×
Ad

ಕಲಾವಿದರ ಪ್ರತಿಭೆಗೆ ಹೆಚ್ಚು ಅವಕಾಶ ಲಭಿಸಲಿ: ಶಾಸಕ ವೇಣುಗೋಪಾಲ ನಾಯಕ

Update: 2025-12-28 20:10 IST

ಸುರಪುರ: ಈ ಭಾಗದ ಅನೇಕ ಜನ ಪ್ರತಿಭಾವಂತ ಕಲಾವಿದರಿಗೆ ಇನ್ನು ಹೆಚ್ಚು ಅವಕಾಶಗಳನ್ನ ಮುಂದಿನ ದಿನಗಳಲ್ಲಿ ನೀಡುವಲ್ಲಿ ಶ್ರಮಿಸುತ್ತೇನೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಕಲಾವಿದ ಹನುಮಂತ ಈರಗೊಟ ಅವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆ, ಸಂಸ್ಕೃತಿ ಮೇಲೆ ಜನರಿಗೆ ಹೆಚ್ಚು ಆಸಕ್ತಿ ಬರುತ್ತಿದ್ದು ಇಂತಹ ಕಲೆ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ನಾನು ನಿರಂತರವಾಗಿ ಶ್ರಮಿಸುತ್ತೇನೆ. ನಮ್ಮ ಭಾಗದ ಮೂಲ ಕಲಾವಿದರಿಗೆ ಸರ್ಕಾರ ಮಟ್ಟದಲ್ಲಿ ಗುರುತಿಸಲು ಶ್ರಮ ವಹಿಸುತ್ತೇನೆ ಎಂದು ಶಾಸಕರು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚನ್ನಬಸಪ್ಪ ಮುಧೋಳ ಮಾತನಾಡಿ, ನರಸಿಂಗಪೇಟ್ ಪರಿಸರಕ್ಕೆ ಜಾನಪದದ ಹಿನ್ನೆಲೆ ಇದೆ. ಇಲ್ಲಿ ಮೊಹರಂ ಸಂಭ್ರಮ, ಭಜನಾ ಸಂಭ್ರಮ,ಜಾನಪದ ಹಾಡುಗಳ ದೊಡ್ಡ ಸುಗ್ಗಿಯೇ ನಡೆಯುತ್ತದೆ. ಇಂತ ಒಬ್ಬ ಮೂಲ ದೇಶೀ ಪ್ರತಿಭೆ ಕಲಾವಿದನನ್ನು ಅಕಾಡೆಮಿ ಗುರುತಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಮ್ಮ ಸುರಪುರ ತಾಲೂಕಿನ ಅನೇಕ ಕಲಾವಿದರಿಗೆ ಸರಕಾರದ ವಿವಿಧ ಅಕಾಡೆಮಿಗಳ ವಾರ್ಷಿಕ ಮತ್ತು ಗೌರವ ಪ್ರಶಸ್ತಿಗಳು ಲಭಿಸುತ್ತಿರುವುದು ತುಂಬಾ ಉತ್ತಮ ಬೆಳವಣಿಗೆ ಮುಂದಿನ ದಿನಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿಶ್ವವಿದ್ಯಾಲಯದ ದತ್ತಿ ಗೌರವ ಪ್ರಶಸ್ತಿಗಳು ಕೂಡ ಈ ಭಾಗದ ಕಲಾವಿದರಿಗೆ ಲಭಿಸಲಿ. ಇಂತಹ ಮೂಲ ಕಲಾವಿದರನ್ನು ಪರಿಚಯಿಸುವ ಪುಸ್ತಕಗಳು ಅಕಾಡೆಮಿ ಮತ್ತು ಪ್ರಸಾರಂಗಗಳ ಮೂಲಕ ಎಂದು ಆಶಯ ವ್ಯಕ್ತಪಡಿಸಿದರು.

ಕುಂಬಾರಪೇಟದ ಶರಣಯ್ಯ ಮುತ್ಯ ಸಾನಿದ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಾನಪದ ಅಕಾಡೆಮಿ ಸದಸ್ಯ ಶಿವಮೂರ್ತಿ ತನಿಖೆದರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಭಾಚಿಮಟ್ಟಿ ನಗರಸಭ ಸದಸ್ಯ ಜುಮ್ಮಣ್ಣ, ಮುಖಂಡರಾದ ಮಲ್ಲಣ್ಣ ಸಾಹುಕಾರ ಮುಧೋಳ, ಅಬ್ದುಲ ಗಫಾರಿ ನಗನೂರಿ, ರಂಗನಗೌಡ ದೇವಿಕೇರಿ,ಬೀರಲಿಂಗಪ್ಪ ಬಾದ್ಯಾಪೂರ, ಷಣ್ಮುಖಯ್ಯ ಸ್ವಾಮಿ,ಶರಣಪ್ಪ ಮುಧೋಳ, ದೇವಪ್ಪ ಮುಧೋಳ, ಸೂಗಪ್ಪ ಗೊಬ್ಬುರ, ಅಕ್ಷಯ ಶೆಠ, ಶರಣಪ್ಪ ಹಂಗರಗಿ, ಸೇರಿದಂತೆ ಇತರರಿದ್ದರು, ಇದೇ ಸಂದರ್ಭದಲ್ಲಿ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಹನುಮಂತ ಈರಗೊಟ ದಂಪತಿಗಳಿಗೆ ವಿಶೇಷವಾಗಿ ಸನ್ಮಾನಿಸಲಾಯಿತು, ಬಸವರಾಜ ತನಿಕೆದಾರ ಪ್ರಾರ್ಥಿಸಿದರು ಕಾರ್ಯಕ್ರಮವನ್ನು ಬಸವಣ್ಣಪ್ಪ ಹಂಗರಗಿ ನಿರೂಪಿಸಿ ವಂದಿಸಿದರು,

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News