×
Ad

ಯಾದಗಿರಿ| ನಗರಸಭೆ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ನೇಮಕಕ್ಕೆ ಸದಸ್ಯರ ಪಟ್ಟು; ಸಭೆಯಲ್ಲಿ 17 ವಿಷಯಗಳ ಬಗ್ಗೆ ಗಂಭೀರ ಚರ್ಚೆ

Update: 2025-08-01 23:18 IST

ಯಾದಗಿರಿ: ನಗರಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಕಾನೂನು ನಿಯಮದನ್ವಯ ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷರಾದ ಕು. ಲಲಿತಾ ಅನಪೂರ ಪ್ರಕಟಿಸಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಯಲ್ಲಿ ಸ್ಥಾಯಿ ಸಮಿತಿಗಳಿಗೆ ನೇಮಕಾತಿ ಮಾಡಲು ಸಾಧ್ಯವಿಲ್ಲ, ಅದಕ್ಕೆ ನೋಟಿಸ್ ನೀಡಿ ಮೂರು ದಿನಗಳ ನಂತರ ಮಾಡುವುದಾಗಿ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಸಭೆ ಆರಂಭವಾಗುತ್ತಿದ್ದಂತೆ ಈ ವಿಷಯದ ಬಗ್ಗೆ ಪ್ರಶ್ನೆ ಎತ್ತಿದ ಮಾಜಿ ಅಧ್ಯಕ್ಷ ಹಾಲಿ, ಸದಸ್ಯ ಸುರೇಶ ಅಂಬಿಗೇರ ಅವರು, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೇಮಕ ಮಾಡಿಯೇ ಸಭೆ ಮುಂದುವರೆಸುವಂತೆಯೇ ಪಟ್ಟು ಹಿಡಿದರು. ಇದಕ್ಕೆ ಧ್ವನಿಗೂಡಿಸಿದ ಇನ್ನೊಬ್ಬ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವಿಲಾಸ್ ಪಾಟೀಲ್, ಇದು ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದು ಮೊದಲು ಆ ಕೆಲಸ ಆಗಬೇಕೆಂದರು. ಆಗ ಕಾಂಗ್ರೆಸ್ ಸದಸ್ಯರಾದ ವೆಂಕಟರಡ್ಡಿ ಹೊನಕೇರಿ ಮತ್ತು ಚನ್ನಕೇಶವ ಬಾಣತಿಹಾಳ್, ಅಜಂಡಾದಂತೆಯೇ ಸಭೆ ನಡೆಯಲಿ. ನಗರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದರೇ ಸಭೆ ಸಾರ್ಥಕವಾಗುತ್ತದೆ ಎಂದರು. ಇದಕ್ಕೆ ಹಣಮಂತ ನಾಯಕ ಧ್ವನಿಗೂಡಿಸಿದರು. ಆಗ, ಅಧ್ಯಕ್ಷರು ಉತ್ತರ ನೀಡಿ, ಕಾನೂನು ನಿಯಮ ಪ್ರಕರಾ ಮಾಡುತ್ತೇವೆ ಎಂದು ಹೇಳಿದರೂ, ಪಟ್ಟು ಬಿಡದ ಸದಸ್ಯರಾದ ಸುರೇಶ ಅಂಬಿಗೇರ, ವಿಲಾಸ್ ಪಾಟೀಲ್, ಅಂಬಯ್ಯ ಶಾಬಾದಿ ಹಾಗೂ ಪ್ರಭಾವತಿ ಕಲಾಲ್ ಈಗಲೇ ಮಾಡಿ ಎಂದಾಗ ಆಕ್ರೋಶಗೊಂಡ ಅಧ್ಯಕ್ಷರು ಯಾವುದೇ ಕಾರಣಕ್ಕೂ ಕಾನೂನು ಮಿರಿ ಮಾಡುವುದಿಲ್ಲ ಎಂದರು.

ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಹಣಮಂತ ಇಟಗಿ, ಸಭೆಗೂ ಮುಂಚೆ ಈ ಬಗ್ಗೆ ಅಧ್ಯಕ್ಷರು ಚರ್ಚೆ ಮಾಡಿದ್ದಾರೆ. ಸಭೆ ನಂತರ ಮಾಡೊಣ ಎಂದರು. ಅಧ್ಯಕ್ಷರ ಸದಸ್ಯರ ಮಾ ತಿಗೆ ಉತ್ತರಿಸದೇ ಮುಂದಿನ 17 ಪ್ರಮುಖ ವಿಷಯಗಳ ಬಗ್ಗೆ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ನಗರಸಭೆ ವ್ಯಾಪ್ತಿಯ ವಾಣಿಜ್ಯ ತೆರಿಗೆ ಬೇಡಿಕೆ ಸದ್ಯ ಶೇ.2.5ರಷ್ಟು ಇದ್ದು, ಇದನ್ನು ಶೇ.1.9ಕ್ಕೆ ಕಡಿಮೆ ಮಾಡಬೇಕೆಂಬ ಕುರಿತು  ಚರ್ಚೆ ನಡೆಯಿತು. ಇಳಿಕೆ ಮಾಡಬೇಕೆ, ಬೇಡವೇ ಎಂಬ ಬಗ್ಗೆ ಅನೇಕ ಸದಸ್ಯರು ಪಕ್ಷ ಬೇದ ಮರೆತು ಚರ್ಚೆ ಮಾಡಿದಾಗ ಮಧ್ಯ ಪ್ರವೇಶಿಸಿದ ಪೌರಾಯುಕ್ತ ಉಮೇಶ್ ಚವ್ಹಾಣ, ಈ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯ ನಿರ್ಣಯ ಓದಿ ಹೇಳಿದರು. ನಗರದಲ್ಲಿ ಒಟ್ಟು ನಲವತ್ತು ಸಾವಿರ ಆಸ್ತಿಗಳಿವೆ. ಇದರಿಂದ ನಗರಸಭೆ 4.20 ಕೋಟಿ ರೂ. ತೆರಿಗೆ ಬರುತ್ತದೆ. ಈಗ ಕಡಿಮೆ ಮಾಡಿದರೇ 3 ಕೋಟಿ ರೂ. ಅಷ್ಟೆ ಸಂಗ್ರಹವಾಗುತ್ತದೆ ಇದರಿಂದ ನಿರ್ಹವಣೆಗೆ ತೊಂದರೆಯಾಗುತ್ತದೆ ಎಂದು ಹೇಳಿದಾಗ, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಮೇಲಾಧಿಕಾರಿಗಳಿಗೆ ಪತ್ರ ಬರೆದು ಒಂದು ನಿರ್ಧಾರಕ್ಕೆ ಬರೋಣ ಎಂಬ ಮಾತಿನೊಂದಿನೊಂದಿಗೆ ಚರ್ಚೆಗೆ ತೆರೆ ಎಳೆದರು. ಬಳಿಕ, ನಗರದ ಆಶ್ರಯ ಬಡಾವಣೆಗೆ ಸಂಬಂಧಿಸಿದ ಒಟ್ಟು 11 ಸರ್ವೆ ನಂಬರಗಳ ಹಾಗೂ 151ರಲ್ಲಿನ ನಿವೇಶನ ಹರಾಜು ಕುರಿತು ಚರ್ಚೆ ಆರಂಭಗೊಂಡು, ಅಲ್ಲಿ ನಡೆದಿರುವ ಅಕ್ರಮ ಹಾಗೂ ನಕಲಿ ದಾಖಲೆಗಳ ಬಗ್ಗೆ ಸುಧಿ೯ಘ ಚರ್ಚೆ ನಡೆಯಿತು. ಸುಮಾರು ಹೊತ್ತು ಅನೇಕ ಸದಸ್ಯರು ಈ ಬಗ್ಗೆ ಅವಲೋಕನ ಮಾಡಿ ಮಾತನಾಡಿದರು. 

10 ಕಾರ್ಮಿಕರನ್ನು ದಿನಗೂಲಿಯಂತೇ ತೆಗೆದುಕೊಳ್ಳಲು ಬೀಡಾಡಿ ದನಗಳ ಮತ್ತು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ, ಜಿಲ್ಲಾ ನಿವೃತ ಸರ್ಕಾರಿ ನೌಕರರ ಸಂಘಕ್ಕೆ ಜಾಗ ಮಂಜೂರು ಮಾಡುವ ಕುರಿತು, ಮಂಗಳಮುಖಿಯರಿಗೆ ಉಚಿತ ನಿದೇಶನ ಕೊಡುವ ಕುರಿತು ಸೇರಿದಂತೆಯೇ ಒಟ್ಟು 17 ವಿಷಯದ ಬಗ್ಗೆ ಸಂಜೆಯವರೆಗೂ ಚರ್ಚೆ ನಡೆಯುವ ಮೂಲಕ ಗುರುವಾರದ ನಗರಸಭೆ ಸದಸ್ಯರ ಸಾಮಾನ್ಯ ಸಭೆ ಕಾವೇರಿದ ವಾತವರಣದಲ್ಲಿಯೇ ಮುಗಿಯಿತು.

ಆಮೃತ ಯೋಜನೆ, ವಿದ್ಯುತ ಸಮಸ್ಯೆಗಳ ಬಗ್ಗೆಯೂ ಸಂಬಂಧ ಪಟ್ಟ ಇಲಾಖೆ ಅಧಿ ಕಾರಿಗಳ ಗಮನಕ್ಕೆ ಸಭೆಯಲ್ಲಿ ತರುವ ಮೂಲಕ ಪರಿಹಾರಕ್ಕೆ ಸೂಚಿಸಲಾಯಿತು. ವೇದಿಕೆ ಮೇಲೆ ನಗರಸಭೆ ಉಪಾಧ್ಯಕ್ಷೆ ರುಖಿಯಾ ಬೇಗಂ ಉಪಸ್ಥಿತರಿದ್ದರು.

