ಹುಣಸಗಿ | ತಂಬಾಕು ಸೇವನೆ ಸಾವಿಗೆ ಆಹ್ವಾನ : ಬಸವರಾಜ ಸಜ್ಜನ ಕರೆ
ಹುಣಸಗಿ: ಮನುಷ್ಯನನ್ನು ನಿಧಾನವಾಗಿ ಸಾವಿನತ್ತ ದೂಡುವ ತಂಬಾಕು ಸೇವನೆಯಿಂದ ದೂರವಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ (CDC) ಸದಸ್ಯ ಬಸವರಾಜ ಸಜ್ಜನ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಂಬಾಕು ಸೇವನೆ ಮತ್ತು ಅದರ ದುಷ್ಪರಿಣಾಮಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂಬಾಕು ಉತ್ಪನ್ನಗಳ ಮೇಲೆ 'ಕ್ಯಾನ್ಸರ್‌ಗೆ ಮೂಲ' ಎಂದು ಎಚ್ಚರಿಕೆ ನೀಡಿದ್ದರೂ, ಇಂದಿನ ಯುವ ಪೀಳಿಗೆ ಅದನ್ನು ನಿರ್ಲಕ್ಷಿಸುತ್ತಿದೆ. ಗುಟ್ಕಾ ಮತ್ತು ತಂಬಾಕು ಸೇವನೆಯನ್ನು ಆಧುನಿಕತೆಯ ಸಂಕೇತವೆಂದು (Latest style) ಭಾವಿಸಿರುವುದು ವಿಷಾದನೀಯ. ಇವುಗಳಿಂದ ಹೃದಯ ಸಮಸ್ಯೆ, ಉಸಿರಾಟದ ತೊಂದರೆ, ಬಂಜೆತನ, ದೃಷ್ಟಿಹೀನತೆ, ದಂತ ಕಾಯಿಲೆ ಹಾಗೂ ಪಾರ್ಶ್ವವಾಯುವಿನಂತಹ ಅಪಾಯಕಾರಿ ರೋಗಗಳು ಆವರಿಸುತ್ತವೆ ಎಂದು ಸಜ್ಜನ ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಸಾಬಣ್ಣ ಭಜಂತ್ರಿ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಪ್ಪಣ್ಣ ಗೋಗಿ, ದೇವಮ್ಮ ಬಡಿಗೇರ, ಸರಸ್ವತಿ ಭೀಮಶಂಕರ್ ಹಾಗೂ ಕಾಲೇಜಿನ ಬೋಧಕ ಮತ್ತು