ಹುಮನಾಬಾದ್ | ಹಝ್ರತ್ ಇಸ್ಮಾಯಿಲ್ ಷಾ ಖಾದ್ರಿ ದರ್ಗಾದ 2026ರ ಕ್ಯಾಲೆಂಡೆರ್ ಬಿಡುಗಡೆ
ಹುಮನಾಬಾದ್ : ತಾಲೂಕಿನ ಸುಪ್ರಸಿದ್ದ ಸೂಫಿ ಹಝ್ರತ್ ಸೈಯದ್ ಇಸ್ಮಾಯಿಲ್ ಷಾ ಖಾದ್ರಿ ದರ್ಗಾದಲ್ಲಿ ಹಝ್ರತ್ ಸೈಯದ್ ಇಸ್ಮಾಯಿಲ್ ಷಾ ಖಾದ್ರಿ ಮುತ್ತವಲ್ಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು 2026ನೇ ಹೊಸ ವರ್ಷದ ಕ್ಯಾಲಂಡರ್ ಉದ್ಘಾಟನೆಗೊಳಿಸಿದರು.
ಶುಕ್ರವಾರ ಕ್ಯಾಲೆಂಡೆರ್ ಉದ್ಘಾಟಿಸಿ ಮಾತನಾಡಿದ ಅವರು, ಹಝ್ರತ್ ಇಸ್ಮಾಯಿಲ್ ಷಾ ಖಾದ್ರಿ ದರ್ಗಾ ನಮ್ಮ ಭಾಗದ ಅತ್ಯಂತ ಐತಿಹಾಸಿಕ ದರ್ಗಾವಾಗಿದೆ. ನಾನು ಹೈದರಾಬಾದ್ ಕರ್ನಾಟಕ ಅಧ್ಯಕ್ಷನಾಗಿರುವಾಗ ಇಲ್ಲಿನ ಕೆರೆ ಸೌಂದರ್ಯಕರಣಕ್ಕೆ 4 ಕೋಟಿ ರೂ. ಅನುದಾನವನ್ನು ನನ್ನ ಸ್ವಇಚ್ಛೆಯಿಂದ ತಂದಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯಕ್ಕೆ ಇಸ್ಮಾಯಿಲ್ ಷಾ ಖಾದ್ರಿ ರವರ ಆಶೀರ್ವಾದ ಸಿಕ್ಕಿತ್ತು ಎಂದರು.
ಇಲ್ಲಿನ ಟ್ರಸ್ಟ್ ಅತ್ಯುತ್ತಮ ಸೇವೆ ನೀಡುತ್ತಿದೆ. ಟ್ರಸ್ಟ್ ನ ಅಧ್ಯಕ್ಷ ಗುಲಾಮ್ ದಸ್ತಗೀರ್ ಮತ್ತು ಸಮಸ್ತ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಹಿಂದಿನಂತೆ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡರೆ ಮುಂದೆಯೂ ನಿಮ್ಮ ಜೊತೆಗಿರುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುಲಾಮ್ ದಸ್ತಗೀರ್, ಆದಿಲ್ ಸಾಬ್ ಮುತ್ತವಲ್ಲಿ, ಪೀರ್ ಸಾಬ್ ಮುತ್ತವಲ್ಲಿ, ಶಾಬೋದ್ದಿನ್ ಮುಜಾವರ್ ಸೇರಿದಂತೆ ಹಝ್ರತ್ ಇಸ್ಮಾಯಿಲ್ ಷಾ ಖಾದ್ರಿ ದರ್ಗಾ ಮುತ್ತವಲ್ಲಿ ಚಾರಿಟೇಬಲ್ ಟ್ರಸ್ಟ್ ನ ಎಲ್ಲ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.