ಯಾದಗಿರಿ | ವಿಶ್ವೇಶ್ವರಯ್ಯ ಪ್ರಶಸ್ತಿ ಪಡೆದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಗೆ ದ.ಸಂ.ಸ ವತಿಯಿಂದ ಸನ್ಮಾನ
ಯಾದಗಿರಿ: ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪರಶುರಾಮ ಹಾಗೂ ಸಹಾಯಕ ಅಭಿಯಂತರ ಸುನಿಲ್ ಕುಮಾರ್ ರಾಠೋಡ್ ಅವರಿಗೆ 2025ನೇ ಸಾಲಿನ “ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ” ಬೆಂಗಳೂರು ವಿಶ್ವೇಶ್ವರಯ್ಯ ಇಂಜಿನಿಯರ್ ಕಮಿಟಿಯಿಂದ ಲಭಿಸಿದೆ. ಈ ಹಿನ್ನಲೆಯಲ್ಲಿ ಯಾದಗಿರಿ ಜಿಲ್ಲಾ ದ.ಸಂ.ಸ ವತಿಯಿಂದ ಇಬ್ಬರು ಅಧಿಕಾರಿಗಳಿಗೆ ಗೌರವ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಪರಶುರಾಮ, “ಸರಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮಂತಹವರಿಗೆ ಈ ರೀತಿಯ ಗೌರವ ದೊರೆತಿರುವುದು ಹರ್ಷದ ಸಂಗತಿ. ಇಂತಹ ಪ್ರಶಸ್ತಿಗಳು ನಮ್ಮ ಸೇವಾ ಮನೋಭಾವನೆಗೆ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ,” ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್, ಗೋಪಾಲ ತೆಳಗೇರಿ, ಭೀಮಣ್ಣ ಹೊಸಮನಿ, ಪರಶುರಾಮ್ ಒಡೆಯರ್, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯ ಕಾರ್ಯದರ್ಶಿ ಕಾಶಿನಾಥ ನಾಟೆಕಾರ್, ಹಣಮಂತ ಮಿಲ್ಟ್ರಿ, ಶ್ರೀಕಾಂತ್ ತೆಳಿಗೇರಿ, ಮಲ್ಲೇಶಿ ಅನಕಸೂಗೂರ, ತಿಮ್ಮಣ್ಣ ರಾಯಚೂರುಕರ್, ಖಾಜಾ ವಡಿಗೇರಾ, ಸೇರಿದಂತೆ ಇತರರು ಉಪಸ್ಥಿತರಿದ್ದರು.