×
Ad

2.5 ಕೋಟಿ ರೂ. ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರಣಗೌಡ ಕಂದಕೂರ ಚಾಲನೆ

Update: 2025-02-26 18:45 IST

ಯಾದಗಿರಿ: ಅಭಿವೃದ್ಧಿಯ ವಿಷಯದಲ್ಲಿ ನಾನು ರಾಜಿಯಾಗಲ್ಲ. ನನ್ನ ಮತಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಗುರುಮಠಕಲ್ ಶಾಸಕರಾದ ಶರಣಗೌಡ ಕಂದಕೂರ ಹೇಳಿದರು.

ತಾಲೂಕಿನ ಖೇಮುನಾಯಕ ತಾಂಡಾದಲ್ಲಿ 90 ಲಕ್ಷ ವೆಚ್ಚದಲ್ಲಿ ಥಾವರುನಾಯಕ ತಾಂಡದಿಂದ ಖೇಮುನಾಯಕ ತಾಂಡಾದ ವರೆಗೆ ರಸ್ತೆ ನಿರ್ಮಾಣ, 10 ಲಕ್ಷ ವೆಚ್ಚದಲ್ಲಿ ಥಾನುನಾಯಕ ತಾಂಡದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, 10 ಲಕ್ಷ ವೆಚ್ಚದಲ್ಲಿ ಅಡಮಡಿ ತಾಂಡದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, 10 ಲಕ್ಷ ವೆಚ್ಚದಲ್ಲಿ ನಿಂಗಸನಹಳ್ಳಿ ತಾಂಡದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, 10 ಲಕ್ಷ ವೆಚ್ಚದಲ್ಲಿ ಥಾವರು ನಾಯಕ ತಾಂಡದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, 10 ಲಕ್ಷ ವೆಚ್ಚದಲ್ಲಿ ಕಾಂಚಗಾರಹಳ್ಳಿ ತಾಂಡದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, 10 ಲಕ್ಷ ವೆಚ್ಚದಲ್ಲಿ ಕ್ಯಾಸಪ್ಪನಹಳ್ಳಿ ತಾಂಡದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, 10 ಲಕ್ಷ ವೆಚ್ಚದಲ್ಲಿ ಹೊರುಂಚಾ ಜಕನಕಲ್ ತಾಂಡದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, 10 ಲಕ್ಷ ವೆಚ್ಚದಲ್ಲಿ ಹೊರುಂಚಾ ನಡುವಿನ ತಾಂಡದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, 20 ಲಕ್ಷ ವೆಚ್ಚದಲ್ಲಿ ವೆಂಕಟೇಶ್ ನಗರ ತಾಂಡದಲ್ಲಿ ಪೈಪ್ಲೈನ್ ಕಾಮಗಾರಿ, 10 ಲಕ್ಷ ವೆಚ್ಚದಲ್ಲಿ ಹೊರುಂಚಾ ಲಾಲಸಿಂಗ್ ತಾಂಡಾದ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2 ಕೋಣೆಗಳ ಕಟ್ಟಡ ಕಾಮಗಾರಿ, 30 ಲಕ್ಷ ವೆಚ್ಚದಲ್ಲಿ ಯರಗೊಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2 ಕೋಣೆಗಳ ಉದ್ಘಾಟನಾ ಹಾಗೂ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳೆದ ಹಲವು ದಶಕಗಳಿಂದ ಖೇಮುನಾಯಕ ತಾಂಡಾಕ್ಕೆ ಯಾವುದೇ ಸಚಿವರು, ಶಾಸಕರು ಬಂದಿಲ್ಲ ಇಲ್ಲಿ ಅಭಿವೃದ್ಧಿಗೆ ದಿ.ನಾಗನಗೌಡರು ಶಾಸಕರಾದ ಮೇಲೆ ಗುಣಮಟ್ಟದ ರಸ್ತೆ, ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಿವೆ ಎನ್ನುವ ಜನರ ಮಾತು ಕೇಳಿ ಸಂತೋಷವಾಗಿದೆ. ಅಭಿವೃದ್ಧಿ ವಿಷಯ ಬಂದಾಗ ನಾನು ಯಾವುದೇ ರಾಜಕೀಯ ಮಾಡಲ್ಲ. ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಅಭಿವೃದ್ಧಿ ಎಲ್ಲರಿಗೂ ಸಿಗಲಿ, ಪಕ್ಷಾತೀತವಾಗಿ ಎಲ್ಲರೂ ಅಭಿವೃದ್ಧಿಗೆ ಸ್ಪಂದಿಸೋಣ ಎಂದು ಹೇಳಿದರು.

ಇಲ್ಲಿಯವರೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ನನ್ನ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕೈಗೊಂಡಿದ್ದೇನೆ. ಈಗ ಬೇಸಿಗೆ ಪ್ರಾರಂಭವಾಗಿದೆ ಯಾವುದೇ ಕಾರಣಕ್ಕೂ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌ನವರು ಯಾವುದೇ ಸಮಯದಲ್ಲಿಯಾದರೂ ಜನರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಎಷ್ಟು ಸಾಧ್ಯವೋ ಅಷ್ಟು ಅನುದಾನವನ್ನು ನಾನು ಕುಡಿಯುವ ನೀರಿಗಾಗಿ ಕೊಡುತ್ತೇನೆ ಮತ್ತು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಪತ್ರ ಬರೆಯುತ್ತೇನೆ. ಕುಡಿವ ನೀರಿನ ಯೋಜನೆಗಳು ಆದಷ್ಟು ಬೇಗ ಮುಗಿಸಬೇಕು, ಮತ್ತು ದಿಢೀರ್ ಉದ್ಭವಿಸುವ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಪಿಡಿಒಗಳು ಮತ್ತು ಪಿಆರ್‌ಇ ವಾಟರ್ ಸಪ್ಲೈ ಇಲಾಖೆಯವರು ಕೂಡ ಜನತೆಗೆ ಸ್ಪಂದಿಸಿ, ಕುಡಿವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಇಇ ಶಿವರಾಜ ಹುಡೇದ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ರಾಮಣ್ಣ ಕೋಟಗೇರಾ, ಈಶ್ವರ ನಾಯಕ, ನರಸಪ್ಪ ಕವಡೆ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಪಿಡಿಗಳು ಇತರರಿದ್ದರು.

ಗುರುಮಠಕಲ್ ಮತಕ್ಷೇತ್ರದಲ್ಲಿ ಯಾವ ಗ್ರಾಮಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು, ಬೇಸಿಗೆ ಆರಂಭವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಶಾಸಕರ ಅನುದಾನವು ನೀಡುತ್ತೇನೆ, ಹೆಚ್ಚುವರಿಯಾಗಿ ಅನುದಾನ ಬೇಕಿದ್ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಪತ್ರ ಬರೆಯುತ್ತೇನೆ.

-  ಶರಣಗೌಡ ಕಂದಕೂರ, ಶಾಸಕ

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News