ನಗರದ ಚಾಮಾ ಲೇಔಟ್‌ಗೆ ಹೊಂದಿಕೊಂಡಿರುವ ಸರ್ವೆ ನಂ.787 ನ ಒಟ್ಟು5 ಎಕರೆ 39 ಗುಂಟೆ ಜಾಗದ ಬಗ್ಗೆ ಆಡಳಿತ ಬಿಜೆಪಿ ಪಕ್ಷದ ಸದಸ್ಯರ, ಅಧ್ಯಕ್ಷರ, ಪೌರಾಯುಕ್ತ ಮತ್ತು ಕೆಲ ಕಾಂಗ್ರೆಸ್ ಸದಸ್ಯರ ನಡುವೆ ಭಾರಿ ಜಟಾಪಟಿಯೇ ನಡೆದು ಸಭೆಯಲ್ಲಿ ಕಾವೇರಿದ ವಾತಾವರಣವೇ ನಿರ್ಮಾಣಗೊಂಡಿತು. ಅಧ್ಯಕ್ಷರು ಈ ವಿಷಯ ಪ್ರಸ್ತಾಪಿಸುತ್ತಲೇ ಈ ಸ್ಥಳದ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಸಭೆಯಲ್ಲಿದ್ದ ವಿಲಾಸ ಪಾಟೀಲ್, ಪ್ರಭಾವತಿ ಕಲಾಲ್, ಅಂಬಯ್ಯ ಶಾಬಾದಿ, ದಾಸನಕೇರಿ ಇತರರು ಹೇಳುತ್ತಲೇ ಅದರ ಪ್ರತಿ ತೋರಿಸಿ, ಈ ಬಗ್ಗೆ ಚರ್ಚೆ ಬೇಡ ಎಂದು ಹೇಳಿದರು. ಆಗ ಮಧ್ಯ ಪ್ರವೇಶಿಸಿದ ಅಧ್ಯಕ್ಷೆ ಅನಪುರ, ಆ ಪ್ರತಿಯನ್ನು ನಗರಸಭೆ ಕಾನೂನು ಸಲಹೆಗಾರರಿಂದ ಓದಿಸಿ ಸ್ಪಷ್ಟನೆ ಬಯಸಿದರು. ಆಗ ರಂಗಮಂದಿರಕ್ಕೆ ಸೇರಿದ್ದ ನಗರಸಭೆಯ ಹೆಸರಲ್ಲಿ ಇರುವ 3 ಎಕರೆ ಭೂಮಿಗೆ ತಡೆಯಾಜ್ಞೆ ಸಿಕ್ಕಿರಬಹುದು. ಆದರೇ ಉಳಿದ ಎರಡು ಎಕರೆಗೆ ಅಲ್ಲ, ಅಲ್ಲಿ ರಾಜ್ಯ ಹೆದ್ದಾರಿ ರಸ್ತೆ ವಿಂಗಡನೆ ಸಮಯದಲ್ಲಿ ಮನೆಗಳನ್ನು ಕಳೆದುಕೊಂಡಿರುವ 28 ಫಲಾನುಭವಿಗಳಿಗೆ ನಿವೇಶನ ಹಂಚಲು ಯಾವ ತಕರಾರು ಇಲ್ಲ ಎಂದು ಹೇಳುತ್ತಲೇ ಬಿಜೆಪಿ ಆನೇಕ ಸದಸ್ಯರು ವಿರೋಧ ಪಡಿಸಿದರು. ಆಗ, ಮಾತನಾಡಿದ ಕಾಂಗ್ರೆಸ್ ಸದಸ್ಯ ಚನ್ನಕೇಶವ ಬಾಣತಿಹಾಳ್, ಈಗ ಇದು ಕೋರ್ಟ ಮೆಟ್ಟಿಲು ಹತ್ತಿದ್ದರಿಂದ ಅಲ್ಲಿ ಯಾರಿಗೆ ಪಾರ್ಟಿ ಮಾಡಿ ಹೆಸರು ಸೇರಿಸಿದ್ದಾರೋ ಅವರ ಗಮನ ಬರುವಂತೆಯೇ ಪತ್ರ ಬರೆದು ಮುಂದೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದರು.

ಆಗಲೂ ಒಪ್ಪದ ಕೆಲ ಸದಸ್ಯರ ಮಾತಿನಿಂದ ಮತ್ತೇ ಗರಂ ಆದ ಅಧ್ಯಕ್ಷರು ಪ್ರತಿಯೋಬ್ಬರ ವೈಯಕ್ತಿಕ ಹೇಳಿಕೆ ದಾಖಲಿಸಿ ತಿಳಿಸಿ ಮುಂದಿನ ವಿಷಯಕ್ಕೆ ಚಾಲನೆ ನೀಡಿದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News