್ಯಧಿಕ ಗೋಲು ಗಳಿಸಿದವರಾದರು. ಹೀಗಾಗಿ ಅವರು ಸಾರ್ವಕಾಲಿಕ ಪಟ್ಟಿಯಲ್ಲಿದ್ದ ಬ್ರೆಝಿಲ್ ನ ಶ್ರೇಷ್ಠ ಆಟಗಾರರಾದ ಲಿಯೊನಿಡಾಸ್ ಮತ್ತು ರೊನಾಲ್ಡೊ ಅವರನ್ನು ಮೀರಿಸಲು ಸಾಧ್ಯವಾಗಿದೆ. ಪೆರಾಗ್ವೆ ಮತ್ತು ಮೊರಾಕ್ಕೊ ವಿರುದ್ಧ ಗೋಲುಗಳನ್ನು ಗಳಿಸುವ ಮೊದಲು ಅವರು ಸ್ವೀಡನ್ ವಿರುದ್ಧ ಮತ್ತೊಂದು ಗೋಲು ಗಳಿಸಿದರು ಮತ್ತು ಇದೀಗ 12 ವಿಶ್ವಕಪ್ ನಾಕೌಟ್ ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಗೋಲಿಗೆ ನೆರವಾಗಿರುವ ದಾಖಲೆ:
ಮೊರಕ್ಕೊ ವಿರುದ್ಧ ಉಸ್ಮಾನ್ ಡೆಂಬೆಲೆ ಅವರು ಗೋಲು ಗಳಿಸಲು ಎಂಬಾಪೆ ಅಸಿಸ್ಟ್ (ಸಹಾಯ) ಮಾಡಿರುವುದು ಮತ್ತೊಂದು ದಾಖಲೆಯನ್ನು ಮುರಿಯಿತು. ಎರಡು ವಿಭಿನ್ನ ವಿಶ್ವಕಪ್ಗಳಲ್ಲಿ 11 ನೇರ ಗೋಲು ಕೊಡುಗೆಗಳನ್ನು ದಾಖಲಿಸಿದ ಮೊದಲ ಆಟಗಾರರಾದರು. ಅವರು 2022ರ ಖತರ್ ವಿಶ್ವಕಪ್ ನಲ್ಲಿ ಎಂಟು ಗೋಲುಗಳು ಮತ್ತು ಎರಡು ಅಸಿಸ್ಟ್ಗಳನ್ನು ಸಾಧಿಸಿದ್ದರು. ಈಗಿನ ಪಂದ್ಯಾವಳಿಯಲ್ಲಿ ತಮ್ಮ ಅಂಕಿ-ಅಂಶವನ್ನು ಸುಧಾರಿಸಿದ್ದಾರೆ. 1966ರಿಂದ ವಿಶ್ವಕಪ್ ಆರಂಭವಾದಂದಿನಿಂದ ಎರಡು ಪ್ರತ್ಯೇಕ ಪಂದ್ಯಾವಳಿಗಳಲ್ಲಿ 10 ಅಥವಾ ಹೆಚ್ಚಿನ ಕೊಡುಗೆಗಳ ಸಾಧನೆ ಸಾಧಿಸಿದ ಮೊದಲ ಆಟಗಾರ ಎಂಬಾಪೆ.
ಫ್ರಾನ್ಸ್ ನ ವಿಶ್ವಕಪ್ ಭಾಗವಹಿಸುವಿಕೆ:
ಎಂಬಾಪೆ ವಿಶ್ವಕಪ್ ಫೈನಲ್ ಗಳಲ್ಲಿ ಫ್ರಾನ್ಸ್ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದಾರೆ.
ಫ್ರಾನ್ಸ್ ಪರ ವಿಶ್ವಕಪ್ ನಲ್ಲಿ 20 ಪಂದ್ಯಗಳನ್ನು ಆಡಿರುವ ದಾಖಲೆಯನ್ನೂ ಹೊಂದಿದ್ದಾರೆ. ಈ ದಾಖಲೆಯನ್ನು ಹ್ಯೂಗೋ ಲೋರಿಸ್ ಜೊತೆಗೆ ಸಮಬಲದಲ್ಲಿದ್ದಾರೆ. ಆದರೆ ಈ ದಾಖಲೆ ತಲುಪಿದ ಅತ್ಯಂತ ಚಿಕ್ಕ ವಯಸ್ಸಿನ ಆಟಗಾರನೆಂಬ ದಾಖಲೆಯನ್ನೂ ಹೊಂದಿದ್ದಾರೆ.
ಕೃಪೆ: aljazeera.com