×
Ad

ಪ್ರಿಯಾಂಕ್ ಖರ್ಗೆ ಕೇಂದ್ರ ಸರಕಾರವನ್ನು ಟೀಕಿಸುವ ಬದಲು ರೈತರಿಗೆ ನೆರವಾಗಲಿ : ಬಿ.ವೈ.ವಿಜಯೇಂದ್ರ

Update: 2025-09-30 19:30 IST

ಬಿ.ವೈ.ವಿಜಯೇಂದ್ರ

ಯಾದಗಿರಿ : ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸರಕಾರದ ವಿರುದ್ಧ ದಿನವೂ ಟೀಕೆ ಮಾಡುವುದನ್ನು ಬಿಟ್ಟು, ಮೊದಲು ತಮ್ಮದೇ ಮತಕ್ಷೇತ್ರವಾದ ಚಿತ್ತಾಪುರದ ರೈತರ ಕಣ್ಣೀರು ಒರೆಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಮಂಗಳವಾರ ಜಿಲ್ಲೆಯ ಬೆಳೆ ಹಾನಿ ಪ್ರದೇಶ ಮತ್ತು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿ, ಮಳೆ-ಬರದ ತೊಂದರೆ, ಪರಿಹಾರಕ್ಕಾಗಿ ಅಳಲು ತೋಡಿಕೊಳ್ಳುತ್ತಿರುವ ರೈತರ ಪರಿಸ್ಥಿತಿ ನೋಡದೆ, ಪ್ರಿಯಾಂಕ್ ಖರ್ಗೆ ಅವರು ಎಲ್ಲ ಖಾತೆಗಳ ಸಚಿವನಂತೆ ವರ್ತಿಸುತ್ತಿದ್ದಾರೆ. ತಮ್ಮ ಕ್ಷೇತ್ರದ ಜನರ ನೋವು ಮರೆತು, ಪ್ರಧಾನಿ ಮೋದಿ ಮತ್ತು ಕೇಂದ್ರದ ಬಗ್ಗೆ ಮಾತಾಡುವುದರಲ್ಲಿ ಮಾತ್ರ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಿಯಾಂಕ್ ಖರ್ಗೆ ಅವರು ನಿಜವಾಗಿಯೂ ಜನಪ್ರತಿನಿಧಿಯಾಗಿದ್ದರೆ, ಹಳ್ಳಿಗಳಲ್ಲಿ ಸುತ್ತಾಡಿ ರೈತರ ಗೋಳು ಕೇಳಬೇಕಿತ್ತು. ಆದರೆ, ಅವರು ಜನರ ಸಮಸ್ಯೆಯನ್ನು ಬದಿಗಿಟ್ಟು, ಕೇವಲ ರಾಜಕೀಯ ಪ್ರಚಾರವೇ ಮುಖ್ಯವೆಂದು ಅವರಿಗೆ ತೋರುತ್ತಿದೆ. ಚಿತ್ತಾಪುರದ ರೈತರು ನಿರೀಕ್ಷಿಸುವುದು ಮಾತುಗಳನ್ನಲ್ಲ, ಪರಿಹಾರವನ್ನು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News