×
Ad

ಯಾದಗಿರಿ | ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ : ಉಮೇಶ ಕೆ. ಮುದ್ನಾಳ

Update: 2025-08-27 19:02 IST

ಯಾದಗಿರಿ: ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು, ಆಗ ಮಕ್ಕಳು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯ ವಾಗುತ್ತದೆ ಎಂದು ಕೋಲಿ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ದಾಳ ಹೇಳಿದರು.

ನಗರದ ಮೆಕ್ಯಾನಿಕರ ಮತ್ತು ಮಾಲೀಕರು ಕಚೇರಿ ಆವರಣದಲ್ಲಿ ನಡೆದ ಮೆಕ್ಯಾನಿಕರ ಮತ್ತು ಮಾಲೀಕರ ಜಾಗೃತಿ ಸಭೆಯಲ್ಲಿ ಮಾತನಾಡಿದ ಉಮೇಶ ಮುದ್ದಾಳ,  ರಾಜ್ಯ ಸರಕಾರದಿಂದ ಬರುವಂತಹ ಸೌಲಭ್ಯಗಳಿಂದ ಮೆಕ್ಯಾನಿಕರು ಮತ್ತು ಮಾಲಕರು ವಂಚಿತರಾಗಿದ್ದು ದುರದೃಷ್ಟಕರ ಸಂಗತಿಯಾಗಿದೆ. ಕೃಷಿ ಕೂಲಿ ಕಾರ್ಮಿಕರಿಗೆ ಸಿಗಬೇಕಾದ ಸಾಲ ಸೌಲಭ್ಯಗಳು ಉಳ್ಳವರ ಪಾಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶರಣಪ್ಪ ಕೌಳೂರು, ಹನುಮಂತ ಆರ್ಯರ್, ಮುಹಮದ್ ಶಫಿ, ಬನ್ನಪ್ಪಗೌಡ ಯಲ್ಲೇರಿ, ಮುಹಮ್ಮದ್‌ ಗೌಸ್ ಯಾದಗಿರಿ, ಮುಹ್ಮದ್ ಕರೀಮ್, ಸೈಯದ್ ಶಿರಾಜುದ್ದಿನ್, ಮುಹಮದ್ ನಿಸ್ಸಾರ್, ವೀರಣ್ಣ ಯಳವಾರ, ಜಲಾಲಸಾಬ್ ಯಾದಗಿರಿ, ಪ್ರಭು ಹಯ್ಯಾಳ, ಎಂ.ಡಿ.ಉಮರ್, ಮುಹಮ್ಮದ್‌ ಜಲಾಲುದ್ದೀನ್, ಬಾಬರ್ ಅಲಿಮುದ್ದಿನ್, ಜಲಾಲ್ ಪಠಾಣ, ಗಾಲೀಬ ಪಟೇಲ್, ವೀರಣ್ಣ, ಜಂಬಣ್ಣಾ ಯಂಕಪ್ಪಾ, ವೆಂಕು ನಾಯ್ಕಡಿ, ನಿಸಾರ್ ಅಹ್ಮದ್, ರುಕ್ಮೋದ್ದಿನ, ಮಹೇಬುಬ್ ಅಲಿ, ಶರಣಪ್ಪ, ವೆಂಕಟರೆಡ್ಡಿ ಗೌಡ, ಜಮಾಲ್ ಸಲೀಂ, ಅಬ್ದುಲ್ ಜಲಾಲ್, ನಜೀನ್ ಸೇರಿದಂತೆ ಅನೇಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News