×
Ad

‌ಯಾದಗಿರಿ| ಹತ್ತಿ ಖರೀದಿ ಕೇಂದ್ರಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ್ ಚಾಲನೆ

Update: 2025-11-03 17:06 IST

ಯಾದಗಿರಿ: ಯಾವುದೇ ರೈತರಿಗೆ ತೊಂದರೆಯಾಗದಂತೆಯೇ ಹತ್ತಿ ಖರೀದಿಸಬೇಕು ಎಂದು ಹತ್ತಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.  

ಎಪಿಎಂಸಿ ಯಾರ್ಡ್‌ನಲ್ಲಿರುವ ಶ್ರೀ ರಾಜೇಂದ್ರ ಅಗ್ರೊ ಇಂಡಸ್ಟ್ರೀಸ್ ಹತ್ತಿ ಮಿಲ್ ನಲ್ಲಿ‌ ಭಾರತೀಯ ಹತ್ತಿ ನಿಗಮವು ರೈತರಿಂದ ಖರೀದಿಸುವ ಹತ್ತಿ ಬೆಳೆ ವ್ಯಾಪಾರದ ಆರಂಭೋತ್ಸವಕ್ಕೆ  ಚಾಲನೆ ನೀಡಿ ಮಾತನಾಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಇಂದು ಒಂದು ದಿನ ರೈತರು ತರುವ ಹತ್ತಿಯನ್ನು ಯಾವುದೇ ರೀತಿಯ ನಿಯಮಗಳ ಹಚ್ಚಿ ಕಡಿಮೆ ದರದಲ್ಲಿ ತೆಗೆದುಕೊಳ್ಳದೇ ನಿಗದಿತ 8,110 ರೂ. ನೀಡಿ ಖರೀದಿಸಬೇಕೆಂದು ಹೇಳಿದರು.

ಈ ವೇಳೆ ಹತ್ತಿಯನ್ನು ಪರಿಶೀಲಿಸಿದ‌ ಶಾಸಕರು, ರೈತರಿಂದ ಮಾಹಿತಿ ಪಡೆದರು. ಈ ವೇಳೆ ಮಿಲ್  ಮಾಲಕರಾದ ಸುಮೇರ್ ಮಲ್ ಜೈನ್, ಮೀತೇಶ್‌ ಕುಮಾರ್‌ ಜೈನ್, ಪ್ರಶಾಂತ್‌ ಜೈನ್, ಬಸವರಾಜಪ್ಪ ದಳಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News