×
Ad

ಯಾದಗಿರಿ: ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ಕ್ರಮಕ್ಕೆ ಮನವಿ

Update: 2025-04-08 20:13 IST

ಸುರಪುರ: ತಾಲೂಕಿನಲ್ಲಿ ಯಾವುದೆ ಪರವಾನಿಗೆ ಪಡೆಯದೆ ಬೇಸಿಗೆ ತರಬೇತಿ ಶಿಬಿರ ನಡೆಸುವ ಶಾಲೆಗಳು ಹಾಗೂ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಸಚಿನ್ ಕುಮಾರ ನಾಯಕ ಹಾಗೂ ಇತರರು ನಗರದಲ್ಲಿ ತಹಸಿಲ್ದಾರ್‌ಗೆ ಮತ್ತು ಕ್ಷೇತ್ರ‌ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.

ಅನಧಿಕೃತಿ ಕೋಚಿಂಗ್ ಸೆಂಟರ್ ಮತ್ತು ಶಾಲೆಗಳು ಬೇಸಿಗೆ ತರಬೇತಿ ಶಿಬಿರಗಳ ಹೆಸರಿನಲ್ಲಿ ಸರಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿವೆ. ಬೇಸಿಗೆ ಬಿಸಿಲಿನ ಸಂದರ್ಭದಲ್ಲಿ ಮಕ್ಕಳು ತರಬೇತಿ ಶಿಬಿರಗಳಿಗೆ ಬರಬೇಕು ಎನ್ನುವುದರಿಂದ ಬಿಸಿಲಿನಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.ಆದ್ದರಿಂದ ಕೂಡಲೇ ಅನಧಿಕೃತವಾಗಿ ನಡೆಸಲಾಗುವ ತರಬೇತಿ ಶಿಬಿರಗಳು ಹಾಗೂ ಕೋಚಿಂಗ್ ಸೆಂಟರ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಇಲಾಖೆಯ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News