ಯಾದಗಿರಿ: ಮಂಗಿಹಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ; ಸಾರ್ವಜನಿಕರ ಆಕ್ರೋಶ
ಸುರಪುರ: ತಾಲೂಕಿನ ಮಂಗಿಹಾಳ ಗ್ರಾಮದ ದಲಿತರ ಕೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಓಣಿಯಲ್ಲಿ ಕಳೆದ ನಲವತ್ತು ವರ್ಷಗಳ ಹಿಂದೆ ಹಾಕಿರುವ ಒಂದು ಬೋರವೆಲ್ ಇದೆ ಅದರ ನೀರನ್ನೆ ನಾಡು ಕುಡಿಯಬೇಕಿದೆ.ಆದರೆ ಅದರ ನೀರಲ್ಲಿ ಸತ್ತು ಕೀಟಗಳು ಇರುವ ಗಲೀಜಾದ ನೀರು ಬರುತ್ತವೆ. ಆ ನೀರು ದರ್ವಾಸನೆ ಇರುತ್ತವೆ.ಇಂತಹ ನೀರನ್ನೆ ನಾವು ಕುಡಿಯುವ ಸ್ಥಿತಿ ಇದೆ. ಅನೇಕ ಬಾರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನೆಯಾಗಿಲ್ಲ. ಈಗ ಇರುವ ಬೋರವೆಲ್ ಕೂಡ ಕೆಟ್ಟು ಹೋಗಿದ್ದು ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ಅಲ್ಲಿನ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಇಡೀ ಜನರೇ ಬೇಸತ್ತಿದ್ದಾರೆ.ಆದರೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ನಮ್ಮ ಗೋಳು ಕೇಳಿಸುತ್ತಿಲ್ಲ. ಚರಂಡಿಗಳು ದುರ್ವಾಸನೆ ಬೀರುತ್ತಿವೆ,ಇದರಿಂದ ಜನರಲ್ಲಿ ರೋಗ ಹರಡುತ್ತಿವೆ. ಆದರೆ ಸ್ವಚ್ಛತೆ ಮಾಡಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಸಿದ ಅಲ್ಲಿನ ನಿವಾಸಿಗಳು, ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡದಿದ್ದಲ್ಲಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಮಂಗಿಹಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ.ಈಗ ಗೊತ್ತಾಗಿದ್ದು ನಾಳೆಯೇ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ,ಗ್ರಾಮ ಪಂಚಾಯತಿ ಪಿಡಿಓ ಅವರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಾಗುವುದು
- ಬಸವರಾಜ ಸಜ್ಜನ್, ತಾ.ಪಂ ಇಓ ಸುರಪುರ