×
Ad

ಗುರುಮಠಕಲ್ ಪಟ್ಟಣದಲ್ಲಿ ತಾಲೂಕು ಪ್ರಜಾಸೌಧ ಅಡಿಗಲ್ಲು ಕಾರ್ಯಕ್ರಮಕ್ಕೆ ಶಾಸಕ ಶರಣಗೌಡ ಕಂದಕೂರ ಚಾಲನೆ

ಗುರುಮಠಕಲ್ ಕ್ಷೇತ್ರಾಭಿವೃದ್ಧಿಯೇ ನನ್ನ ಸಾಧನೆ : ಶಾಸಕ ಶರಣಗೌಡ ಕಂದಕೂರ

Update: 2025-09-07 19:30 IST

ಯಾದಗಿರಿ : ಕಳೆದ ಒಂದು ದಶಕದಿಂದ ಗುರುಮಠಕಲ್ ಅಭಿವೃದ್ಧಿಯ ಪಥ ಆರಂಭವಾಗಿದೆ. ಗುರುಮಠಕಲ್‌ನಲ್ಲಿ ಪ್ರಜಾಸೌಧ ನಿರ್ಮಾಣದಂತಹ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ವೇಗಗೊಂಡಿವೆ. ಸ್ವತಹಃ ಹಲವು ನಾಯಕರು ಸ್ವಯಂ ಆಗಿ ಗುರುಮಠಕಲ್ ಅಭಿವೃದ್ದಿ ಹೊಂದುತ್ತಿದೆ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಗುರುಮಠಕಲ್ ಪಟ್ಟಣದಲ್ಲಿ ಕಂದಾಯ ಇಲಾಖೆ ವತಿಯಿಂದ ಗುರುಮಠಕಲ್ ತಾಲೂಕು ಪ್ರಜಾಸೌಧ ಅಡಿಗಲ್ಲು ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿಯ ಪಥ ಆರಂಭವಾಗಿದೆ, ನಮ್ಮ ತಂದೆಯವರ ಕಾಲದಲ್ಲಿ 230 ಕೋಟಿ ರೂ. ವೆಚ್ಚದಲ್ಲಿ ಕೆರೆ ತುಂಬುವ ಯೋಜನೆಗಳು ಅಭಿವೃದ್ಧಿ ಕಂಡೆವು. ಇದರ ಜೊತೆಗೆ ಕ್ಷೇತ್ರದಲ್ಲಿ ರೈತರಿಗಾಗಿ ಜೆಸ್ಕಾಂ, ನೀರಾವರಿ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಯಿತು. ಇನ್ನೂ ನನಗೆ ಅವಕಾಶ ನೀಡಿದ ನಿಮಗೆ ಶ್ರೇಯಸ್ಸು ತರುವ ಕೆಲಸ ನಾನು ಮಾಡುತ್ತಿದ್ದೇನೆ ಎಂದು ಹೇಳಿದರು.

ಅದೇ ರೀತಿ ಗುರುಮಠಕಲ್ ಬೈಪಾಸ್ ರಸ್ತೆ,. ಗುರುಮಠಕಲ್ ಪಟ್ಟಣದಲ್ಲಿ 100 ಬೆಡ್ ಆಸ್ಪತ್ರೆಗಾಗಿ ಹಲವು ಬಾರಿ ನಾನು ಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ, ಹಿರಿಯರಾರ ಬಾಬುರಾವ್ ಅವರು ಸಹಕಾರ ನೀಡಿ ತಮ್ಮ ಮಂತ್ರಿಗಳಲ್ಲಿ ಈ ಕೆಲಸವಾಗುವಂತೆ ಸಹಕಾರ ಮಾಡಬೇಕು ಎಂದು ಕೇಳಿಕೊಂಡರು.

ಪ್ರಜಾಸೌಧ ನಿರ್ಮಾಣಕ್ಕೆ ಕೇವಲ ಅಡಿಗಲ್ಲು ನೆರವೇರಿಸಿಲ್ಲ. ಇದರ ಗುಣಮಟ್ಟದ ಕಾಮಗಾರಿ ನಡೆಯುವುದನ್ನು ಗಮನಿಸಲಾಗುವುದು, ಶೀಘ್ರದಲ್ಲಿಯೇ ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿಯೊಂದಿಗೆ ಕಟ್ಟಡವನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರ ಮಾತನಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಶಾಂತಗೌಡ ಬಿರಾದಾರ, ಪುರಸಭೆ ಅಧ್ಯಕ್ಷರಾದ ಜಯಶ್ರೀ ಪಾಟೀಲ್, ಪುರಸಭೆ ಪೌರಾಯುಕ್ತರಾದ ಭಾರತಿ ದಂಡೋತಿ, ಗೃಹ ಮಂಡಳಿ ಇಇ ವಿಜಯಕುಮಾರ ಭಂಡಾರೆ, ಎಇಇ ಗಿರೀಶ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಬಸವಂತರಾಯಗೌಢ ಸೈದಾಪೂರ, ವಿಶ್ವನಾಥರಡ್ಡಿ ಗೊಂದೆಡಗಿ, ಬಸಣ್ಣ ದೇವರಹಳ್ಳಿ, ಕೃಷ್ಣಾರಡ್ಡಿ ಪೊಲೀಸ್ ಪಾಟೀಲ್, ದೊಡ್ಡಣಗೌಡ ಅರಕೇರಾ, ಈಶ್ವರ ನಾಯಕ, ನರಸಪ್ಪ ಕವಡೆ, ತಾಯಪ್ಪ ಬದ್ದೇಪಲ್ಲಿ, ಜಯೇಂದ್ರ ಎಂಪಾಡ, ಪರಮರಡ್ಡಿ ಕಂದಕೂರ, ಲಕ್ಷ್ಮಣ ನಾಯಕ ಕೂಡ್ಲೂರು, ರವಿ ಪಾಟೀಲ ಹತ್ತಿಕುಣಿ, ಸಾಹೇಬಗೌಡ ಗೌಡಗೇರಾ ಇದ್ದರು.

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬೇಡಿ :

ನಾನು ಇಲ್ಲಿ ಆಯ್ಕೆಯಾಗಿ ಬಂದಿರುವುದು ಗುರುಮಠಕಲ್ ಅಭಿವೃದ್ಧಿಯ ವಿಷಯವನ್ನಿಟ್ಟುಕೊಂಡು. ಚುನಾವಣೆ ಸಮಯದಲ್ಲಿ ಕೇವಲ 15 ದಿನ ಮೊದಲು ನಾನು ರಾಜಕೀಯ ಮಾಡುತ್ತೇನೆ. ಎಲ್ಲರೂ ಅಷ್ಟೇ ಚುನಾವಣೆ ಸಮಯದಲ್ಲಿ ರಾಜಕೀಯ ಮಾಡಿ, ಅದು ಬಿಟ್ಟು ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬೇಡಿ, ಎಲ್ಲರೂ ಜನರ ಒಳಿತಾಗಿಯೇ ಕೆಲಸ ಮಾಡಬೇಕಿದೆ.

- ಶರಣಗೌಡ ಕಂದಕೂರ, ಗುರುಮಠಕಲ್ ಶಾಸಕರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News