ಮದ್ದೂರು ಘಟನೆ ಬಗ್ಗೆ ಸರ್ಕಾರ ಕ್ರಮ ವಹಿಸುತ್ತದೆ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ್
Update: 2025-09-09 22:54 IST
ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ್
ಯಾದಗಿರಿ: ಮದ್ದೂರು ಘಟನೆಯಾಗಲಿ, ಧರ್ಮಸ್ಥಳ ಘಟನೆಯಾಗಲಿ, ಬೇರೆ ಯಾವುದೇ ವಿಷಯವಾಗಲಿ ಅದರಲ್ಲಿ ತಪ್ಪು ಹುಡುಕಿ ರಾಜಕೀಯ ಮಾಡುವ ಕಾರ್ಯವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಅದರಲ್ಲಿ ಇರುವ ಅಂಶವನ್ನು ಬಿಟ್ಟು ಬೇರೆಯದ್ದನ್ನು ಹೇಳುವ ಮೂಲಕ ಹೈಲೆಟ್ ರಾಜಕೀಯ ಮಾಡುವ ಕೆಲಸ ಮಾಡುತ್ತಾರೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ್ ಹೇಳಿದರು.
ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಸರ್ಕಾರದಕ್ಕೆ ಯಾವ ಸಮುದಾಯದ ಓಲೈಕೆ ಮಾಡುವ ಉದ್ದೇಶವೇ ಇಲ್ಲ. ಈಗಾಗಲೇ ಹಿಂದಿನ ಘಟನೆಗಳಲ್ಲಿ ಮುಸ್ಲಿಂ ಸಮುದಾಯದವರನ್ನು ಬಂಧಿಸಿಲ್ಲವೇ? ತಪ್ಪು ಮಾಡಿದವರ ರಕ್ಷಣೆ ಮಾಡುವ ಸಂಗತಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಯಾವುದೇ ಘಟನೆಯಲ್ಲಿ ತನಿಖೆ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.