ಶಹಾಪುರ | ನಿವೇಶನ, ಸ್ಮಶಾನ ಭೂಮಿ ಮಂಜೂರಿಗೆ ಒತ್ತಾಯಿಸಿ ಪ್ರತಿಭಟನೆ
ಗ್ರಾಮೀಣ ನಿರಾಶ್ರಿತರನ್ನು ಪರಿಗಣಿಸಿ ಸೂಕ್ತ ಕ್ರಮ : ಸಚಿವ ದರ್ಶನಾಪುರ
ಕಳೆದ ನಾಲ್ಕು ದಶಕಗಳಿಂದ ಹಳ್ಳಿಗಳಲ್ಲಿನ ನಿರಾಶ್ರೀತ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಕದ, ಸಂ, ಸ ಸಂಯೋಜಿತ ಜಿಲ್ಲಾ ಸಮಿತಿಯವರು ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನಾಕಾರರು, ಅನೇಕ ಗ್ರಾಮಗಳಲ್ಲಿ ದಲಿತರಿಗೆ ಸಮರ್ಪಕ ಸ್ಮಶಾನ ಭೂಮಿ ಇಲ್ಲದೆ ಪರದಾಡುವ ಪರಿಸ್ಥಿತಿ ಇದೆ. ತಕ್ಷಣವೇ ರುದ್ರಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ಭೂ ಒಡೆತನ ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಕಳೆದ ಐದು ವರ್ಷಗಳಿಂದ ಭೂ ಮಂಜೂರಾಗಿಲ್ಲ; ಜಿಲ್ಲಾಧಿಕಾರಿಗಳು ಶೀಘ್ರ ಸಭೆ ನಡೆಸಿ ಅರ್ಜಿಗಳನ್ನು ಮಂಜೂರುಗೊಳಿಸಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಚಿವ ದರ್ಶನಾಪುರ ಅವರು ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಭೂ ಒಡೆತನ ಸಂಬಂಧಿತ ಸಭೆಯನ್ನು ತುರ್ತುವಾಗಿ ನಡೆಸುವಂತೆ ಸೂಚನೆ ನೀಡಿದರು. ಜೊತೆಗೆ ಹಳ್ಳಿಗಳಲ್ಲಿನ ಸರ್ಕಾರಿ ಭೂಮಿಯನ್ನು ಗುರುತಿಸಿ ನಿರಾಶ್ರೀತರನ್ನು ಪರಿಗಣಿಸಿ ಆಶ್ರಯ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ನೇರವಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳಲು ಸಾರ್ವಜನಿಕರಿಗೆ ಸಚಿವರು ಆಹ್ವಾನ ನೀಡಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಮಧ್ಯ ಸಂಯಮಮಂಡಳಿ ಅಧ್ಯಕ್ಷರಾದ ಶರಣಪ್ಪ ಸಲಾದಪುರ, ಯಾದಗಿರಿ ಜಿ,ಪಂ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಲವೀಶ ಒರಡಿಯಾ,ಜಿಲ್ಲಾ ಕ,ದ,ಸಂ ¸, ಸಂಯೋಜಿತ ಜಿಲ್ಲಾಧ್ಯಕ್ಷರಾದ ಶರಣರಡ್ಡಿ ಹತ್ತಿಗೂಡೂರ,ಶರಣಪ್ಪ ಚಲುವಾದಿ ,ನಿಂಗಣ್ಣ ಕರಡಿ, ಸಿದ್ದಪ್ಪ ಚಲುವಾದಿ ನಿಂಗಣ್ಣ ರಡ್ಡಿ, ಸಿದ್ದಪ್ಪ ಹೋಸಮನಿ, ರಾಮಪ್ಪ ಮಾಲಹಳ್ಳಿ, ಸಾಬಣ್ಣ ಮಾಲಹಳ್ಳಿ, ಯಲ್ಲಮ್ಮ ರಸ್ತಾಪುರ, ಶಿವಮ್ಮ ಹತ್ತಿಗೂಡೂರ, ಮಲ್ಲಮ್ಮ ಹತ್ತಿಗೂಡೂರ, ತಂಗಮ್ಮ ಹತ್ತಿಗೂಡೂರ ,ಜೆಜಮ್ಮ ಚಲುವಾದಿ, ಮಲ್ಲಮ್ಮ ಕೊಂಗAಡಿ ,ಲಕ್ಷಿö್ಮ ಹೋಸಮನಿ, ಮರೆಮ್ಮ ಹೋಸಮನಿ, ಮಲ್ಲಮ್ಮ ಸತ್ಯಂಪೇಟ, ಮಲ್ಲಮ್ಮ ನಿಂಗಮ್ಮ ಗುರಸಣಿಗಿ, ಮಾಹಾದೇವಮ್ಮ ಅನಸೂರ, ದ್ಯಾವಮ್ಮ ಚಲುವಾದಿ ಸೇರಿದಂತೆ ಹತ್ತಿಗೂಡೂರ, ಅನುವಾರ, ಯಕ್ಷಂತಿ, ಹಯ್ಯಾಳ ಕೆ, ಮಾಲಹಳ್ಳಿ, ತುಮಕುರ ಬೊಮನಳ್ಳಿ, ಐಕೂರ, ಸಲಾದಪುರಗಳಿಂದ ಮಹಿಳೆಯರು ನೀರಾಶ್ರೀತರು ಗ್ರಾಮಸ್ಥರು, ಕಾರ್ಯಕರ್ತರು ಆಗಮಿಸಿದ್ದರು,