×
Ad

ಯಾದಗಿರಿ| ಡಿ.21ರಂದು ಬೆಂಗಳೂರಿನಲ್ಲಿ ಕೋಲಿ ಸಮಾಜದ ಸಮಾವೇಶ

Update: 2025-12-16 20:02 IST

ಯಾದಗಿರಿ: ರಾಜ್ಯದ ಕೋಲಿ ಸಮಾಜದ ಟೋಕರಿ ಕೋಲಿ ಹಾಗೂ ಕೋಲಿ, ಕಬ್ಬಲಿಗ, ಅಂಬಿಗ, ಬಾರಿಕ, ಬೆಸ್ತರ್ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಕೆಇಬಿ ಅಸೋಸಿಯೇಷನ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಡಿ.21ರಂದು ಬೆಳಗ್ಗೆ 10.30ಕ್ಕೆ ಕೋಲಿ ಸಮಾಜದ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ದತ್ತಾತ್ರೇಯ ರೆಡ್ಡಿ ಮುದಿರಾಜ್ ತಿಳಿಸಿದ್ದಾರೆ.

ಪಕ್ಷಾತಿಕವಾಗಿ ನಡೆಯಲಿರುವ ಈ ಸಮಾವೇಶದಲ್ಲಿ ಸಮಾಜದ ಪೂಜ್ಯರು, ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವ, ಶಾಸಕರನ್ನು ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರನ್ನು ಆಹ್ವಾನಿಸಲಾಗಿದೆ. ಸಮಾವೇಶಕ್ಕೂ ಪೂರ್ವ ಡಿ.20ರಂದು ಕೋಲಿ ಸಮಾಜದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಹೇಳಿದರು.

ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ್, ರಾಜ್ಯ ಶಿಸ್ತು ಪಾಲನ ಸಮಿತಿ ಡಾ. ಟಿ.ಡಿ. ರಾಜು, ಸಮಾಜದ ಹಿರಿಯ ಮುಖಂಡರಾದ ಡೋಡ್ತಾ ಪಂಡ್ರಿ, ಮಲ್ಲೇಶಿ ಪನಪೂಲ್, ಸಾಬರೆಡ್ಡಿ ಕಣೇಕಲ್, ಪವನ ಮುದ್ದಾಳ, ವೆಂಕಟೇಶ ಪದ್ದೇವಲ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News