ಯಾದಗಿರಿ | ದೇವಾಪುರ ಬಾಲಕಿಯರ ವಸತಿ ನಿಲಯಕ್ಕೆ ನ್ಯಾ.ಬಸವರಾಜ ಭೇಟಿ
ಸುರಪುರ: ತಾಲೂಕಿನ ದೇವಾಪುರ ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಸುರಪುರ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಗೌರವ ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ಸುರಪುರದ ಬಸವರಾಜ ಅವರು ಶನಿವಾರ ಸಾಯಂಕಾಲ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ವಸತಿ ನಿಲಯದಲ್ಲಿನ ಬಾಲಕಿಯರಿಂದ ವಸತಿ ನಿಲಯದಲ್ಲಿ ನೀಡುತ್ತಿರುವ ಉಪಹಾರ ಮತ್ತು ಆಹಾರದ ಕುರಿತು ಮಾಹಿತಿ ಪಡೆದರು. ಅಲ್ಲದೆ ವಸತಿ ನಿಲಯದಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು ಹಾಗೂ ಅಡುಗೆ ಕೋಣೆ ಮತ್ತು ಆಹಾರ ಧಾನ್ಯಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರಡ್ಡಿ ಮಾಲಿ ಪಾಟೀಲ್, ವಾರ್ಡನ್ ಶಾಂತಮ್ಮ ಉಪಸ್ಥಿತರಿದ್ದರು.
ಜಿ.ಪಂ ಸಿಇಓ ಲವಿಶ್ ಒರಡಿಯಾ ಭೇಟಿ :
ದೇವಾಪುರ ಗ್ರಾಮದಲ್ಲಿನ ಬಾಲಕಿಯರ ವಸತಿ ನಿಲಯಕ್ಕೆ ಶನಿವಾರ ಮಧ್ಯಾಹ್ನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವಿಶ್ ಒರಡಿಯಾ ಭೇಟಿ ನೀಡಿದ್ದಾರೆ.
ಅಡುಗೆ ಕೋಣೆ ಹಾಗೂ ದವಸ ಧಾನ್ಯಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ ವಸತಿ ನಿಯಲದಲ್ಲಿನ ವ್ಯವಸ್ಥೆಯ ಕುರಿತು ಬಾಲಕಿಯರಿಂದ ಮಾಹಿತಿ ಪಡೆದುಕೊಂಡರು ಮತ್ತು ಅಡುಗೆ ಸಿಬ್ಬಂದಿಗಳಿಂದ ವಿವರಣೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಇಒ ಬಸವರಾಜ ಸಜ್ಜನ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣಾಧಿಕಾರಿ ದಶರಥ ನಾಯಕ ಸಾಮಾಜಿಕ ಕಾರ್ಯಕರ್ತೆ ಮಂಜುಳಾ, ಸಕಿವನ್ ಸ್ಟಾಪ್ ಸೆಂಟರ್‌ನ ಮಾಲಾಶ್ರೀ, ಗ್ರಾ.ಕು.ನೀರು ಸರಬರಾಜು ಇಲಾಖೆ ಎಇಇ ಹಣಮಂತ್ರಾಯ ಪಾಟೀಲ್ ಸೇರಿದಂತೆ ಇತರರು ಇದ್ದರು.