×
Ad

ಯಾದಗಿರಿ: ಗುರುಕುಲ ವಿದ್ಯಾಪೀಠದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ

Update: 2025-02-19 23:14 IST

ಸೈದಾಪುರ: ಶಿವಾಜಿ ಮಹಾರಾಜರ ಹೋರಾಟದ ಮನೋಭಾವ, ಧೈರ್ಯ, ಶೌರ್ಯದ ಗುಣಗಳು ಇಂದಿನ ಯುವಕರಿಗೆ ಸದಾ ಸ್ಪೂರ್ತಿಯಾಗಿವೆ ಎಂದು ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಛತ್ರಪತಿ ಶಿವಾಜಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

ಶಿವಾಜಿಯು ಅಪ್ರತಿಮ ವೀರ ಯೋಧ. ಧರ್ಮ ಸಂಸ್ಕೃತಿಗಳ ರಕ್ಷಕ. ಸ್ವಾಭಿಮಾನಿ ರಾಷ್ಟç ನಿರ್ಮಾಣಕ್ಕೆ ಹೋರಾಡಿದ ವೀರ. ದೇಶವನ್ನು ಮೊಘಲರು ಮತ್ತು ಪರಕೀಯರ ಆಡಳಿತದಿಂದ ಬಿಡುಗಡೆಗೊಳಿಸಿ ರಕ್ಷಿಸುವಲ್ಲಿ ಶಿವಾಜಿ ತೋರಿದ ಸಾಹಸಮಯ ಗುಣಗಳು ಇಂದು ಪ್ರತಿಯೊಬ್ಬರಿಗೂ ಆದರ್ಶವಾಗಿವೆ. ಧರ್ಮ ರಕ್ಷಣೆಗೆ ಅವರ ಕೊಡುಗೆ ಅಪಾರ. ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತರಿಗೆ ಪ್ರೇರಣದಾಯಕವಾಗಿವೆ. ಅವರ ಆದರ್ಶಗಳನ್ನು ಚಿಕ್ಕವರಿರುವಾಗಲೇ ಮನೆಯಲ್ಲಿ ಪೋಷಕರು, ತರಗತಿಗಳಲ್ಲಿ ಶಿಕ್ಷಕರು ತಿಳಿಸಿಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಮಹೇಶ್ವರಿ, ಮರಿಲಿಂಗಮ್ಮ, ಆಸೀಫಾ ನಬಿಚಾಂದ್, ಸಾನಿಯಾ ಸಮರೀನ್, ಸ್ವಾತಿ, ನಾಗಮ್ಮ, ಹೃತಿಕಾ, ಆನಂದು ಕೃಷ್ಣಾ, ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News